ETV Bharat / bharat

ಧೋನಿ ಫಾರ್ಮ್​ ಹೌಸ್​ ಡೈರಿಯಲ್ಲಿ ಪ್ರತಿ ದಿನ 500 ಲೀಟರ್​ ಹಾಲು.. ಲೀಟರ್​ಗೆ 55-130 ರೂ.ಗೆ ಮಾರಾಟ..

ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಧೋನಿಯ ಫಾರ್ಮ್​ಹೌಸ್​ನಿಂದ ವಿವಿಧ ನಗರಗಳಿಗೆ ಹಾಲು ರವಾನೆಯಾಗ್ತಿದೆ. ಪ್ರತಿ ಲೀಟರ್​ ಹಾಲಿಗೆ 55 ರಿಂದ 130 ರೂಪಾಯಿ ನಿಗದಿಯಾಗಿದೆ. ವಿಶೇಷವೆಂದರೆ ಗ್ರಾಹಕರ ಮನೆಗೆ ಹಾಲು ತಲುಪಿಸಲಾಗುತ್ತಿದೆ..

mahindra singh dhoni
mahindra singh dhoni
author img

By

Published : Sep 20, 2021, 7:55 PM IST

ರಾಂಚಿ(ಜಾರ್ಖಂಡ್​) : ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​​ ಮಹೇಂದ್ರ ಸಿಂಗ್ ಧೋನಿ ಸದ್ಯ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಮಾತ್ರ ಭಾಗಿಯಾಗ್ತಿದ್ದು, ಉಳಿದ ಸಂದರ್ಭದಲ್ಲಿ ಫಾರ್ಮ್​ಹೌಸ್​​ನಲ್ಲಿ ಕಾಲ ಕಳೆಯುತ್ತಿರುತ್ತಾರೆ. ಈ ವೇಳೆ ಡೈರಿ ಉತ್ಪನ್ನಗಳ ಬಗ್ಗೆ ಹೆಚ್ಚಿನ ಒಲವು ಹೊಂದಿರುವ ಮಾಹಿ, ತಮ್ಮ ಫಾರ್ಮ್​ ಹೌಸ್​ನಲ್ಲಿ ಡೈರಿ ಕೂಡ ಓಪನ್ ಮಾಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಫಾರ್ಮ್​ ಹೌಸ್​​..

ಆರಂಭದಲ್ಲಿ ಕೇವಲ 25-30 ಸುಧಾರಿತ ಹಸು ಹೊಂದಿದ್ದ ಮಹೇಂದ್ರ ಸಿಂಗ್​ ಧೋನಿ, ಇದೀಗ ಅದರ ಸಂಖ್ಯೆ 130ಕ್ಕೆ ಏರಿಕೆ ಮಾಡಿಕೊಂಡಿದ್ದಾರೆ.

ರಾಂಚಿಯಿಂದ ಸುಮಾರು 18 ಕಿಲೋ ಮೀಟರ್​​ ದೂರದಲ್ಲಿರುವ ಸ್ಯಾಂಬೋದಲ್ಲಿನ ಫಾರ್ಮ್​ಹೌಸ್​ನಲ್ಲಿ ಫ್ರಿಜೆನ್​, ಸ್ವರ್ಣಗಿರಿ ಮತ್ತು ಸಹಿವಾಲ್​ ಹಸುಗಳು ಇದ್ದು, ಪ್ರತಿ ದಿನ 500 ಲೀಟರ್​ ಹಾಲು ನೀಡುತ್ತವೆ. ಡೈರಿ ಹೌಸ್‌ನಿಂದ ಮಾರ್ಕೆಟಿಂಗ್​​ವರೆಗೆ ಎಲ್ಲ ಜವಾಬ್ದಾರಿ ಮಾಹಿ ನೋಡಿಕೊಳ್ಳುತ್ತಾರೆ.

ಇದನ್ನೂ ಓದಿರಿ: 14 ಟಿ20, 4 ಟೆಸ್ಟ್​ ಸೇರಿ 3 ಏಕದಿನ ಪಂದ್ಯ: 2021-22ನೇ ಸಾಲಿನ ಟೀಂ ಇಂಡಿಯಾ ವೇಳಾಪಟ್ಟಿ ರಿಲೀಸ್​

ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಧೋನಿಯ ಫಾರ್ಮ್​ಹೌಸ್​ನಿಂದ ವಿವಿಧ ನಗರಗಳಿಗೆ ಹಾಲು ರವಾನೆಯಾಗ್ತಿದೆ. ಪ್ರತಿ ಲೀಟರ್​ ಹಾಲಿಗೆ 55 ರಿಂದ 130 ರೂಪಾಯಿ ನಿಗದಿಯಾಗಿದೆ. ವಿಶೇಷವೆಂದರೆ ಗ್ರಾಹಕರ ಮನೆಗೆ ಹಾಲು ತಲುಪಿಸಲಾಗುತ್ತಿದೆ ಎಂದು ಆಯೋಜಕರಾದ ಸುಮನ್​​ ಯಾದವ್​ ತಿಳಿಸಿದ್ದಾರೆ.

ಡೈರಿ ಫಾರ್ಮ್​ನಿಂದ ಅನೇಕರಿಗೆ ಕೆಲಸ : ನಮೋ ಫಾರ್ಮ್​ ಹೌಸ್ ಹಾಗೂ ಡೈರಿಯಲ್ಲಿ ಪ್ರತಿದಿನ ಅನೇಕರು ಕೆಲಸ ಮಾಡ್ತಿದ್ದು, ಕೆಲವರು ಡೈರಿ ನೋಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಕೋಳಿ ಫಾರ್ಮ್​ ಹಾಗೂ ತರಕಾರಿ ಬೆಳೆಗಳ ಗದ್ದೆಯಲ್ಲಿ ಕೆಲಸ ಮಾಡ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.