ETV Bharat / bharat

'ಎಲ್ಲವೂ ಪ್ರೀತಿಗಾಗಿ'.. ಮಳೆಗಾಲದ ಮುಂಜಾವಿನಲ್ಲಿ ಮಗಳಿಗೆ ಮಹೇಶ್​ಬಾಬು ಬೆಚ್ಚಗಿನ ಅಪ್ಪುಗೆ.. - ತ್ರಿವಿಕ್ರಮ್ ಶ್ರೀನಿವಾಸ್

ನಮ್ರತಾ ಶಿರೋಡ್ಕರ್ ಅವರು, ನಟ ಮಹೇಶ್​ಬಾಬು ಹಾಗೂ ಮಗಳು ಸಿತಾರಾ ಘಟ್ಟಮನೇನಿ ಅವರೊಂದಿಗಿನ ಬೆಳಗ್ಗೆಯ ಒಂದು ಕ್ಷಣದ ಫೋಟೋವನ್ನು ಹಂಚಿಕೊಂಡಿದ್ದಾರೆ.

ಮಗಳೊಂದಿಗೆ ಮುದ್ದಾಡಿದ ನಟ ಮಹೇಶ್​ಬಾಬು
ಮಗಳೊಂದಿಗೆ ಮುದ್ದಾಡಿದ ನಟ ಮಹೇಶ್​ಬಾಬು
author img

By

Published : Jul 12, 2023, 3:52 PM IST

ಹೈದರಾಬಾದ್ : ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ಕುಟುಂಬದ ಮೇಲಿನ ಪ್ರೀತಿಗಾಗಿ ಪದೇ ಪದೆ ಸುದ್ದಿಯಾಗುತ್ತಾರೆ. ಅವರು ಮಗ ಗೌತಮ್ ಮತ್ತು ಮಗಳು ಸಿತಾರಾ ಘಟ್ಟಮನೇನಿ ಅವರಿಗೆ ಪ್ರೀತಿಯ ತಂದೆ ಮತ್ತು ಪತ್ನಿ ನಮ್ರತಾ ಶಿರೋಡ್ಕರ್ ಅವರಿಗೆ ನಿಷ್ಠಾವಂತ ಪತಿಯಾಗಿದ್ದಾರೆ. ಮಹೇಶ್ ಬಾಬು ಮತ್ತು ಅವರ ಕುಟುಂಬವು ಮುಂಜಾನೆಯ ಸಮಯ ಏಳುವುದಕ್ಕಾಗಿ 'ಎಚ್ಚರಗೊಳಿಸುವ ಮಂತ್ರ'ವನ್ನು ಅನುಸರಿಸುತ್ತದೆ. ಇಂದು (ಗುರುವಾರ) ಮಹೇಶ್ ಬಾಬು ಅವರ ಪತ್ನಿ ಮತ್ತು ನಟಿ ನಮ್ರತಾ ಶಿರೋಡ್ಕರ್ ಅವರು ನಟ ಮಹೇಶ್​ ಬಾಬು ಮತ್ತು ಅವರ ಮಗಳು ಸಿತಾರಾ ಸೋಫಾ ಕುರ್ಚಿಯ ಮೇಲೆ ಮುದ್ದಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿ ಮಹೇಶ್ ಮತ್ತು ಅವರ ಮಗಳು ಒಬ್ಬರನ್ನೊಬ್ಬರು ತಬ್ಬಿಕೊಂಡು ಮಳೆಗಾಲದ ಮುಂಜಾನೆಯಲ್ಲಿ ಬೆಚ್ಚಗಿನ ಅಪ್ಪುಗೆಯನ್ನು ಮಾಡಿದ್ದಾರೆ. ಈ ಕ್ಷಣವನ್ನು ಪತ್ನಿ ನಮ್ರತಾ ಅವರು ಸೆರೆಹಿಡಿದಿದ್ದಾರೆ. ನಾವು ಈ ತಂದೆ-ಮಗಳ ಪ್ರೀತಿಯ ಕ್ಷಣವನ್ನು ಕಂಡರೆ ಖಂಡಿತಾ ಮನಸೋಲುತ್ತೇವೆ.

ಮಹೇಶ್ ಬಾಬು ನೀಲಿ ಟೀ ಶರ್ಟ್ ಧರಿಸಿ ಸಿತಾರಾಳನ್ನು ತಮ್ಮ ತೋಳುಗಳಲ್ಲಿ ಹಿಡಿದಿರುವುದನ್ನು ಕಾಣಬಹುದು. ಅದು ಸ್ನ್ಯಾಪ್‌ನಿಂದ ಗೋಚರಿಸುವಂತೆ, ಅವಳು ಶಾಂತಿಯುತವಾಗಿ ಮಲಗಿದ್ದಾಳೆ. "ಬೆಳಗ್ಗೆ ಮುದ್ದಾಡುವುದು ಅತ್ಯಗತ್ಯ! ಇಲ್ಲದಿದ್ದರೆ ನಾವು ಏಳಲು ಸಾಧ್ಯವಿಲ್ಲ" ಎಂದು ನಮ್ರತಾ ಶಿರೋಡ್ಕರ್ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ. ಅವರು #wakeupmantra #babyinarms ಮತ್ತು #love ನಂತಹ ಹ್ಯಾಶ್‌ಟ್ಯಾಗ್‌ಗಳನ್ನು ಕೂಡ ನೀಡಿದ್ದಾರೆ.

ಮಕ್ಕಳೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತಾರೆ: ಚಿತ್ರವನ್ನು ಹಂಚಿಕೊಂಡ ಮಹೇಶ್​ ಬಾಬು ಪತ್ನಿ ನಮ್ರತಾ, ಮುಂಜಾನೆ ಮುದ್ದಾಡಿ ಶಾಲೆಗೆ ಹೊರಟ ಮಗಳು (ಮೂರು ಹೃದಯ ಕಣ್ಣುಗಳ ಎಮೋಜಿಗಳೊಂದಿಗೆ) ಎಂದು ಬರೆದಿದ್ದಾರೆ. "ಇದೆಲ್ಲವೂ ಪ್ರೀತಿಯ ಬಗ್ಗೆ, ಮಹೇಶ್ ಬಾಬು ಅವರು ಸೂಪರ್‌ಸ್ಟಾರ್ ಆಗಿರಬಹುದು. ಆದರೆ ನಟ ಯಾವಾಗಲೂ ತಮ್ಮ ಮಕ್ಕಳೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತಾರೆ ಎಂದು ಬರೆದುಕೊಂಡಿದ್ದಾರೆ.

ನಮ್ರತಾ ಶಿರೋಡ್ಕರ್ ಮಾಜಿ ಮಿಸ್ ಇಂಡಿಯಾ. ಮೇರೆ ದೋ ಅನ್ಮೋಲ್ ರತನ್, ಹೀರೋ ಹಿಂದೂಸ್ತಾನಿ, ಕಚ್ಚೆ ಧಾಗೆ, ಪುಕಾರ್, ಅಸ್ತಿತ್ವ, ಅಲ್ಬೇಲಾ, ಎಜುಪುನ್ನ ತಾರಕನ್, ವಂಶಿ, ವಾಸ್ತವ್: ದಿ ರಿಯಾಲಿಟಿ ಮತ್ತು ದಿಲ್ ವಿಲ್ ಪ್ಯಾರ್ ವ್ಯಾರ್‌ನಂತಹ ಹಲವಾರು ಹಿಂದಿ, ಕನ್ನಡ, ಮಲಯಾಳಂ ಮತ್ತು ತೆಲುಗು ಚಲನಚಿತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಚಿತ್ರದ ಶೂಟಿಂಗ್ ಪುನಾರಂಭ: ಮಹೇಶ್ ಬಾಬು ಪ್ರಸ್ತುತ ತ್ರಿವಿಕ್ರಮ್ ಶ್ರೀನಿವಾಸ್ ಅವರ ಮುಂಬರುವ ಚಿತ್ರ ಗುಂಟೂರ್ ಕಾರಂ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಒಂದು ದಶಕದ ನಂತರ ನಟ ಮತ್ತು ನಿರ್ದೇಶಕರ ಪುನರ್ಮಿಲನವನ್ನು ಈ ಚಿತ್ರ ಸೂಚಿಸುತ್ತದೆ. ಅವರು ಈ ಹಿಂದೆ ಅತ್ತಾಡು ಮತ್ತು ಖಲೇಜಾದಂತಹ ಹಿಟ್ ಚಿತ್ರಗಳಿಗೆ ಕೆಲಸ ಮಾಡಿದ್ದರು. ಹಲವಾರು ಅಡೆ ತಡೆಗಳ ನಂತರ ಈ ಚಿತ್ರದ ಶೂಟಿಂಗ್ ಪುನಾರಂಭಗೊಂಡಿದೆ. ಮುಂದಿನ ವರ್ಷ ಜನವರಿ 12 ರಂದು ಸಂಕ್ರಾಂತಿ ಸಂದರ್ಭದಲ್ಲಿ ಚಿತ್ರವು ಥಿಯೇಟರ್‌ಗೆ ಬರಲಿದೆ.

ಇದನ್ನೂ ಓದಿ: Shiva Rajkumar:''ನೀವ್ ಗನ್​ನಲ್ಲಿ ಹೆದರಿಸಿದ್ರೆ, ನಾನ್ ಬರೀ ಕಣ್ಣಲ್ಲೇ...ಒರಿಜಿನಲ್​ ಗ್ಯಾಂಗ್​ಸ್ಟರ್''

ETV Bharat Logo

Copyright © 2024 Ushodaya Enterprises Pvt. Ltd., All Rights Reserved.