ETV Bharat / bharat

'ಇಂಡಿಯಾ' ಸಭೆ ವೇಳೆಯೇ 'ಮಹಾಯುತಿ' ಸಭೆ ಯೋಜನೆ: ಸೀಟು ಹಂಚಿಕೆ ಬಗ್ಗೆ ಚರ್ಚೆ? - ಈಟಿವಿ ಭಾರತ ಕನ್ನಡ

'Mahayuti' meeting in Mumbai: ಇಂದು ಮತ್ತು ನಾಳೆ ಎರಡು ದಿನಗಳ ಕಾಲ 'ಮಹಾಯುತಿ' ಮೈತ್ರಿಕೂಟದ ಸಭೆಯು ಮುಂಬೈನಲ್ಲಿ ನಡೆಯಲಿದೆ.

mahayuti
ಮಹಾಯುತಿ
author img

By ETV Bharat Karnataka Team

Published : Aug 31, 2023, 10:08 AM IST

ಮುಂಬೈ: ವಿರೋಧ ಪಕ್ಷಗಳ ಒಕ್ಕೂಟ 'ಇಂಡಿಯಾ' ತನ್ನ ಮಹತ್ವದ ಸಭೆ ಆಯೋಜಿಸಿರುವ ಬೆನ್ನಲ್ಲೇ, ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಬಿಜೆಪಿ, ಶಿವಸೇನೆ (ಏಕನಾಥ್​ ಶಿಂಧೆ ನೇತೃತ್ವದಲ್ಲಿ), ಎನ್​ಸಿಪಿ ಮತ್ತು ಇತr ಎಲ್ಲ ಮಿತ್ರ ಪಕ್ಷಗಳನ್ನು ಒಳಗೊಂಡಿರುವ 'ಮಹಾಯುತಿ' ಮೈತ್ರಿಕೂಟದ ಸಭೆಯು ಮುಂಬೈನಲ್ಲಿ ನಡೆಯಲಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಸುಶೀಲ್​ ಶಿಂಧೆ, ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವಿಸ್​ ಮತ್ತು ಅಜಿತ್​ ಪವಾರ್​ ಸೇರಿದಂತೆ ಇತರ ಸಚಿವರು ಮತ್ತು ಪ್ರಮುಖ ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎನ್​ಸಿಪಿಯ ಅಜಿತ್​ ಪವಾರ್​ ಗುಂಪಿನ ನಾಯಕ ಸುನಿಲ್​ ತಟ್ಕರೆ ತಿಳಿಸಿದ್ದಾರೆ. 48 ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿಕೂಟದ ಭವಿಷ್ಯವನ್ನು ಪರಿಶೀಲಿಸಲು ಈ ಸಭೆ ನಡೆಸುತ್ತಿರುವುದಾಗಿ ಅವರು ವಿವರಿಸಿದ್ದಾರೆ.

ಎರಡು ದಿನಗಳ ಸಭೆ: ಪಾಟ್ನಾ ಮತ್ತು ಬೆಂಗಳೂರಿನ ನಂತರ ವಿಪಕ್ಷಗಳ ಮೈತ್ರಿಕೂಟದ 'ಇಂಡಿಯಾ'ದ ಮೂರನೇ ಸಭೆಯು ವಾಣಿಜ್ಯನಗರಿ ಮುಂಬೈನಲ್ಲಿ ನಡೆಯುತ್ತಿದೆ. 2024ರ ಚುನಾವಣೆಯಲ್ಲಿ ಗೆಲ್ಲಲು ಯಾವ ತಂತ್ರ ರೂಪಿಸಬೇಕು ಎಂಬುದರ ಕುರಿತು ಚರ್ಚಿಸಲು ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ನಡೆಯಲಿರುವ ಮೂರನೇ ಸಭೆಯಲ್ಲಿ ವಿಪಕ್ಷಗಳ ಮೈತ್ರಿಕೂಟದ ನಾಯಕರು ಭಾಗವಹಿಸಲಿದ್ದಾರೆ. ಈ ಬೆನ್ನಲ್ಲೇ 'ಮಹಾಯುತಿ' ಮೈತ್ರಿಕೂಟವೂ ಇದೇ ಎರಡು ದಿನದಂದು ಸಭೆಯನ್ನು ಆಯೋಜಿಸಿದ್ದು, ಕೆಲವೊಂದು ಮಹತ್ವದ ವಿಚಾರಗಳು ಚರ್ಚೆಯಾಗಲಿದೆ.

ಇದನ್ನೂ ಓದಿ: Maharashtra Politics: ಅಜಿತ್​ ನನ್ನ ಸೋದರ ಸಂಬಂಧಿ, ಭೇಟಿಯಲ್ಲಿ ತಪ್ಪೇನು?- ಶರದ್ ಪವಾರ್

ಪೂರ್ವ ಯೋಜಿತ ಸಭೆ.. ಮಹಾರಾಷ್ಟ್ರದ ಒಟ್ಟು 48 ಲೋಕಸಭಾ ಕ್ಷೇತ್ರಗಳ ಪರಾಮರ್ಶೆ ನಡೆಸುವುದು ಸಭೆಯ ಉದ್ದೇಶ ಎಂದು ಬಿಜೆಪಿ ನಾಯಕ ಪ್ರಸಾದ್​ ಲಾಡ್​ ಮಂಗಳವಾರ ತಿಳಿಸಿದ್ದರು. ಶಿವಸೇನೆ ಶಿಂಧೆ, ಬಿಜೆಪಿ, ಎನ್​ಸಿಪಿ ಮೈತ್ರಿಕೂಟದ ಸಭೆಯು ಇತರ ಎರಡು ಸಭೆಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಇದು ಪೂರ್ವ ಯೋಜಿತ ಸಭೆಯಾಗಿದೆ. ಕಳೆದ ಒಂದು ತಿಂಗಳಿಂದ ಈ ಸಭೆಯ ಯೋಜನೆ ರೂಪಿಸಲಾಗುತ್ತಿದೆ. ಮೈತ್ರಿಕೂಟದ ಎಲ್ಲ ನಾಯಕರಿಗೆ ಅನುಕೂಲಕರವಾಗಿ ಆಗಸ್ಟ್​ 31 ಮತ್ತು ಸೆಪ್ಟಂಬರ್​ 1 ರಂದು ಸಭೆಯನ್ನು ಆಯೋಜಿಸಲಾಗಿದೆ ಎಂದು ಸುನಿಲ್​ ತಟ್ಕರೆ ತಿಳಿಸಿದ್ದಾರೆ.

ಈ ಸಭೆಯಲ್ಲಿ ರಾಜ್ಯದ 48 ಲೋಕಸಭಾ ಕ್ಷೇತ್ರಗಳ ಪರಿಶೀಲನೆ ನಡೆಯಲಿದೆ. ಆದರೆ, ಸೀಟು ಹಂಚಿಕೆ ಕುರಿತು ಯಾವುದೇ ಚರ್ಚೆ ನಡೆಯುವುದಿಲ್ಲ ಎಂದು ತಟ್ಕರೆ ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ 10 ರಾಜಕೀಯ ಪಕ್ಷಗಳನ್ನು ಒಳಗೊಂಡಿರುವ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ 'ಮಹಾಯುತಿ' ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ: ಇಂದಿನಿಂದ ಮಾಯಾನಗರಿಯಲ್ಲಿ ಇಂಡಿಯಾದ ಮೂರನೇ ಸಭೆ.. ಪ್ರಧಾನಿ ಅಭ್ಯರ್ಥಿಗಾಗಿ ತಿಕ್ಕಾಟ, ಪೋಸ್ಟರ್​ನಲ್ಲಿ ಕೇಜ್ರಿವಾಲ್​ ನಾಪತ್ತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.