ETV Bharat / bharat

ಕಾಶ್ಮೀರದಲ್ಲಿ ನಡೆದಿದ್ದಕ್ಕೆ ಪಾಕಿಸ್ತಾನ ಮತ್ತು ಭಯೋತ್ಪಾದನೆ ಕಾರಣ : ಗುಲಾಂ ನಬಿ ಆಜಾದ್

author img

By

Published : Mar 20, 2022, 4:00 PM IST

ಕಾಶ್ಮೀರಿ ಪಂಡಿತರ ವಿರುದ್ಧ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಿ ಕಾಶ್ಮೀರ್ ಫೈಲ್ಸ್​ ಚಿತ್ರದ ವಿಚಾರವಾಗಿ ಬಂದ ಪ್ರತಿಕ್ರಿಯೆಗಳಿಗೆ ಅನುಗುಣವಾಗಿ ಗುಲಾಂ ನಬಿ ಆಜಾದ್​ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ..

Mahatma Gandhi was the biggest Hindu and secularist:  Ghulam Nabi Azad
ಕಾಶ್ಮೀರದಲ್ಲಿ ನಡೆದಿದ್ದಕ್ಕೆ ಪಾಕಿಸ್ತಾನ ಮತ್ತು ಭಯೋತ್ಪಾದನೆ ಕಾರಣ: ಗುಲಾಂ ನಬಿ ಆಜಾದ್

ಜಮ್ಮು, ಜಮ್ಮು ಕಾಶ್ಮೀರ : ಮಹಾತ್ಮ ಗಾಂಧಿ ಅವರು ದೊಡ್ಡ ಹಿಂದೂ ಮತ್ತು ಜಾತ್ಯಾತೀತವಾದಿ ಎಂದು ನಾನು ನಂಬುತ್ತೇನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಹಿಂದೆ ನಡೆದಿರುವುದಕ್ಕೆ ಪಾಕಿಸ್ತಾನ ಮತ್ತು ಭಯೋತ್ಪಾದನೆ ಕಾರಣವಾಗಿದೆ ಎಂದು ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ಜಮ್ಮುವಿನಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಮತ್ತು ಭಯೋತ್ಪಾದನೆ ಎಲ್ಲಾ ಹಿಂದೂಗಳು, ಕಾಶ್ಮೀರಿ ಪಂಡಿತರು, ಕಾಶ್ಮೀರಿ ಮುಸ್ಲಿಮರು, ಡೋಗ್ರಾಗಳ ಮೇಲೆ ಪರಿಣಾಮ ಬೀರಿದೆ ಎಂದು 1990ರ ಕಾಶ್ಮೀರಿ ಪಂಡಿತರ ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಗುಲಾಂ ನಬಿ ಆಜಾದ್ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಸ್ಪಷ್ಟನೆ ನೀಡಿದ್ದಾರೆ.

  • #WATCH ...Political parties may create a divide 24x7 on basis of religion, caste & other things; I'm not forgiving any party incl mine...Civil society should stay together. Justice must be given to everyone irrespective of caste, religion: Ghulam N Azad, Cong at an event in Jammu pic.twitter.com/2OCo76ny4x

    — ANI (@ANI) March 20, 2022 " class="align-text-top noRightClick twitterSection" data=" ">

ಕಾಂಗ್ರೆಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಧರ್ಮ, ಜಾತಿ ಮತ್ತು ಇತರ ವಿಷಯಗಳ ಆಧಾರದ ಮೇಲೆ ಎಲ್ಲಾ ಸಮಯದಲ್ಲಿಯೂ ಜನರನ್ನು ವಿಭಜಿಸಬಹುದು. ನಾಗರಿಕ ಸಮಾಜವು ಒಟ್ಟಾಗಿ ಇರಬೇಕು. ಜಾತಿ, ಧರ್ಮವನ್ನು ಲೆಕ್ಕಿಸದೆ ಎಲ್ಲರಿಗೂ ನ್ಯಾಯ ನೀಡಬೇಕು ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ಕಾಶ್ಮೀರಿ ಪಂಡಿತರ ವಿರುದ್ಧ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಿ ಕಾಶ್ಮೀರ್ ಫೈಲ್ಸ್​ ಚಿತ್ರದ ವಿಚಾರವಾಗಿ ಬಂದ ಪ್ರತಿಕ್ರಿಯೆಗಳಿಗೆ ಅನುಗುಣವಾಗಿ ಗುಲಾಂ ನಬಿ ಆಜಾದ್​ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ರಾಷ್ಟ್ರೀಯ ಉದ್ಯಾನವನಲ್ಲಿ ಖುಷಿಯ ಸಫಾರಿ : ಪ್ರವಾಸಿಗರ ಕಣ್ಮನಗಳಿಗೆ ಹಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.