ETV Bharat / bharat

ಶರದ್​ ಪವಾರ್​ ಮನೆ ಮೇಲೆ ಆಕ್ರೋಶಿತ ಸಾರಿಗೆ ನೌಕರರಿಂದ ಕಲ್ಲು, ಶೂಗಳ ತೂರಾಟ - ಎನ್​ಸಿಪಿ ಸಂಸದೆ ಸುಪ್ರಿಯಾ ಸುಳೆ

ರಾಜ್ಯ ಸರ್ಕಾರದಲ್ಲಿ ಸಾರಿಗೆ ನಿಗಮ ವಿಲೀನ ಮಾಡಬೇಕೆಂದು ಕಳೆದ ಐದು ತಿಂಗಳಿಂದ ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಶುಕ್ರವಾರ ನಡೆಸುತ್ತಿದ್ದ ಪ್ರತಿಭಟನೆ ಭುಗಿಲೆದ್ದಿತು.

ಶರದ್​ ಪವಾರ್​ ಮನೆ ಮೇಲೆ  ನೌಕರರಿಂದ ಕಲ್ಲು ತೂರಾಟ

author img

By

Published : Apr 8, 2022, 8:05 PM IST

Updated : Apr 8, 2022, 8:21 PM IST

ಮುಂಬೈ(ಮಹಾರಾಷ್ಟ್ರ): ರಾಜ್ಯ ಸರ್ಕಾರದೊಂದಿಗೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ (ಎಂಎಸ್​ಆರ್​​ಟಿಸಿ) ವಿಲೀನ ಮಾಡಬೇಕೆಂದು ಆಗ್ರಹಿಸಿ ಹೋರಾಟ ನಡೆಸುತ್ತಿರುವ ಸಾರಿಗೆ ನೌಕರರು ಎನ್​ಸಿಪಿ ವರಿಷ್ಠ ಶರದ್​ ಪವಾರ್​ ಮನೆ ಮೇಲೆ ಕಲ್ಲು ಮತ್ತು ಶೂಗಳ ತೂರಾಟ ನಡೆಸಿದ್ದಾರೆ. ಇದರಿಂದ ಪವಾರ್​ ನಿವಾಸಕ್ಕೆ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದಾರೆ.

ರಾಜ್ಯ ಸರ್ಕಾರದಲ್ಲಿ ಸಾರಿಗೆ ನಿಗಮ ವಿಲೀನ ಮಾಡಬೇಕೆಂದು ಕಳೆದ ಐದು ತಿಂಗಳಿಂದ ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಶುಕ್ರವಾರ ನಡೆಸುತ್ತಿದ್ದ ಪ್ರತಿಭಟನೆಯು ಭುಗಿಲೆದ್ದಿತು. ಆರಂಭದಲ್ಲಿ ನೌಕರರು ಸಣ್ಣ ಗುಂಪಾಗಿ ಶರದ್ ಪವಾರ್​ ಮನೆಯತ್ತ ಬಂದಿದ್ದಾರೆ. ನಂತರ ಮನೆ ಸಮೀಪ ಇಟ್ಟಿದ್ದ ಬ್ಯಾರಿಕೇಡ್​ಗಳನ್ನು ಕೆಡವಿ ಘೋಷಣೆಗಳನ್ನು ಕೂಗಲು ಶುರು ಮಾಡಿದ್ದಾರೆ. ಇದರಿಂದ ಕ್ಷಣಕಾಲ ಪೊಲೀಸರೇ ದಂಗಾಗಿದ್ದಾರೆ. ಬಳಿಕ ಮಹಿಳೆಯರು ಸೇರಿದಂತೆ ಆಕ್ರೋಶಿತ ನೌಕರರು ಮನೆಯ ಮೇಲೆ ಕಲ್ಲು ಮತ್ತು ಶೂಗಳ ತೂರಾಟ ಮಾಡಿದ್ದಾರೆ.

ಶರದ್​ ಪವಾರ್​ ಮನೆ ಮೇಲೆ ಆಕ್ರೋಶಿತ ಸಾರಿಗೆ ನೌಕರರಿಂದ ಕಲ್ಲು, ಶೂಗಳ ತೂರಾಟ

ಈ ವೇಳೆ ಮನೆಯಲ್ಲಿದ್ದ ಶರದ್ ಪವಾರ್ ಪುತ್ರಿ, ಸಂಸದೆ ಸುಪ್ರಿಯಾ ಸುಳೆ ಮನೆಯಿಂದ ಹೊರ ಬಂದು, ಹಿಂಸಾತ್ಮಾಕ ಪ್ರತಿಭಟನೆ ನಿಲ್ಲಿಸುವಂತೆ ಕೈಮುಗಿದು ನೌಕರರ ಬಳಿ ಮನವಿ ಮಾಡಿದ್ದಾರೆ. ಮನೆಯಲ್ಲಿ ನನ್ನ ಪೋಷಕರು, ಮಕ್ಕಳು ಇದ್ದಾರೆ. ಕಲ್ಲು ತೂರಾಟವನ್ನು ಮಾಡಬೇಡಿ. ಶಾಂತರಾಗಿ, ಶಾಂತರಾಗಿ ಎಂದು ಎರಡೂ ಕೈಜೋಡಿಸಿ ತಮ್ಮ ಸುತ್ತಲು ನೆರೆದಿದ್ದ ಅಂತ ನೌಕರರಿಗೆ ಕೇಳಿಕೊಂಡಿದ್ದಾರೆ.

ಇನ್ನು, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವರಾಗಿರುವ ಶರದ್ ಪವಾರ್ ನಿವಾಸವು ಬಿಗಿ ಭದ್ರತೆಯಿಂದ ಕೂಡಿರುತ್ತದೆ. ಅಲ್ಲದೇ, ಝೆಡ್​ ಪ್ಲಸ್​ ಭದ್ರತೆ ಇದ್ದರೂ ನೌಕರರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಇದಕ್ಕೆ ಭದ್ರತಾ ವೈಫಲ್ಯ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: ಬ್ಯಾಂಕಲ್ಲ, 60 ಅಡಿ ಉದ್ದದ ಸೇತುವೆಯನ್ನೇ ಕದ್ದ ದರೋಡೆಕೋರರು! ಬಿಹಾರದಲ್ಲೊಂದು ವಿಚಿತ್ರ ಕಳವು

Last Updated : Apr 8, 2022, 8:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.