ಕುರಿ ಕಾಯೋ ಕುಟುಂಬದ ಬಾಲಕನಿಗೆ SSLCಯಲ್ಲಿ 91% ಅಂಕ - ಕುರಿ ಕಾಯೋ ಕುಟುಂಬದ ಬಾಲಕ SSLC ಯಲ್ಲಿ ಶೇ 91
ಕಲ್ಲುಬಂಡೆಗಳಿಂದ ಕೂಡಿದ ಪ್ರದೇಶಕ್ಕೆ ವಾಹನ ಸಿಗದ ಕಾರಣ ಪ್ರತಿದಿನ 10 ಕಿ.ಮೀ ನಡೆದುಕೊಂಡೇ ಶಾಲೆಗೆ ಹೋಗಿ ಮನೆಗೆ ಮರಳುತ್ತಿದ್ದ ಹೇಮಂತ್ ಈ ಸಾಧನೆ ಮಾಡಿದ್ದಾನೆ.
ಸಾಂಗ್ಲಿ (ಮಹಾರಾಷ್ಟ್ರ): ಬಡತನವು ಕನಸುಗಳನ್ನು ನನಸಾಗಿಸಲು ಹಲವರಿಗೆ ಅಡ್ಡಿಯಾಗಿರಬಹುದು. ಆದರೆ, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಈ ಕುರುಬನ ಮಗನ ವಿಷಯದಲ್ಲಿ ಹಾಗಾಗಿಲ್ಲ. ಕಡು ಬಡತನ ಮತ್ತು ಒರಟಾದ ಭೂಪ್ರದೇಶದ ಸವಾಲುಗಳ ಹೊರತಾಗಿಯೂ ಹೇಮಂತ್ ಮುಧೆ ಎನ್ನುವ ಬಾಲಕ ತನ್ನ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಶೇ 91 ಅಂಕ ಗಳಿಸಿದ್ದಾನೆ.
ಕಲ್ಲುಬಂಡೆಗಳಿಂದ ಕೂಡಿದ ಪ್ರದೇಶಕ್ಕೆ ವಾಹನ ಸಿಗದ ಕಾರಣ ಪ್ರತಿದಿನ 10 ಕಿ.ಮೀ ನಡೆದುಕೊಂಡೇ ಶಾಲೆಗೆ ಹೋಗಿ ಮನೆಗೆ ಮರಳುತ್ತಿದ್ದ ಹೇಮಂತ್ ಈ ಸಾಧಕ. ತಂದೆ-ತಾಯಿ ಇಬ್ಬರೂ ಕುರುಬರು ಮತ್ತು ಬಡ ಕುಟುಂಬ. ಜೀವನೋಪಾಯಕ್ಕಾಗಿ ಮೇಕೆ ಮತ್ತು ಕುರಿಗಳನ್ನು ಇವರು ಸಾಕುತ್ತಿದ್ದಾರೆ.
ಬಾಲಕನಿಗೆ ಬಿಜೆಪಿ ಶಾಸಕ ಗೋಪಿಚಂದ್ ಪಡಲ್ಕರ್ ಮತ್ತು ಮಾಜಿ ಕೃಷಿ ಸಚಿವ ಸದ್ಭೌ ಖೋಟ್ ಸೇರಿದಂತೆ ವಿವಿಧ ವಲಯಗಳಿಂದ ಪ್ರಶಂಸೆ ಸಿಗುತ್ತಿದೆ.
ಇದನ್ನೂ ಓದಿ: ಮೊಸಳೆ ಹಿಡಿದು ಮನೆಗೆ ತಂದಿದ್ದರಂತೆ! 1ನೇ ತರಗತಿ ಪಠ್ಯದಲ್ಲಿದೆ ಬಾಲ ಮೋದಿಯ ಸಾಹಸ