ETV Bharat / bharat

'ಮಹಾ' ಕೊರೊನಾ ಅಟ್ಟಹಾಸ: ನಾಗ್ಪುರದಲ್ಲಿ ಲಾಕ್​​ಡೌನ್​, ರಸ್ತೆಗಳು ಖಾಲಿ ಖಾಲಿ - ನಾಗ್ಪುರ ಕೊರೊನಾ

ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್​ ಹಾವಳಿ ಜಾಸ್ತಿ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ನಾಗ್ಪುರದಲ್ಲಿ 1 ವಾರಗಳ ಕಾಲ ಲಾಕ್​​ಡೌನ್​ ಮಾಡಿ ಆದೇಶಿಸಿದೆ.

Maharashtra
ಮಹಾರಾಷ್ಟ್ರ
author img

By

Published : Mar 15, 2021, 8:32 AM IST

Updated : Mar 15, 2021, 8:51 AM IST

ನಾಗ್ಪುರ: ಕೊರೊನಾ ಪ್ರಕರಣ ದಿನೇ ದಿನೆ ದೇಶದಲ್ಲಿ ಏರಿಕೆಯಾಗುತ್ತಿದೆ. ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಈಗಾಗಲೇ 23, 14,4.13 ಕೊರೊನಾ ಕೇಸುಗಳು ಪತ್ತೆಯಾಗಿದೆ.

ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್​ ಹಾವಳಿ ಜಾಸ್ತಿ ಆಗುತ್ತಿದ್ದು, ಸೋಂಕಿತರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಗ್ಪುರದಲ್ಲಿ ಅಲ್ಲಿನ ಸರ್ಕಾರ ಇಂದಿನಿಂದ1 ವಾರಗಳ ಕಾಲ ಲಾಕ್​​ಡೌನ್​ ಜಾರಿ ಮಾಡಿ ಆದೇಶಿಸಿದೆ.

ಇದನ್ನು ಓದಿ: ಸಿಲಿಕಾನ್​ ಸಿಟಿಯಲ್ಲಿ ಶೀಘ್ರವೇ ದೇಶದ ಮೊದಲ 'ಎಸಿ ರೈಲು ನಿಲ್ದಾಣ' ನಾಡಿಗೆ ಸಮರ್ಪಣೆ: ಕೇಂದ್ರ ಸಚಿವ

ಇಂದಿನಿಂದ ಆದೇಶ ಜಾರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ರಸ್ತೆಗಳು ಬಿಕೋ ಎನ್ನುತ್ತಿವೆ. ರಸ್ತೆಗಳ ಮೇಲೆ ಜನ ಕಾಣಿಸಿಕೊಳ್ಳುತ್ತಿಲ್ಲ. ಮಹಾರಾಷ್ಟ್ರದಲ್ಲಿ ನಿನ್ನೆ ಈ ವರ್ಷದ ಗರಿಷ್ಠ 16,620 ಹೊಸ ಕೋವಿಡ್​ -19 ಪ್ರಕರಣಗಳು ದಾಖಲಾಗಿದೆ.

Maharashtra
ದಾದರ್​ ಮಾರುಕಟ್ಟೆ ಪ್ರದೇಶದಲ್ಲಿ ಜನಸಂದಣಿ

ಆದರೆ ಇಲ್ಲಿನ ದಾದರ್​ ಮಾರುಕಟ್ಟೆ ಪ್ರದೇಶದಲ್ಲಿ ಜನಸಂದಣಿ ಕಂಡುಬಂದಿದೆ. ಕೊರೊನಾ ಮುಂಜಾಗೃತಾ ಕ್ರಮವಾಗಿ ಸರ್ಕಾರ ನಾಗ್ಪುರವನ್ನು ಲಾಕ್​ಡೌನ್ ಮಾಡಿ ಆದೇಶ ನೀಡಿದ್ದರೂ ಸಹ ದಾದರ್​ ಮಾರುಕಟ್ಟೆಯಲ್ಲಿ ಜನಸ್ತೋಮವೇ ಕಂಡುಬಂತು.

Last Updated : Mar 15, 2021, 8:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.