ETV Bharat / bharat

ಏರುಗತಿಯಲ್ಲೇ ಸಾಗಿದ ಕೋವಿಡ್​: ಮಹಾರಾಷ್ಟ್ರದಲ್ಲಿ ದಾಖಲೆಯ 49,447 ಹೊಸ ಕೇಸ್ ಪತ್ತೆ​! - Covid update news

ಎರಡನೇ ಹಂತದ ಕೊರೊನಾ ಅಲೆ ಮಹಾರಾಷ್ಟ್ರದಲ್ಲಿ ಜೋರಾಗಿ ಬೀಸುತ್ತಿದೆ. ಈ ಹಿಂದಿನ ಎಲ್ಲ ದಾಖಲೆ ಬ್ರೇಕ್​ ಮಾಡಿ ಕೋವಿಡ್ ಕೇಸ್​ಗಳು ಇಂದು ಪತ್ತೆಯಾಗಿವೆ.

Maharashtra Covid
Maharashtra Covid
author img

By

Published : Apr 3, 2021, 9:11 PM IST

ಮುಂಬೈ: ಮಹಾಮಾರಿ ಕೊರೊನಾ ವೈರಸ್​ ಮಹಾರಾಷ್ಟ್ರದಲ್ಲಿ ಪ್ರತಿದಿನ ಏರುಗತಿಯಲ್ಲೇ ಸಾಗಿದ್ದು, ಈ ಹಿಂದಿನಿಗಿಂತಲೂ ಅತ್ಯಧಿಕ ಸೋಂಕಿತ ಪ್ರಕರಣ ಇಂದು ದಾಖಲಾಗಿದ್ದು, ಈ ಮೂಲಕ ಹಿಂದಿನ ರೆಕಾರ್ಡ್​ ಬ್ರೇಕ್​ ಆಗಿದೆ.

ಕಳೆದ 24 ಗಂಟೆಯಲ್ಲಿ ದಾಖಲೆಯ 49,447 ಸೋಂಕಿತ ಪ್ರಕರಣ ದಾಖಲಾಗಿದ್ದು, ಇಷ್ಟೊಂದು ಪ್ರಕರಣ ಈ ಹಿಂದೆ ಯಾವತ್ತೂ ದಾಖಲಾಗಿಲ್ಲ. ಜತೆಗೆ ಒಂದೇ ದಿನ 227 ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರದಲ್ಲಿ ಸದ್ಯ 21,57,135 ಜನರು ಹೋಂ ಕ್ವಾರಂಟೈನ್​​ನಲ್ಲಿದ್ದು, 18,994 ಜನರು ಇನ್ಸ್​ಟಿಟ್ಯೂಷನಲ್ ಕ್ವಾರಂಟೈನ್​ಗೊಳಗಾಗಿದ್ದಾರೆ. ಸದ್ಯ ರಾಜ್ಯದಲ್ಲಿ 4,01,172 ಸಕ್ರಿಯ ಪ್ರಕರಣಗಳಿವೆ. ವಾಣಿಜ್ಯ ನಗರಿ ಮುಂಬೈನಲ್ಲಿ 9 ಸಾವಿರ ಕೋವಿಡ್​ ಪ್ರಕರಣ ದಾಖಲಾಗಿದ್ದು, 27 ಜನರು ಸಾವನ್ನಪ್ಪಿದ್ದಾರೆ. ಪುಣೆಯಲ್ಲಿ 10,873 ಕೋವಿಡ್​ ಪ್ರಕರಣ ಕಾಣಿಸಿಕೊಂಡಿದ್ದು, 52 ಜನರು ಸಾವನ್ನಪ್ಪಿದ್ದು, ನಾಗ್ಪುರ್​​ದಲ್ಲಿ 3,720 ಕೇಸ್ ದಾಖಲಾಗಿವೆ.

ಈ ಕುರಿತು ಶುಕ್ರವಾರ ಮಾತನಾಡಿದ್ದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಇದೇ ರೀತಿಯ ಪರಿಸ್ಥಿತಿ ಮುಂದುವರೆದರೆ ಲಾಕ್​ಡೌನ್​ ಮಾಡಲಾಗುವುದು ಎಂಬ ಎಚ್ಚರಿಕೆ ಸಹ ನೀಡಿದ್ದಾರೆ. ಇದರ ಮಧ್ಯೆ ಮತ್ತಷ್ಟು ಹೆಚ್ಚಿನ ಕೋವಿಡ್ ಸಂಖ್ಯೆ ದಾಖಲಾಗಿದ್ದು, ಆತಂತ ಮೂಡಿಸಿದೆ. ಈಗಾಗಲೇ ಪುಣೆಯಲ್ಲಿ ಸಂಜೆ 6 ರಿಂದ ಬೆಳಗ್ಗೆ 6ರವರೆಗೆ ಕರ್ಫ್ಯೂ ವಿಧಿಸಲಾಗಿದೆ.

ಇದನ್ನೂ ಓದಿ: ಫೋನ್​ ಕಾಲ್​​ನಲ್ಲಿ ಬ್ಯುಸಿ: ಮಹಿಳೆಗೆ ಒಂದೇ ಸಲಕ್ಕೆ ಎರಡು ಡೋಸ್​ ಕೋವಿಡ್​ ಲಸಿಕೆ ನೀಡಿದ ಯುಪಿ ನರ್ಸ್​

ಉಳಿದಂತೆ ಪಂಜಾಬ್​ನಲ್ಲಿ 2,705 ಕೇಸ್​, ಉತ್ತರಾಖಂಡ್​ನಲ್ಲಿ 439 ಪ್ರಕರಣ, ಆಂಧ್ರಪ್ರದೇಶದಲ್ಲಿ 1,398 ಸೋಂಕಿತ ಪ್ರಕರಣ, ಹರಿಯಾಣದಲ್ಲಿ 1959 ಸೋಂಕಿತರು ಹಾಗೂ ದೆಹಲಿಯಲ್ಲಿ 3,567 ಕೋವಿಡ್​ ಕೇಸ್​ಗಳು ದಾಖಲಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.