ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ ವೈರಸ್ನ ಎರಡನೇ ಅಲೆ ನಿಯಂತ್ರಣಕ್ಕೆ ಬರುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಕಳೆದ 24 ಗಂಟೆಯಲ್ಲಿ ದಾಖಲೆಯ 55,469 ಕೋವಿಡ್ ಕೇಸ್ ದಾಖಲಾಗುವ ಮೂಲಕ ಈ ಹಿಂದಿನ ಎಲ್ಲ ದಾಖಲೆ ಬ್ರೇಕ್ ಆಗಿದೆ.
-
Maharashtra reports 55,469 new COVID cases, 34,256 recoveries, and 297 deaths in the last 24 hours
— ANI (@ANI) April 6, 2021 " class="align-text-top noRightClick twitterSection" data="
Total cases: 31,13,354
Active cases: 4,72,283
Total recoveries: 25,83,331
Death toll: 56,330 pic.twitter.com/j1PTwmpK1E
">Maharashtra reports 55,469 new COVID cases, 34,256 recoveries, and 297 deaths in the last 24 hours
— ANI (@ANI) April 6, 2021
Total cases: 31,13,354
Active cases: 4,72,283
Total recoveries: 25,83,331
Death toll: 56,330 pic.twitter.com/j1PTwmpK1EMaharashtra reports 55,469 new COVID cases, 34,256 recoveries, and 297 deaths in the last 24 hours
— ANI (@ANI) April 6, 2021
Total cases: 31,13,354
Active cases: 4,72,283
Total recoveries: 25,83,331
Death toll: 56,330 pic.twitter.com/j1PTwmpK1E
ವಾಣಿಜ್ಯ ನಗರಿ ಮುಂಬೈನಲ್ಲೇ 10,030 ಕೋವಿಡ್ ಪ್ರಕರಣ ದಾಖಲಾಗಿದ್ದು, 31 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಕಳೆದ ಅಕ್ಟೋಬರ್ ನಂತರ ಅತಿ ಹೆಚ್ಚು ಜನರು ಸಾವನ್ನಪ್ಪಿರುವುದು ಇಂದೇ ಎಂದು ತಿಳಿದು ಬಂದಿದೆ. ಸದ್ಯ ಮಹಾರಾಷ್ಟ್ರದಲ್ಲಿ 31,13,354 ಕೋವಿಡ್ ಪ್ರಕರಣಗಳಿದ್ದು, ಇದರಲ್ಲಿ 4,72,283 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ 56,330 ಜನರು ಸಾವನ್ನಪ್ಪಿದ್ದಾರೆ. ನಿತ್ಯ ಅತಿ ಹೆಚ್ಚು ಕೋವಿಡ್ ಪ್ರಕರಣ ಕಾಣಿಸಿಕೊಳ್ಳುತ್ತಿರುವ ಕಾರಣ ಆಸ್ಪತ್ರೆಗಳಲ್ಲಿ ಹಾಸಿಗೆ ಸಮಸ್ಯೆ ಉಲ್ಭಣಗೊಂಡಿದ್ದು, ರೋಗಿಗಳು ಆಕ್ಸಿಜನ್ ಸಿಗದೇ ಪರದಾಡುತ್ತಿದ್ದಾರೆ.
ಇದನ್ನೂ ಓದಿ: ಎಸಿಬಿ ದಾಳಿ: ಸ್ಟವ್ ಮೇಲಿಟ್ಟು ಐದು ಲಕ್ಷ ನಗದು ಸುಟ್ಟುಹಾಕಿದ ಭೂಪ... ಎಲ್ಲಿ ಅಂತೀರಾ?
ಪ್ರಮುಖವಾಗಿ ಪುಣೆ, ಮುಂಬೈ, ಥಾಣೆ, ನಾಗ್ಪುರ್, ನಾಶಿಕ್, ಔರಂಗಾಬಾದ್ನಲ್ಲಿ ಹೆಚ್ಚಿನ ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದು, ದೇಶದ ಛತ್ತೀಸ್ಗಢ, ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ ಪಂಜಾಬ್, ರಾಜಸ್ಥಾನ ಹಾಗೂ ಗುಜರಾತ್ನಿಂದ ಶೇ. 80ರಷ್ಟು ಕೋವಿಡ್ ಪ್ರಕರಣ ಕಂಡು ಬಂದಿವೆ.
ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ 5,100, ಮಧ್ಯಪ್ರದೇಶದಲ್ಲಿ 3,722 ಕೇಸ್, ಪಂಜಾಬ್ನಲ್ಲಿ 2,924, ಹರಿಯಾಣದಲ್ಲಿ 2,099 ಪ್ರಕರಣ, ಜಮ್ಮು- ಕಾಶ್ಮೀರದಲ್ಲಿ 561 ಪ್ರಕರಣ ದಾಖಲಾಗಿವೆ.