ETV Bharat / bharat

ನಾಸಿಕ್‌ನಲ್ಲಿ ದೇವಾಲಯದ ನೆಲ ಒರೆಸಿ, ರಾಮ ಭಜನೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ - ಪ್ರಧಾನಿ ನರೇಂದ್ರ ಮೋದಿ

ಇಂದು (ಶುಕ್ರವಾರ) ಮಹಾರಾಷ್ಟ್ರದ ನಾಸಿಕ್‌ನ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಐತಿಹಾಸಿಕ ಶ್ರೀ ಕಲಾರಾಮ ಮಂದಿರದಲ್ಲಿ ನೆಲ ಒರೆಸಿದರು ಹಾಗೂ ರಾಮ ಭಜನೆಯಲ್ಲಿ ತೊಡಗಿದರು. ಈ ಕುರಿತ ವಿಡಿಯೋ ಭಾರಿ ವೈರಲ್ ಆಗುತ್ತಿದೆ.

ನಾಸಿಕ್‌ನಲ್ಲಿ ದೇವಾಲಯದ ನೆಲ ಒರೆಸಿ, ರಾಮ ಭಜನೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ

author img

By ETV Bharat Karnataka Team

Published : Jan 12, 2024, 7:05 PM IST

ನಾಸಿಕ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಾಸಿಕ್‌ನ ಐತಿಹಾಸಿಕ ಶ್ರೀ ಕಲಾರಾಮ ಮಂದಿರಕ್ಕೆ ತೆರಳಿದ ಪ್ರಧಾನಿ ಮೋದಿ ಅವರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ಅಲ್ಲಿ ಅವರು ಬಕೆಟ್ ನೀರನ್ನು ತೆಗೆದುಕೊಂಡು ಮಾಪ್ ಹಿಡಿದುಕೊಂಡು ದೇವಾಲಯದ ಮಹಡಿಗಳನ್ನು ಸ್ವಚ್ಛಗೊಳಿಸಿದರು. ಜೊತೆಗೆ ಮೋದಿ ಅವರು ಎಐನಿಂದ ಅನುವಾದವಾಗಿರುವ 'ರಾಮಾಯಣ'ದ ಮಹಾಕಾವ್ಯ ಪಠಣ ಹಿಂದಿ ಆವೃತ್ತಿಯನ್ನು ಆಲಿಸಿದರು.

ಇಂದು (ಶುಕ್ರವಾರ) ಮಹಾರಾಷ್ಟ್ರ ಪ್ರವಾಸದ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು, ನಾಸಿಕ್‌ನ ಶ್ರೀ ಕಲಾರಾಮ ಮಂದಿರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಜನೆ ಮತ್ತು ಸಿಂಬಲ್ ನುಡಿಸಿದರು, ಜೊತೆಗೆ ದೇವಾಲಯದ ನೆಲವನ್ನು ಒರೆಸಿದರು.

ಪ್ರಧಾನಿ ಮೋದಿ ಅವರು ಸಂಗೀತ ವಾದ್ಯ ಸಿಂಬಲ್ಸ್ ಅನ್ನು ನುಡಿಸಿದರು. ಜೊತೆಗೆ ಭಕ್ತರು ಮತ್ತು ಕಲಾವಿದರಿಂದ ನಡೆದ ರಾಮ ಭಜನೆ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಿದ್ದರು. ಇದರಿಂದೊಂದಿಗೆ ಮೋದಿ ವಿವಿಧ ಪೂಜೆ, ಸಮಾರಂಭಗಳಲ್ಲಿ ಪಾಲ್ಗೊಂಡರು. ಎಐ ಅನುವಾದದ ಹಿಂದಿ ಆವೃತ್ತಿಯ 'ರಾಮಾಯಣ' ಮಹಾಕಾವ್ಯದ ಪಠಣವನ್ನು ಆಲಿಸಿದರು. ಭಗವಾನ್ ರಾಮನು ಅಯೋಧ್ಯೆಗೆ ಹಿಂದಿರುಗುವುದನ್ನು ಚಿತ್ರಿಸುವ ಮಹಾಕಾವ್ಯದ 'ಯುದ್ಧ ಕಾಂಡ' ವಿಭಾಗವನ್ನು ಈ ಸಂದರ್ಭದಲ್ಲಿ ಪಠಿಸಲಾಯಿತು.

  • Prayed at the Shree Kalaram Temple in Nashik. Feeling incredibly blessed by the divine atmosphere. A truly humbling and spiritual experience. I prayed for the peace and well-being of my fellow Indians. pic.twitter.com/wHJQYrVHnz

    — Narendra Modi (@narendramodi) January 12, 2024 " class="align-text-top noRightClick twitterSection" data=" ">

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಕ್ತರು ಮತ್ತು ನಾಗರಿಕರು ಮುಂದೆ ಬಂದು ದೇಶಾದ್ಯಂತ ಎಲ್ಲ ದೇವಾಲಯಗಳಲ್ಲಿ ಇದೇ ರೀತಿಯ ಸ್ವಚ್ಛತಾ ಅಭಿಯಾನಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದರು. ದೇವಾಲಯದ ಭೇಟಿಯ ವೇಳೆ ಪ್ರಧಾನಿಯವರೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಇದ್ದರು.

  • At the Shree Kalaram Temple, I had the profound experience of hearing verses from the Bhavarth Ramayana written in Marathi by Sant Eknath Ji, eloquently narrating Prabhu Shri Ram's triumphant return to Ayodhya. This recitation, resonating with devotion and history, was a very… pic.twitter.com/rYqf5YR5qu

ನಾಸಿಕ್‌ನಲ್ಲಿರುವ ಸ್ವಾಮಿ ವಿವೇಕಾನಂದರ ಜನ್ಮದಿನದಂದು ಅವರ ಪ್ರತಿಮೆಗೆ ಪ್ರಧಾನಿ ಮೋದಿ ಮಾಲಾರ್ಪಣೆ ಮಾಡಿದರು. ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ, ಪಂಚವಟಿಗೆ ವಿಶೇಷ ಸ್ಥಾನವಿದೆ, ಏಕೆಂದರೆ ರಾಮಾಯಣದ ಹಲವಾರು ಪ್ರಮುಖ ಘಟನೆಗಳು ಇಲ್ಲಿ ನಡೆದಿವೆ. ಶ್ರೀ ಕಲಾರಾಮ ಮಂದಿರವು ನಾಸಿಕ್‌ನ ಗೋದಾವರಿ ನದಿಯ ದಡದಲ್ಲಿದೆ.

ರಾಷ್ಟ್ರೀಯ ಯುವ ಉತ್ಸವ ಉದ್ಘಾಟನೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ನಾಸಿಕ್‌ನಲ್ಲಿ 27ನೇ ರಾಷ್ಟ್ರೀಯ ಯುವ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಂದ್ರಯಾನ -3 ಮತ್ತು ಆದಿತ್ಯ ಎಲ್ -1 ರ ಯಶಸ್ಸನ್ನು ಶ್ಲಾಘಿಸಿದರು.

''ಇಂದು ಭಾರತದ ಯುವ ಶಕ್ತಿಯ ದಿನ, ಗುಲಾಮಗಿರಿಯ ದಿನಗಳಲ್ಲಿ ಭಾರತವನ್ನು ಹೊಸ ಚೈತನ್ಯದಿಂದ ತುಂಬಿದ ಮಹಾನ್ ವ್ಯಕ್ತಿಗೆ ಈ ದಿನವನ್ನು ಅರ್ಪಿಸಲಾಗಿದೆ. ಸ್ವಾಮಿ ವಿವೇಕಾನಂದರ ಜನ್ಮದಿನದಂದು ಇಲ್ಲಿಗೆ ಬಂದಿರುವುದಕ್ಕೆ ನನಗೆ ಸಂತೋಷವಾಗಿದೆ'' ಎಂದು ಅವರು, ರಾಷ್ಟ್ರೀಯ ಯುವ ದಿನಕ್ಕೆ ತಮ್ಮ ಶುಭಾಶಯ ತಿಳಿಸಿದರು. 'ನಾರಿ ಶಕ್ತಿ'ಯ ಪ್ರತೀಕವಾಗಿರುವ ರಾಜಮಾತಾ ಜೀಜಾ ಬಾಯಿ ಜನ್ಮದಿನದ ಹಿನ್ನೆಲೆ ಅವರಿಗೆ ಗೌರವ ಸಲ್ಲಿಸಿದರು.

  • " class="align-text-top noRightClick twitterSection" data="">

ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ''ರಾಮ ಮಂದಿರ ಉದ್ಘಾಟನೆಗೂ ಮುನ್ನ ದೇಗುಲಗಳು, ಯಾತ್ರಾ ಕೇಂದ್ರಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳುವಂತೆ ನಾನು ಜನರನ್ನು ಕೋರುತ್ತೇನೆ'' ಎಂದು ಹೇಳಿದರು.

ಭಾರತ 3ನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಬೇಕು: "ಭಾರತವು ಅಗ್ರ ಐದು ಜಾಗತಿಕ ಆರ್ಥಿಕತೆಗಳಲ್ಲಿ ಒಂದಾಗಿದೆ. ಇದು ಯುವ ಶಕ್ತಿಯಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ನಾವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಬೇಕು'' ಎಂದು ಅವರು, ಜಗತ್ತು ಇಂದು ಭಾರತವನ್ನು ನುರಿತ ಕಾರ್ಯಪಡೆ ಹೊಂದಿರುವ ದೇಶವಾಗಿ ನೋಡುತ್ತಿದೆ. ಭಾರತದಲ್ಲಿನ ಅಗ್ಗದ ಮೊಬೈಲ್ ಡೇಟಾವು ವಿಶ್ವದ ಜನರನ್ನು ಬೆರಗುಗೊಳಿಸುತ್ತಿದೆ" ಎಂದು ಮೋದಿ ತಿಳಿಸಿದರು. "ಭಾರತದ ಯುವಕರು ಯೋಗ ಮತ್ತು ಆಯುರ್ವೇದದ ಬ್ರಾಂಡ್ ಅಂಬಾಸಿಡರ್ ಆಗುತ್ತಿದ್ದಾರೆ" ಎಂದು ಶ್ಲಾಘಿಸಿದರು.

ಇದಕ್ಕೂ ಮುನ್ನ ಅವರು ಛತ್ರಪತಿ ಸಂಭಾಜಿನಗರ- ನಾಸಿಕ್ ಹೆದ್ದಾರಿಯಲ್ಲಿ ಮಿರ್ಚಿ ವೃತ್ತದಿಂದ ಜನಾರ್ದನ ಸ್ವಾಮಿ ಮಠದ ಚೌಕ್ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಪಥಸಂಚಲನ ನಡೆಸಿದರು. ಅವರೊಂದಿಗೆ ಸಿಎಂ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್, ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ್ ಬವಾಂಕುಲೆ ಇದ್ದರು. 1,50,000 ಕ್ಕೂ ಹೆಚ್ಚು ಜನರು ರೋಡ್‌ಶೋನಲ್ಲಿ ಪಾಲ್ಗೊಂಡರು.

ಜೊತೆಗೆ 17,840 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಅಟಲ್ ಸೇತು (ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್) ಅನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಇದು ದೇಶದ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ.

ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆಗೂ ಮುನ್ನ 11 ದಿನಗಳ ವಿಶೇಷ ಧಾರ್ಮಿಕ ವ್ರತ ಕೈಗೊಂಡ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.