ಮುಂಬೈ(ಮಹಾರಾಷ್ಟ್ರ): ಪಂಚರಾಜ್ಯ ಚುನಾವಣೆಗಳಲ್ಲಿ ಗೆಲ್ಲಲು ವಿವಿಧ ಪಕ್ಷಗಳು ಕಸರತ್ತುಗಳನ್ನು ನಡೆಸುತ್ತಿರುವ ಈ ವೇಳೆಯಲ್ಲೇ ಮಹಾರಾಷ್ಟ್ರದಲ್ಲಿ ನಡೆದ ನಗರ ಪಂಚಾಯತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಈ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಪಂಚಾಯತ್ಗಳಲ್ಲಿ ಪಾರಮ್ಯ ಮೆರೆದಿದೆ.
ಮಹಾರಾಷ್ಟ್ರದ ಒಟ್ಟು 106 ನಗರ ಪಂಚಾಯತ್‌ಗಳಿಗೆ ಚುನಾವಣೆ ನಡೆದಿದ್ದು, ಒಟ್ಟು 97 ನಗರ ಪಂಚಾಯತ್‌ಗಳ ಫಲಿತಾಂಶ ಬಹಿರಂಗವಾಗಿದೆ. ಬಿಜೆಪಿ 18, ಎನ್‌ಸಿಪಿ 12, ಕಾಂಗ್ರೆಸ್ 12 ಮತ್ತು ಶಿವಸೇನೆ 8 ಪಂಚಾಯತ್ಗಳಲ್ಲಿ ಗೆಲುವು ಸಾಧಿಸಿದೆ. ಇದರ ಜೊತೆಗೆ ಸ್ಥಳೀಯ ಮೋರ್ಚಾಗಳು 46 ಪಂಚಾಯತ್ಗಳಲ್ಲಿ ಪಾರಮ್ಯ ಮೆರೆದಿದ್ದಾರೆ.
ಅಭ್ಯರ್ಥಿಗಳ ವಿಚಾರಕ್ಕೆ ಬರುವುದಾದರೆ ಬಿಜೆಪಿ 384, ಕಾಂಗ್ರೆಸ್ 316 ಮತ್ತು ಶಿವಸೇನೆ 284, ಕಮ್ಯುನಿಸ್ಟ್ ಪಕ್ಷ 11 ಸ್ಥಾನ, ಬಿಎಸ್‌ಪಿ 4, ಎಂಎನ್‌ಎಸ್ 4, ಇತರ ಪಕ್ಷಗಳು 82 ಮತ್ತು ಸ್ವತಂತ್ರವಾಗಿ ಸ್ಪರ್ಧಿಸಿ 206 ಅಭ್ಯರ್ಥಿಗಳು ಜಯಶಾಲಿಗಳಾಗಿದ್ದಾರೆ.
ಗಡ್ಚಿರೋಲಿ ಜಿಲ್ಲೆಯ ಎಲ್ಲ 9 ನಗರ ಪಂಚಾಯತ್‌ಗಳ ಮತ ಎಣಿಕೆ ಇಂದು (ಜನವರಿ 20ರಂದು) ನಡೆಯಲಿದೆ. ಶಿರಡಿಯಲ್ಲಿ ನಗರ ಪಂಚಾಯತ್ನ 11 ವಾರ್ಡ್ಗಳಲ್ಲಿ ನಾಮಪತ್ರ ಸ್ವೀಕಾರವಾಗದ ಹಿನ್ನೆಲೆಯಲ್ಲಿ ಚುನಾವಣೆ ನಡೆದಿರಲಿಲ್ಲ.
ಇದನ್ನೂ ಓದಿ: ಬಿಜೆಪಿಗೆ ಸೇರಿದ ಜನರಲ್ ಬಿಪಿನ್ ರಾವತ್ ಸಹೋದರ