ನಾಗ್ಪುರ (ಮಹಾರಾಷ್ಟ್ರ): ಮಹಾರಾಷ್ಟ್ರ ವಿಧಾನ ಮಂಡಲದ ಚಳಿಗಾಲ ಅಧಿವೇಶನವು ನಾಗ್ಪುರದಲ್ಲಿ ಸದ್ಯ ನಡೆಯುತ್ತಿದೆ. ಪ್ರಸ್ತುತ ನಾಗ್ಪುರ ಸೇರಿದಂತೆ ಇಡೀ ವಿದರ್ಭ ಭಾಗದಲ್ಲಿ ಕೊರೆಯುವ ಚಳಿ ಆವರಿಸಿದೆ. ಈ ಮಧ್ಯೆ ಅಧಿವೇಶನದಲ್ಲಿ ಭಾಗವಹಿಸಿರುವ ಅನೇಕ ಶಾಸಕರು ಕೆಮ್ಮು ನೆಗಡಿಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕೆಮ್ಮು ನೆಗಡಿ ಅಲ್ಲದೇ ಕೆಲ ಶಾಸಕರಿಗೆ ಜ್ವರ ಬಾಧೆಯೂ ಇದೆ ಎನ್ನಲಾಗಿದೆ. ಇನ್ನು ಕೆಲ ಶಾಸಕರು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ.
ಮೂರು ದಿನಗಳ ಅವಧಿಯಲ್ಲಿ ವಿಧಾನ ಭವನ ಪರಿಸರದಲ್ಲಿ 611 ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ. ನಾಗ್ಪುರದಲ್ಲಿ ಈಗ ತಾಪಮಾನ 13 ರಿಂದ 14 ಡಿಗ್ರಿ ಸೆಲ್ಸಿಯಸ್ ಇದ್ದು, ವಿಪರೀತ ಚಳಿಯ ಅನುಭವವಾಗುತ್ತಿದೆ. ಮುಂಬೈನಲ್ಲಿ ವಾಸಿಸುವವರಿಗೆ ಇಷ್ಟೊಂದು ಚಳಿ ಅಭ್ಯಾಸ ಇಲ್ಲದ ಕಾರಣ ಅವರಿಗೆ ನಾಗ್ಪುರ ಹವಾಮಾನಕ್ಕೆ ತಕ್ಷಣದಲ್ಲಿ ಹೊಂದಿಕೊಳ್ಳುವುದು ತುಸು ಕಷ್ಟವಾಗುತ್ತಿದೆ.
ಇದನ್ನೂ ಓದಿ: 16 ವರ್ಷದ ಬಾಲಕಿ ಗರ್ಭಿಣಿ: ಜ್ವರ ಎಂದು ಆಸ್ಪತ್ರೆಗೆ ತೆರಳಿದ್ದಾಗ ಪ್ರಕರಣ ಬೆಳಕಿಗೆ