ಮುಂಬೈ(ಮಹಾರಾಷ್ಟ್ರ): ಅಮರಾವತಿ ಸಂಸದೆ ನವನೀತ್ ರಾಣಾ ಬೀದಿ ಬದಿಯೊಂದರ ಫುಡ್ ಸ್ಟಾಲ್ನಲ್ಲಿ ದೋಸೆ ಮಾಡಿ ಗಮನ ಸೆಳೆದಿದ್ದಾರೆ. ಗಾಡ್ಗೆ ನಗರದಲ್ಲಿ ನವನೀತ್ ರಾಣಾ ದೋಸೆ ಮಾಡಿದ್ದು,ಹೋಟೆಲ್ನವರೊಂದಿಗೆ ಸ್ವಲ್ಪ ಹೊತ್ತು ಮಾತುಕತೆಯಾಡಿದ್ದಾರೆ.
ಶೆಗಾಂವ್ ನಗರದ ರಸ್ತೆ ಕಾಮಗಾರಿ ಪರಿಶೀಲನೆಗೆ ತೆರಳಿದ್ದ ವೇಳೆ ನವನೀತ್ ರಾಣಾ ಹೋಟೆಲ್ಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಟೀ ಅಂಗಡಿ ಮತ್ತು ತರಕಾರಿ ಮಾರುವ ಬೀದಿ ಬದಿ ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿದ್ದಾರೆ.
ಇದನ್ನೂ ಓದಿ: ವಿಚ್ಛೇದಿತ ಸಂಗಾತಿಗಳು ಒಟ್ಟಿಗಿದ್ದು ದೈಹಿಕ ಸಂಪರ್ಕ ಹೊಂದಬಹುದೇ?
ಇದೇ ವೇಳೆ ಬೀದಿ ಬದಿ ವ್ಯಾಪಾರಿಗಳಿಗೆ ಪರಿಹಾರದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ನವನೀತ್ ರಾಣಾ, ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.