ETV Bharat / bharat

ನಾಸಾ ವಿಜ್ಞಾನಿ ಎಂದು ಹೇಳಿಕೊಂಡು 111 ಉದ್ಯೋಗಾಕಾಂಕ್ಷಿಗಳಿಗೆ ವಂಚಿಸಿದ ಕೊಲೆ ಆರೋಪಿ! - ನಾಸಾ

ಮಹಾರಾಷ್ಟ್ರದ ನಾಗ್ಪುರದ ಪ್ರಾದೇಶಿಕ ದೂರ ಸಂವೇದಿ ಕೇಂದ್ರದಲ್ಲಿ ಕೆಲಸ ಕೊಡಿವುದಾಗಿ ಹೇಳಿ 111 ಉದ್ಯೋಗಾಕಾಂಕ್ಷಿಗಳಿಗೆ ಕೊಲೆ ಪ್ರಕರಣದ ಆರೋಪಿಯೊಬ್ಬ ವಂಚಿಸಿದ್ದಾನೆ.

Maharashtra: Fraudster posing as NASA scientist dupes 111 job aspirants of over Rs 5 crore in Nagpur; case registered
ನಾಸಾ ವಿಜ್ಞಾನಿ ಎಂದು ಹೇಳಿಕೊಂಡು 111 ಉದ್ಯೋಗಾಕಾಂಕ್ಷಿಗಳಿಗೆ ವಂಚಿಸಿದ ಕೊಲೆ ಆರೋಪಿ!
author img

By

Published : Aug 5, 2023, 11:03 PM IST

ನಾಗ್ಪುರ (ಮಹಾರಾಷ್ಟ್ರ): ಮಹಾರಾಷ್ಟ್ರದ ನಾಗ್ಪುರದ ಪ್ರಾದೇಶಿಕ ದೂರ ಸಂವೇದಿ ಕೇಂದ್ರ (Regional Remote Sensing Center - RRSC )ದಲ್ಲಿ ಕೆಲಸ ಕೊಡಿವುದಾಗಿ ಹೇಳಿ ಕೊಲೆ ಪ್ರಕರಣದ ಆರೋಪಿಯೊಬ್ಬ 111 ಉದ್ಯೋಗಾಕಾಂಕ್ಷಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ವಂಚಕ ತಾನು ಅಮೆರಿಕದ ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ)ದ ವಿಜ್ಞಾನಿ ಎಂದು ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಂಚಕನನ್ನು ಓಂಕಾರ ಮಹೇಂದ್ರ ತಲಮಲೆ ಎಂದು ಗುರುತಿಸಲಾಗಿದೆ. ನಾಗಪುರದ ಆರ್‌ಆರ್‌ಎಸ್‌ಸಿಯಲ್ಲಿ ಹೆಚ್ಚಿನ ಸಂಬಳದ ಕೆಲಸ ಕೊಡಿಸುವುದಾಗಿ ಆರೋಪಿ 111 ಮಂದಿಗೆ ಆಮಿಷವೊಡ್ಡಿದ್ದ. ಕೆಲಸ ಕೊಡಿಸುವ ಹೆಸರಲ್ಲಿ ಹಣ ವಸೂಲಿ ಮಾಡಿ ವಂಚಿಸುವ ಬಗ್ಗೆ ನಾಗ್ಪುರ ಕ್ರೈಂ ಬ್ರಾಂಚ್‌ನ ಆರ್ಥಿಕ ಅಪರಾಧ ವಿಭಾಗದಲ್ಲಿ ದೂರು ದಾಖಲಾಗಿದೆ.

ಆರೋಪಿ ಓಂಕಾರ ಮಹೇಂದ್ರ ತಲಮಲೆ ತಾನು ನಾಸಾ (National Aeronautics and Space Administration - NASA)ದಲ್ಲಿ ಜೂನಿಯರ್ ವಿಜ್ಞಾನಿ ಆಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದ. ನಾಗ್ಪುರದ ಪ್ರಾದೇಶಿಕ ದೂರ ಸಂವೇದಿ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯ ಕಚೇರಿ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ ಎಂಬುವುದಾಗಿ ನಂಬಿಸಿದ್ದ ದೂರುದಾರರಲ್ಲಿ ಒಬ್ಬರಾದ ಅಶ್ವಿನ್ ಅರವಿಂದ್ ವಾಂಖೆಡೆ ತಿಳಿಸಿದ್ದಾರೆ. ಉದ್ಯೋಗದ ಆಸೆ ಹುಟ್ಟಿಸಿ ಆರೋಪಿ ಓಂಕಾರ್ 2 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ. ಈ ಕೆಲಸ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಬ್ಯಾಂಕ್ ಖಾತೆಗೆ ಹಣ ಹಾಕಲಾಗಿತ್ತು ಎಂದೂ ಅಶ್ವಿನ್ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.

ದೂರದಾರ ಅಶ್ವಿನ್ ವಾಂಖೆಡೆ ಮತ್ತು ಆರೋಪಿ ಓಂಕಾರ್ ತಲಮಲೆ ಇಬ್ಬರೂ ಪರಸ್ಪರ ಪರಿಚಯಸ್ಥರು. ಆದರೆ, ಈತನಿಗೂ ನಾಸಾದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಓಂಕಾರ್ ಹೇಳಿದ್ದ. ಹಣ ನೀಡಿದ ಮೇಲೂ ಕೆಲಸ ಕಾರಣ ಕೆಲ ಸಂತ್ರಸ್ತರು ನಾಗ್ಪುರದ ಆರ್‌ಆರ್‌ಎಸ್‌ಸಿ ಕಚೇರಿಯನ್ನು ಸಂಪರ್ಕಿಸಿದ್ದಾರೆ. ಆಗ ಈ ವಂಚಕನಿಂದ ವಂಚನೆಗೆ ಒಳಗಾಗಿರುವುದು ಅರಿತುಕೊಂಡರು. ಇದೇ ರೀತಿಯಾಗಿ ಆರೋಪಿ ಸುಮಾರು 111 ಉದ್ಯೋಗಾಕಾಂಕ್ಷಿಗಳಿಗೆ ನಾಸಾದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಮೋಸ ಮಾಡಿರುವ ಮಾಹಿತಿ ಇದೆ. ಒಟ್ಟಾರೆ ಉದ್ಯೋಗಾಕಾಂಕ್ಷಿಗಳಿಗೆ ಅಂದಾಜು 5.31 ಕೋಟಿ ರೂ.ಗೆ ಹಣ ಪಡೆದು ವಂಚಿಸಲಾಗಿದೆ. ಆರೋಪಿ ಓಂಕಾರ ತಲಮಲೆ ಕೊಲೆ ಪ್ರಕರಣವೊಂದರ ಪ್ರಮುಖ ಆರೋಪಿ ಎಂಬ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Fake Army Officer: ಸೇನಾ ಕ್ಯಾಪ್ಟನ್​ ಸಮವಸ್ತ್ರದಲ್ಲಿ ಇರುವಾಗಲೇ ನಕಲಿ ಸೇನಾಧಿಕಾರಿ ಅರೆಸ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.