ಮುಂಬೈ: ಇಂದು ರಾತ್ರಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಜನರನ್ನು ಉದ್ದೇಶಿಸಿ ಮಹತ್ವದ ಭಾಷಣ ಮಾಡಲಿದ್ದು, ಕುತೂಹಲ ಕೆರಳಿಸಿದೆ.
ಈ ಬಗ್ಗೆ ಮುಂಬೈ ಮೇಯರ್ ಕಿಶೋರಿ ಪಡ್ನೇಕರ್ ಮಾಹಿತಿ ನೀಡಿದ್ದು, ಭಾಷಣಕ್ಕೂ ಮುನ್ನ ಸಿಎಂ ಅಲ್ಲಿನ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ತಡೆಗಟ್ಟುವ ಉದ್ದೇಶದಿಂದ ಲಾಕ್ಡೌನ್ ಘೋಷಣೆ ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಈಗಾಗಲೇ ಕೇಳಿ ಬಂದಿರುವ ಕಾರಣ, ಮುಖ್ಯಮಂತ್ರಿ ಭಾಷಣದ ಮೇಲೆ ಎಲ್ಲರೂ ಕಣ್ಣಿಟ್ಟಿದ್ದಾರೆ.
-
Maharashtra Chief Minister Uddhav Thackeray to address people of the state today at 8:30 pm: Mumbai Mayor Kishori Pednekar#COVID19 pic.twitter.com/OOmJJezSEh
— ANI (@ANI) April 2, 2021 " class="align-text-top noRightClick twitterSection" data="
">Maharashtra Chief Minister Uddhav Thackeray to address people of the state today at 8:30 pm: Mumbai Mayor Kishori Pednekar#COVID19 pic.twitter.com/OOmJJezSEh
— ANI (@ANI) April 2, 2021Maharashtra Chief Minister Uddhav Thackeray to address people of the state today at 8:30 pm: Mumbai Mayor Kishori Pednekar#COVID19 pic.twitter.com/OOmJJezSEh
— ANI (@ANI) April 2, 2021
ಮುಂಬೈನಲ್ಲಿ ಸೋಂಕಿತ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿದ್ದು, ಗಂಭೀರ ವಿಷಯವಾಗಿದೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ, ವೆಂಟಿಲೇಟರ್ಗಳ ಸಮಸ್ಯೆ ಉದ್ಭವಿಸಿದೆ ಎಂದು ಪಡ್ನೇಕರ್ ತಿಳಿಸಿದರು.
ಇದನ್ನೂ ಓದಿ: ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಪುಣೆಯಲ್ಲಿ ಕರ್ಫ್ಯೂ: ಹೋಂ ಡೆಲಿವರಿಗೆ ಮಾತ್ರ ಅವಕಾಶ
ರಾಜ್ಯದಲ್ಲಿ ಲಾಕ್ಡೌನ್ ಹೇರಬೇೆಕೆಂದು ಯಾರೂ ಇಚ್ಛಿಸುವುದಿಲ್ಲ. ಆದರೆ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಕೆಲವೊಂದು ಕಠಿಣ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಅವರು ಹೇಳಿದರು.