ETV Bharat / bharat

ಕೋವಿಡ್​ನಿಂದ ಸಾವು: 8 ಮಂದಿಯ ಮೃತದೇಹ ಒಂದೇ ಚಿತೆ ಮೇಲೆ ಅಂತ್ಯಕ್ರಿಯೆ! - 8 ಮಂದಿಯ ಮೃತದೇಹ ಒಂದೇ ಚಿತೆ ಮೇಲೆ ಅಂತ್ಯಕ್ರಿಯೆ!

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಸಾವಿನ ಸಂಖ್ಯೆ ಕೂಡ ಏರುತ್ತಿದೆ. ಹೀಗಾಗಿ ಒಂದೇ ಚಿತೆ ಮೇಲೆ ಕೋವಿಡ್​ನಿಂದ ಸಾವನ್ನಪ್ಪಿರುವ 8 ಮಂದಿಯ ಅಂತ್ಯಕ್ರಿಯೆಯನ್ನು ಸಾಮೂಹಿಕವಾಗಿ ನಡೆಸಲಾಗಿದೆ.

COVID
COVID
author img

By

Published : Apr 7, 2021, 3:01 PM IST

ಔರಂಗಾಬಾದ್​(ಮಹಾರಾಷ್ಟ್ರ): ಮಹಾಮಾರಿ ಕೊರೊನಾ ವೈರಸ್​​ ಎರಡನೇ ಹಂತದ ಅಲೆ ಮಹಾರಾಷ್ಟ್ರದಲ್ಲಿ ಜೋರಾಗಿ ಬೀಸುತ್ತಿದೆ. ಮಂಗಳವಾರ ಒಂದೇ ದಿನ 55 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣ ಪತ್ತೆಯಾಗಿದ್ದರೆ, 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಕೋವಿಡ್​ನಿಂದ ಸಾವನ್ನಪ್ಪಿರುವ 8 ಮಂದಿಯ ಮೃತದೇಹಗಳನ್ನು ಒಂದೇ ಚಿತೆ ಮೇಲೆ ಸಾಮೂಹಿಕವಾಗಿ ಅಂತ್ಯಕ್ರಿಯೆ ನಡೆಸಿರುವ ಘಟನೆ ಔರಂಗಾಬಾದ್​ನಲ್ಲಿ ನಡೆದಿದೆ. ಇಲ್ಲಿನ ಸ್ಥಳೀಯ ಸಂಸ್ಥೆ ಈ ಕಾರ್ಯ ನಡೆಸಿದೆ. ಇದಕ್ಕೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆಂಬ ಮಾತು ಸಹ ಕೇಳಿ ಬಂದಿದೆ. ಆದರೆ ಮುನ್ಸಿಪಲ್​ ಕೌನ್ಸಿಲ್​, ದೊಡ್ಡ ಮಟ್ಟದ ಚಿತೆ ತಯಾರಿಸಿ ಅದರ ಮೇಲೆ ಎಂಟು ಮೃತದೇಹಗಳನ್ನಿಟ್ಟು ಅಂತ್ಯಕ್ರಿಯೆ ನೆರವೇರಿಸಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕೋವಿಡ್​ ಉಲ್ಬಣ: 24 ಗಂಟೆಯಲ್ಲಿ ಅರ್ಧಲಕ್ಷಕ್ಕೂ ಅಧಿಕ ಕೋವಿಡ್​ ಕೇಸ್​, 297 ಸಾವು!

ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ಹೆಚ್ಚಿನ ಸೋಂಕು ಪ್ರಕರಣ ದಾಖಲಾಗುತ್ತಿದ್ದು, ಆಸ್ಪತ್ರೆಯಲ್ಲಿ ರೋಗಿಗಳನ್ನು ದಾಖಲಿಸಿಕೊಳ್ಳಲು ಬೆಡ್​ಗಳ ಸಮಸ್ಯೆ ಉಂಟಾಗುತ್ತಿದೆ. ಜತೆಗೆ ಆಕ್ಸಿಜನ್ ಕೊರತೆ ಸಹ ಇದೆ ಎಂಬ ಮಾಹಿತಿ ಬಹಿರಂಗವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.