ETV Bharat / bharat

ಮಹದಾಯಿ ವಿವಾದ: ಜಂಟಿ ಸಮಿತಿ ರಚಿಸಿ, ವರದಿ ಸಲ್ಲಿಸಲು ಸುಪ್ರೀಂ ನಿರ್ದೇಶನ

ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಗೋವಾ ಮತ್ತು ಮಹಾರಾಷ್ಟ್ರ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಜಂಟಿ ಸಮಿತಿ ರಚಿಸಿ, ವರದಿ ನೀಡಲು ತಿಳಿಸಿದೆ.

supreme court
ಸುಪ್ರೀಂಕೋರ್ಟ್​
author img

By

Published : Feb 22, 2021, 6:27 PM IST

ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ, ಗೋವಾ, ಮಹಾರಾಷ್ಟ್ರದ ಸದಸ್ಯರನ್ನು ಒಳಗೊಂಡ ಜಂಟಿ ಸಮಿತಿಗೆ ಮಹದಾಯಿಗೆ ಭೇಟಿ ನೀಡಿ, ವರದಿ ನೀಡಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕದ ವಿರುದ್ಧ ದಾಖಲಾಗಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ರೀತಿ ಸೂಚನೆ ನೀಡಿದ್ದು, ನ್ಯಾಯಮೂರ್ತಿ ಡಿ.ವೈ, ಚಂದ್ರಚೂಡ್, ನ್ಯಾಯಮೂರ್ತಿ ಎಂ.ಆರ್​.ಶಾ ಅವರಿಂದ ದ್ವಿಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿದೆ.

ಇದನ್ನೂ ಓದಿ: ಆರ್​ಟಿಇ ಶುಲ್ಕ ಮರುಪಾವತಿ ನಿಯಮಗಳಲ್ಲಿ ಸಡಿಲಿಕೆ: ಸಚಿವ ಸುರೇಶ್ ಕುಮಾರ್

ಕರ್ನಾಟಕ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಪಾಲನೆ ಮಾಡುತ್ತಿಲ್ಲ ಎಂದು ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳು ಕೋರ್ಟ್ ಮೆಟ್ಟಿಲೇರಿದ್ದವು.

ಕೋವಿಡ್ ವೇಳೆಯಲ್ಲಿ ಮಹದಾಯಿ ನೀರನ್ನು ಗೋವಾಗೆ ಹರಿಸಿಲ್ಲ ಎಂದು ಸುಪ್ರೀಂಕೋರ್ಟ್​ಗೆ ಗೋವಾ ದೂರು ಸಲ್ಲಿಸಿತ್ತು. ಜೊತೆಗೆ ತನ್ನಡೆಗೆ ನೀರನ್ನು ಕರ್ನಾಟಕ ತಿರುಗಿಸಿಕೊಂಡಿದೆ ಎಂದು ಗೋವಾ ಆರೋಪಿಸಿತ್ತು.

ಈ ವೇಳೆ ವಾದ ವಿವಾದ ಆಲಿಸಿದ ಸುಪ್ರೀಂಕೋರ್ಟ್ ಮಹದಾಯಿ ಸ್ಥಿತಿಯನ್ನು ಅರಿಯಲು ಮೂರನೇ ವ್ಯಕ್ತಿಯನ್ನು ನೇಮಕ ಮಾಡಬೇಕೆಂದು ಸಲಹೆ ನೀಡಿದೆ. ಗೋವಾದ ಸಲಹೆಯನ್ನು ಜಂಟಿ ಸಮಿತಿ ರಚಿಸಿ, ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.