ಗೊಂಡಿಯಾ : ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಸಲೆಕಾಸಾ ಪ್ರದೇಶದಲ್ಲಿ ಪೊಲೀಸರು, ಸಿ-60 ಕಮಾಂಡೋಗಳು ಮತ್ತು ಬಾಂಬ್ ಪತ್ತೆ ತಂಡದ ಜಂಟಿ ಕಾರ್ಯಾಚರಣೆಯಲ್ಲಿ ನಕ್ಸಲ್ ಅಡಗುತಾಣದಿಂದ ಅಪಾರ ಪ್ರಮಾಣದ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ಡಿಟೋನೇಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಶ್ವ ಪನ್ಸಾರೆ ತಿಳಿಸಿದ್ದಾರೆ.
20 ಕಿಲೋಗ್ರಾಂಗಳಷ್ಟು ಸಾಮರ್ಥ್ಯದ ಉಕ್ಕಿನ ಪೆಟ್ಟಿಗೆ, ಸ್ಫೋಟಕಗಳನ್ನು ತಯಾರಿಸಲು 150 ರಾಡ್‌ಗಳು ಮತ್ತು ಗೆಂಡುಝಾರಿಯಾ ಬೆಟ್ಟಗಳ ಕಾಡುಗಳಿಂದ 27 ಎಲೆಕ್ಟ್ರಾನಿಕ್ ಡಿಟೋನೇಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 51 ವರ್ಷದ ಪತ್ನಿಯನ್ನು ಕರೆಂಟ್ ಶಾಕ್ ಕೊಟ್ಟು ಕೊಂದ 28 ವರ್ಷದ ಪತಿ
ಯುಎಪಿಎ ಮತ್ತು ಸ್ಫೋಟಕ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.