ETV Bharat / bharat

ಮಹಾರಾಷ್ಟ್ರ, ಕೇರಳದಲ್ಲಿ ಕೋವಿಡ್ ದಿಢೀರ್​​ ಏರಿಕೆ: ಗಡಿಯಲ್ಲಿ ಎಚ್ಚರಿಕೆ ಅಗತ್ಯ

ಕರ್ನಾಟಕದ ಅಕ್ಕಪಕ್ಕದ ರಾಜ್ಯಗಳಲ್ಲಿ ಕೋವಿಡ್​ ಸೋಂಕಿತರ ಸಂಖ್ಯೆ ಫೆಬ್ರವರಿಯಿಂದ ಕಡಿಮೆಯಾಗಿತ್ತು. ಆದ್ರೆ ಬುಧವಾರ ದಿಢೀರ್​ ಏರಿಕೆಯಾಗಿದೆ. ಕರ್ನಾಟಕದ ಗಡಿಯಲ್ಲಿ ಎಚ್ಚರಿಕೆ ವಹಿಸುವ ಅಗತ್ಯತೆ ಇದೆ.

COVID-19 cases after Feb 24
ಕೊವಿಡ್​
author img

By

Published : Jun 1, 2022, 11:07 PM IST

ಮುಂಬೈ/ ಕೊಚ್ಚಿನ್​: ಕರ್ನಾಟಕದ ಅಕ್ಕಪಕ್ಕದ ರಾಜ್ಯಗಳಲ್ಲಿ ಕೋವಿಡ್​ ಸೋಂಕಿತರ ಸಂಖ್ಯೆ ಫೆಬ್ರವರಿಯಿಂದ ನಿಧಾನಗತಿಯಲ್ಲಿ ಏರಿಕೆ ಕಂಡು ಬರುತ್ತಿದೆ. ಮಹಾರಾಷ್ಟ್ರದಲ್ಲಿ ಇಂದು 1,081 ಹೊಸ ಪ್ರಕರಣ ಪತ್ತೆಯಾಗಿದೆ. ಫೆಬ್ರವರಿ 24 ರ ನಂತರ ದೈನಂದಿನ ಅತ್ಯಧಿಕ ಏರಿಕೆ ಇದಾಗಿದೆ ಎಂದು ಮಹಾರಾಷ್ಟ್ರ ರಾಜ್ಯ ಆರೋಗ್ಯ ಇಲಾಖೆ ಬುಲೆಟಿನ್‌ನಲ್ಲಿ ತಿಳಿಸಿದೆ.

ಇತ್ತ ಕೇರಳದಲ್ಲಿ 1370 ಮಂದಿಗೆ ಸೋಂಕು ದೃಢವಾಗಿದೆ. ಸೋಂಕಿನಿಂದ 630 ಗುಣಮುಖರಾಗಿದ್ದಾರೆ. ಆದರೆ 6 ಸಾವುಗಳು ಸಂಭವಿಸಿವೆ. ಕರ್ನಾಟಕ ಗಡಿ ಹಂಚಿಕೊಂಡಿರುವ ರಾಜ್ಯಗಳಲ್ಲಿ ಸೋಂಕಿನ ಸಂಖ್ಯೆ ಏರಿಕೆ ಆಗುತ್ತಿರುವುದು ಮತ್ತೆ ಭೀತಿಗೆ ಕಾರಣವಾಗಿದೆ. ಮೊದಲನೇ ಮತ್ತು ಎರಡನೇ ಅಲೆಯಲ್ಲಿ ಪಕ್ಕದ ರಾಜ್ಯಗಳಿಂದಾದ ಸಮಸ್ಯೆಯನ್ನು ರಾಜ್ಯ ಮರೆಯುವಂತಿಲ್ಲ.

ಕೇರಳದಲ್ಲಿ ಈವರೆಗೆ 65,59,623 ಪ್ರಕರಣಗಳು ದಾಖಲಾಗಿದ್ದರೆ, 6,129 ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ 78,88,167 ಕ್ಕೆ ಮತ್ತು 1,47,860 ಕ್ಕೆ ಸೋಂಕಿತರ ಸಂಖ್ಯೆ ಏರಿದೆ. ಒಟ್ಟಿನಲ್ಲಿ ಕರ್ನಾಟಕದಲ್ಲಿ ಗಡಿಯಲ್ಲಿ ಎಚ್ಚರಿಕೆ ವಹಿಸುವ ಅಗತ್ಯತೆ ಎದ್ದುಕಾಣುತ್ತಿದೆ.

ಇದನ್ನೂ ಓದಿ:ಪಿಎಫ್‌ಐ - ಆರ್‌ಐಎಫ್​ಗೆ ಸೇರಿದ 33 ಬ್ಯಾಂಕ್ ಖಾತೆ​ಗಳ ಜಪ್ತಿ ಮಾಡಿದ ಇಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.