ETV Bharat / bharat

ಕೊರೊನಾಗೆ ತುತ್ತಾಗುತ್ತಿರುವ ಭಾರತದ ವಾಣಿಜ್ಯ ನಗರಿ... ಲಾಕ್​ಡೌನ್​ಗೆ ‘ಮಹಾ’ ಚಿಂತನೆ!

ಭಾರತದ ವಾಣಿಜ್ಯ ನಗರಿ ಮುಂಬೈಯಲ್ಲಿ ಕೋವಿಡ್​ ಸ್ಫೋಟಗೊಂಡಿದೆ. ನಗರದಲ್ಲಿ ಮಂಗಳವಾರ 24 ಗಂಟೆಗಳ ಅವಧಿಯಲ್ಲಿ 10,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಒಟ್ಟಾರೆ ಮಹಾರಾಷ್ಟ್ರದಲ್ಲಿ 18,000 ಪ್ರಕರಣಗಳು ಮತ್ತು 20 ಸಾವುಗಳು ವರದಿಯಾಗಿದೆ.

Maharashtra corona report  Covid surge in Mumbai  Lockdown in Mumbai  Maharashtra lockdown  Corona wave in Mumbai  ಮಹಾರಾಷ್ಟ್ರ ಕೋವಿಡ್​ ವರದಿ  ಕೋವಿಡ್​ನಿಂದ ಬಳಲುತ್ತಿರುವ ಮುಂಬೈ  ಮುಂಬೈಯಲ್ಲಿ ಲಾಕ್​ಡೌನ್​ ಮಹಾರಾಷ್ಟ್ರ ಲಾಕ್​ಡೌನ್​ ಮುಂಬೈಯಲ್ಲಿ ಕೊರೊನಾ ಅಲೆ
ಕೊರೊನಾಗೆ ತುತ್ತಾಗುತ್ತಿರುವ ಭಾರತದ ವಾಣಿಜ್ಯ ರಾಜಧಾನಿ ಮುಂಬೈ
author img

By

Published : Jan 5, 2022, 9:21 AM IST

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಮಂಗಳವಾರ 24 ಗಂಟೆಗಳ ಅವಧಿಯಲ್ಲಿ 20 ಕೋವಿಡ್ ಪೀಡಿತ ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ನಿನ್ನೆ ಒಂದೇ ದಿನ 18,000 ಕ್ಕೂ ಹೆಚ್ಚು ಪ್ರಕರಣಗಳನ್ನು ಕಂಡು ಬಂದಿದ್ದು, ಕೋವಿಡ್​ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 18,466 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿವೆ. 10,860 ಪ್ರಕರಣಗಳು ಮುಂಬೈ ಒಂದರಿಂದಲೇ ವರದಿಯಾಗಿದ್ದು, ಇದು ಏಪ್ರಿಲ್ 7, 2021 ರಿಂದ ನಗರದಲ್ಲಿ ಅತಿ ಹೆಚ್ಚು ದೈನಂದಿನ ಕೋವಿಡ್​ ಪ್ರಕರಣಗಳಾಗಿವೆ.

ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಮಾತನಾಡಿ, ದೈನಂದಿನ ಕೋವಿಡ್ ಪ್ರಕರಣಗಳು 20,000 ಗಡಿ ದಾಟಿದರೆ ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ನಗರದಲ್ಲಿ ಲಾಕ್‌ಡೌನ್ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಸಾರ್ವಜನಿಕ ಬಸ್‌ಗಳು ಮತ್ತು ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುವಾಗ ಜನರು ಟ್ರಿಪಲ್-ಲೇಯರ್ ಮಾಸ್ಕ್​ಗಳನ್ನು ಧರಿಸಬೇಕು. ಆದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳಲು ಮತ್ತು ಎಲ್ಲ ಕೋವಿಡ್​ ಸಂಬಂಧಿತ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‌ಗಳನ್ನು (SOPs) ಅನುಸರಿಸುವಂತೆ ಮುಂಬೈ ಮೇಯರ್​​ ಮನವಿ ಮಾಡಿದರು.

ಕೋವಿಡ್​ನ ಹೊಸ ರೂಪಾಂತರ ಓಮಿಕ್ರಾನ್ ಪ್ರಕರಣಗಳು ಕೂಡ 653 ಕ್ಕೆ ಏರಿದೆ. ಒಟ್ಟಿನಲ್ಲಿ ಮಹಾ ರಾಜ್ಯದಲ್ಲಿ ಈಗ 66,308 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 1,41,573 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 4,558 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಬೃಹತ್​ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಮುಂಬೈನಲ್ಲಿ ಕಟ್ಟಡಗಳನ್ನು ಮುಚ್ಚಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇನ್ನು ಪಶ್ಚಿಮ​ ಬಂಗಾಳದಲ್ಲಿಯೂ ಕೋವಿಡ್​ ಮಹಾ ಸ್ಫೋಟಗೊಂಡಿದೆ. ಕಳೆದ 24 ಗಂಟೆಯಲ್ಲಿ 9 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.