ETV Bharat / bharat

ಏಳು ಜನರ ಹತ್ಯೆ ಪ್ರಕರಣ: ಮಾಫಿಯಾ ಬ್ರಿಜೇಶ್ ಸಿಂಗ್​ಗೆ ಹೈಕೋರ್ಟ್​ನಿಂದ ಬಿಗ್ ರಿಲೀಫ್ - ಚಂದೌಲಿ ಜಿಲ್ಲೆಯಲ್ಲಿ ಸಾಮೂಹಿಕ ಹತ್ಯಾಕಾಂಡ

ಮಾಫಿಯಾ ಬ್ರಿಜೇಶ್ ಸಿಂಗ್​ಗೆ ಹೈಕೋರ್ಟ್​ನಿಂದ ಬಿಗ್ ರಿಲೀಫ್ ಸಿಕ್ಕಿದೆ. 37 ವರ್ಷಗಳ ಹಿಂದಿನ ಏಳು ಜನರ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿದೆ.

ಹೈಕೋರ್ಟ್‌
ಹೈಕೋರ್ಟ್‌
author img

By ETV Bharat Karnataka Team

Published : Nov 20, 2023, 9:13 PM IST

ಪ್ರಯಾಗರಾಜ್ : ಮಾಫಿಯಾ ಬ್ರಿಜೇಶ್ ಸಿಂಗ್‌ಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ. 37 ವರ್ಷಗಳ ಹಿಂದೆ ಏಳು ಜನರ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿದೆ. ಈ ಪ್ರಕರಣದಲ್ಲಿ ಒಟ್ಟು 13 ಮಂದಿ ಆರೋಪಿಗಳಿದ್ದರು.

ಮುಖ್ಯ ನ್ಯಾಯಮೂರ್ತಿ ಪ್ರಿತಿಂಕರ್ ದಿವಾಕರ್ ಮತ್ತು ನ್ಯಾಯಮೂರ್ತಿ ಅಜಯ್ ಭಾನೋಟ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. 2018 ರಲ್ಲಿ ಅವರನ್ನು ಆರೋಪಗಳಿಂದ ಖುಲಾಸೆಗೊಳಿಸಿದ ಕೆಳ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಈ ತೀರ್ಪಿನ ವಿರುದ್ಧ ನೊಂದ ಸಂತ್ರಸ್ತೆ ಹೀರಾವತಿ ಹೈಕೋರ್ಟ್‌ನ ಮೊರೆಹೋಗಿ ತೀರ್ಪನ್ನು ಪ್ರಶ್ನಿಸಿದ್ದರು. ನಂತರ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಲಯ ಈ ತಿಂಗಳ ಆರಂಭದಲ್ಲಿ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ಆದಾಗ್ಯೂ, ಇದೇ ಪ್ರಕರಣದಲ್ಲಿ ದೇವೇಂದ್ರ ಸಿಂಗ್, ವಕೀಲ್ ಸಿಂಗ್, ರಾಕೇಶ್ ಸಿಂಗ್ ಮತ್ತು ಪಂಚಮ್ ಸಿಂಗ್ ಸೇರಿದಂತೆ ನಾಲ್ವರು ಆರೋಪಿಗಳಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಒಂದೇ ಕುಟುಂಬದ ಏಳು ಜನರ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ಈ ನಾಲ್ವರ ಮೇಲೆ ಆರೋಪ ಕೇಳಿಬಂದಿತ್ತು.

ಏನಿದು ಪ್ರಕರಣ ? : ಹಿರಾವತಿಯ ಪತಿ, ಇಬ್ಬರು ಸೋದರ ಮಾವಂದಿರು ಮತ್ತು ನಾಲ್ವರು ಅಮಾಯಕ ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಮಾಫಿಯಾ ಬ್ರಿಜೇಶ್ ಸಿಂಗ್ ಮತ್ತು ಆತನ ಸಹಚರರು ಈ ಹತ್ಯೆಯ ಆರೋಪಿಗಳಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯವು 2018 ರಲ್ಲಿ ನೀಡಿದ ತೀರ್ಪಿನಲ್ಲಿ ಎಲ್ಲ 13 ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಸಂತ್ರಸ್ತೆ ತನ್ನ ಮೇಲ್ಮನವಿಯಲ್ಲಿ ವಾರಾಣಸಿ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ್ದರು. ಸಾಕ್ಷಿಗಳ ಹೇಳಿಕೆಗಳಲ್ಲಿನ ವ್ಯತ್ಯಾಸದ ಆಧಾರದ ಮೇಲೆ ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿದೆ.

ವಾರಾಣಸಿ ಜಿಲ್ಲೆಯ ಬಲುವಾ ಪೊಲೀಸ್ ಠಾಣೆಯಲ್ಲಿ ಬ್ರಿಜೇಶ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಐಪಿಸಿ ಸೆಕ್ಷನ್ 148, 149, 302, 307, 120 ಬಿ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 ರ ಅಡಿಯಲ್ಲಿ ಎಫ್‌ಐಆರ್ ದರ್ಜ್​ ಮಾಡಲಾಗಿತ್ತು. 36 ವರ್ಷಗಳ ಹಿಂದೆ 1987 ರಲ್ಲಿ ಚಂದೌಲಿ ಜಿಲ್ಲೆಯಲ್ಲಿ ಈ ಸಾಮೂಹಿಕ ಹತ್ಯಾಕಾಂಡ ನಡೆದಿತ್ತು. ಏಳು ಜನರ ಹತ್ಯೆ ಪ್ರಕರಣದಲ್ಲಿ ಬ್ರಿಜೇಶ್ ಸಿಂಗ್ ಅವರು ಆರೋಪಿಯಾಗಿದ್ದರು. ವಿಚಾರಣಾ ನ್ಯಾಯಾಲಯ ಮತ್ತು ಸೆಷನ್ಸ್ ನ್ಯಾಯಾಲಯ 2018 ರಲ್ಲಿ ಬ್ರಿಜೇಶ್ ಅವರನ್ನು ಖುಲಾಸೆಗೊಳಿಸಿದ್ದವು,

ಇದನ್ನೂ ಓದಿ: ಮೃತಪಟ್ಟ ವಿವಾಹಿತ ಪುತ್ರನ ಆಸ್ತಿಯಲ್ಲಿ ತಾಯಿಗೆ ಪಾಲಿಲ್ಲ: ಮದ್ರಾಸ್​ ಹೈಕೋರ್ಟ್​ ಮಹತ್ವದ ತೀರ್ಪು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.