ETV Bharat / bharat

ಮಾಫಿಯಾ ಡಾನ್​ ಅತೀಕ್​ ಅಹ್ಮದ್ ಕೊಲೆ: ಗುಂಡಿಕ್ಕಿದ ಮೂವರ ಬಂಧನ, ಯುಪಿಯಲ್ಲಿ ನಿಷೇಧಾಜ್ಞೆ ಜಾರಿ - ಮಾಫಿಯಾ ಡಾನ್​ ಅತೀಕ್ ಅಹ್ಮದ್

ಮಾಫಿಯಾ ಡಾನ್​ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್​ನನ್ನು ಗುಂಡಿಕ್ಕಿದ ಆರೋಪಿಗಳನ್ನು ಬಂಧಿಸಲಾಗಿದೆ. ರಾಜ್ಯದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಮಾಫಿಯಾ ಡಾನ್​ ಅತೀಕ್​ ಅಹ್ಮದ್ ಕೊಲೆ
ಮಾಫಿಯಾ ಡಾನ್​ ಅತೀಕ್​ ಅಹ್ಮದ್ ಕೊಲೆ
author img

By

Published : Apr 16, 2023, 7:58 AM IST

Updated : Apr 16, 2023, 9:04 AM IST

ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ಮಾಜಿ ಶಾಸಕ, ಸಂಸದ ಮತ್ತು ಮಾಫಿಯಾ ಡಾನ್​ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್​ ಅವರನ್ನು ಶನಿವಾರ ರಾತ್ರಿ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾಗ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ದಾಳಿ ಮಾಡಿದ ಮೂವರನ್ನು ಬಂಧಿಸಲಾಗಿದೆ. ಅಲ್ಲದೇ, ಅಹಿತಕರ ಘಟನೆ ತಡೆಗೆ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಿನ್ನೆ ರಾತ್ರಿಯಿಂದ ಪೊಲೀಸರು ಜಿಲ್ಲೆಗಳಲ್ಲಿ ಗಸ್ತು ಹೆಚ್ಚಿಸಿದ್ದಾರೆ.

ಆರೋಪಿಗಳನ್ನು ಲವಲೇಶ್​ ತಿವಾತಿ, ಸನ್ನಿ ಹಾಗೂ ಅರುಣ್​ ಮೌರ್ಯ ಎಂದು ಗುರುತಿಸಲಾಗಿದೆ. ಪತ್ರಕರ್ತರ ಸೋಗಿನಲ್ಲಿ ಬಂದ ಆರೋಪಿಗಳು ಹೇಳಿಕೆ ಪಡೆಯುವಾಗ ಪಿಸ್ತೂಲಿನಿಂದ ಅತೀಕ್​ ಮತ್ತು ಅಶ್ರಫ್​ ತಲೆಗೆ ಗುಂಡಿಕ್ಕಿದ್ದಾರೆ. ತೀವ್ರ ರಕ್ತಸ್ರಾವದಿಂದ ಇಬ್ಬರೂ ನೆಲಕ್ಕುರುಳಿದರು. ಇದಾದ ಬಳಿಕವೂ ಅವರು ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣವೇ ಪೊಲೀಸರು ಮೂವರು ಆರೋಪಿಗಳನ್ನು ಹಿಡಿದು ಬಂಧಿಸಿದರು. ಘಟನಾ ಸ್ಥಳದಿಂದ ಮೃತದೇಹಗಳನ್ನು ಪೊಲೀಸರು ವಶಕ್ಕೆ ಪಡೆದರು.

ಪತ್ರಕರ್ತರ ವೇಷದಲ್ಲಿ ದಾಳಿ: ಅತೀಕ್​ ಅಹ್ಮದ್​ ಮತ್ತು ಆತನ ಸಹೋದರನನ್ನು ಆಸ್ಪತ್ರೆಗೆ ಕೈಕೋಳ ಹಾಕಿಕೊಂಡು ಕರೆದೊಯ್ಯುತ್ತಿದ್ದಾಗ ಮಾಧ್ಯಮದವರು ಡಾನ್​ಗಳ ಹೇಳಿಕೆ ಪಡೆಯುತ್ತಿದ್ದರು. ಈ ವೇಳೆ ಪತ್ರಕರ್ತರ ವೇಷದಲ್ಲಿದ್ದ ಆರೋಪಿಗಳು ಹಿಂದಿನಿಂದ ಬಂದು ಅತೀಕ್​ ತಲೆಗೆ ಪಿಸ್ತೂಲ್​ ಇಟ್ಟು ಗುಂಡು ಹಾರಿಸಿದರು. ಬಳಿಕ ಅಶ್ರಫ್​ನಿಗೂ ಗುಂಡು ಹಾರಿಸಲಾಯಿತು. ನೆಲಕ್ಕುರುಳಿ ಬಿದ್ದ ಇಬ್ಬರೂ ಸಾವನ್ನಪ್ಪಿದರು.

ಡಾನ್​ಗಳನ್ನು ಗುಂಡಿಕ್ಕಿ ಹತ್ಯೆಗೈದ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿದೆ. ಅತೀಕ್​ ಅಹ್ಮದ್​ನ ಪುತ್ರನನ್ನು 2 ದಿನಗಳ ಹಿಂದಷ್ಟೇ ಹತ್ಯೆ ಮಾಡಲಾಗಿತ್ತು. ಇದಾದ ಬೆನ್ನಲ್ಲೇ ಅತೀಕ್​​ನನ್ನು ಕೊಲೆ ಮಾಡಲಾಗಿದೆ. ನಿನ್ನೆಯಷ್ಟೇ ಪುತ್ರನ ಶವಸಂಸ್ಕಾರ ಮಾಡಲಾಗಿತ್ತು.

ಸಿಎಂ ಯೋಗಿ ಸಭೆ: ಹತ್ಯೆಯಾದ ಬಳಿಕ ರಾಜ್ಯದಲ್ಲಿ ಅಹಿತಕರ ಘಟನೆ ನಡೆಯದಂತೆ ಸಿಎಂ ಯೋಗಿ ಆದಿತ್ಯನಾಥ್​ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ. ಘಟನೆಯ ಬಳಿಕ ತಡರಾತ್ರಿ ಹಿರಿಯ ಪೊಲೀಸ್​ ಅಧಿಕಾರಿಗಳ ಸಭೆ ಕರೆದ ಸಿಎಂ, ಯಾವುದೇ ರೀತಿಯ ವದಂತಿಗಳಿಗೆ ಸಾರ್ವಜನಿಕರು ಕಿವಿಡಗೊಡಬಾರದು. ವದಂತಿಗಳನ್ನು ಹರಡುವ ಮತ್ತು ತೊಂದರೆ ನೀಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು. ಅತೀಕ್ ಮತ್ತು ಅವರ ಸಹೋದರನ ಹತ್ಯೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಯುಪಿ ಸರ್ಕಾರ ಆದೇಶಿಸಿದೆ.

ರಾಜಕೀಯ ಟೀಕೆಗೆ ಅಸ್ತ್ರ: ರಾಜಕಾರಣಿಯಾಗಿದ್ದ ಡಾನ್​ ಅತೀಕ್ ಅಹ್ಮದ್ ಮತ್ತು ಅವರ ಸಹೋದರನ ಹತ್ಯೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪ್ರತಿಪಕ್ಷ ನಾಯಕರು ಯೋಗಿ ಆದಿತ್ಯನಾಥ್​ ನೇತೃತ್ವದ ಉತ್ತರ ಪ್ರದೇಶ ಸರ್ಕಾರವನ್ನು ಗುರಿಯಾಗಿಸಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ "ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಉತ್ತುಂಗಕ್ಕೇರಿವೆ. ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು ದರೋಡೆಕೋರರ ಜೊತೆಗೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸಹ ಕೊಲೆ ಮಾಡಲಾಗಿದೆ ಎಂದು ಹೇಳಿದರು.

ಅಖಿಲೇಶ್ ಯಾದವ್ ಹಿಂದಿಯಲ್ಲಿ ಟ್ವೀಟ್ ಮಾಡಿ, "ಉತ್ತರಪ್ರದೇಶದಲ್ಲಿ ಅಪರಾಧ ಉತ್ತುಂಗಕ್ಕೇರಿದೆ. ಅಪರಾಧಿಗಳ ಸ್ಥೈರ್ಯ ಹೆಚ್ಚಾಗಿದೆ. ಪೊಲೀಸರ ಭದ್ರತೆಯ ನಡುವೆ ಬಹಿರಂಗವಾಗಿ ಗುಂಡು ಹಾರಿಸಿದರೆ, ಸಾರ್ವಜನಿಕರ ಸುರಕ್ಷತೆಯ ಕತೆಯೇನು? ಕೆಲವರು ಉದ್ದೇಶಪೂರ್ವಕವಾಗಿ ಇಂತಹ ವಾತಾವರಣ ಸೃಷ್ಟಿಸುತ್ತಿರುವಂತೆ ಕಾಣುತ್ತಿದೆ’’ ಎಂದು ಹೇಳಿದರು.

ಓದಿ: ಗ್ಯಾಂಗ್​ಸ್ಟರ್​ - ರಾಜಕಾರಣಿ ಅತೀಕ್ ಅಹ್ಮದ್, ಸಹೋದರ ಅಶ್ರಫ್​ಗೆ​ ಗುಂಡಿಕ್ಕಿ ಹತ್ಯೆ

Last Updated : Apr 16, 2023, 9:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.