ಲಖನೌ (ಉತ್ತರ ಪ್ರದೇಶ): ರಾಜಕಾರಣಿಯಾಗಿ ಬದಲಾಗಿರುವ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಪುತ್ರ ಅಸದ್ ಸೇರಿ ಇಬ್ಬರು ಪೊಲೀಸ್ ಎನ್ಕೌಂಟರ್ನಲ್ಲಿ ಹತರಾಗಿದ್ದಾರೆ. ಝಾನ್ಸಿಯಲ್ಲಿ ಈ ಎನ್‌ಕೌಂಟರ್ ನಡೆದಿದ್ದು, ಅತ್ಯಾಧುನಿಕ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಯಾಗ್‌ರಾಜ್‌ನ ವಕೀಲ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅಸದ್ ಮತ್ತು ಶೂಟರ್ ಗುಲಾಮ್ ಎಂಬುವವರು ಪೊಲೀಸರಿಗೆ ಬೇಕಾಗಿದ್ದರು. ಅಲ್ಲದೇ, ಈ ಇಬ್ಬರ ಬಗ್ಗೆ ಸುಳಿವು ನೀಡಿದವರಿಗೆ ತಲಾ ಐದು ಲಕ್ಷ ರೂಪಾಯಿ ಬಹುಮಾನವನ್ನು ಪೊಲೀಸರು ಘೋಷಿಸಿದ್ದರು. ಇಂದು ಡಿವೈಎಸ್ಪಿ ನಾವೆಂದು ನೇತೃತ್ವದ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಯುಪಿಎಸ್ಟಿಎಫ್) ತಂಡದೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಇಬ್ಬರೂ ಸಹ ಹತರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
-
Asad, son of mafia-turned-politician Atiq Ahmed and Ghulam S/o Maksudan, both wanted in Umesh Pal murder case of Prayagraj and carrying a reward of Rupees five lakhs each; killed in encounter with the UPSTF team led by DySP Navendu and DySP Vimal at Jhansi. Sophisticated foreign… pic.twitter.com/dAIS6iMM3G
— ANI (@ANI) April 13, 2023 " class="align-text-top noRightClick twitterSection" data="
">Asad, son of mafia-turned-politician Atiq Ahmed and Ghulam S/o Maksudan, both wanted in Umesh Pal murder case of Prayagraj and carrying a reward of Rupees five lakhs each; killed in encounter with the UPSTF team led by DySP Navendu and DySP Vimal at Jhansi. Sophisticated foreign… pic.twitter.com/dAIS6iMM3G
— ANI (@ANI) April 13, 2023Asad, son of mafia-turned-politician Atiq Ahmed and Ghulam S/o Maksudan, both wanted in Umesh Pal murder case of Prayagraj and carrying a reward of Rupees five lakhs each; killed in encounter with the UPSTF team led by DySP Navendu and DySP Vimal at Jhansi. Sophisticated foreign… pic.twitter.com/dAIS6iMM3G
— ANI (@ANI) April 13, 2023
ಫೆಬ್ರವರಿ 24ರಂದು ಧೂಮಂಗಂಜ್‌ನಲ್ಲಿ ಉಮೇಶ್ ಪಾಲ್ ಮೇಲೆ ಅಸಾದ್ ಗುಂಡಿನ ದಾಳಿ ನಡೆಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇಂದು ಅಸದ್ ಮತ್ತು ಶೂಟರ್ ಗುಲಾಮ್ ಇಬ್ಬರಿಗೂ ಶರಣಾಗುವಂತೆ ಪೊಲೀಸ್ ತಂಡ ಸೂಚಿಸಿತ್ತು. ಆದರೆ, ಪೊಲೀಸರ ಮೇಲೆ ಆರೋಪಿಗಳು ಗುಂಡು ಹಾರಿಸಿದರು. ಇದರಿಂದ ನಮ್ಮ ಪೊಲೀಸ್ ತಂಡವು ಪ್ರತಿದಾಳಿ ನಡೆಸಬೇಕಾಯಿತು ಎಂದು ವಿಶೇಷ ಕಾರ್ಯಪಡೆ ಎಡಿಜಿ ಅಮಿತಾಭ್ ಯಶ್ ತಿಳಿಸಿದ್ದಾರೆ.
ಮತ್ತೊಂದೆಡೆ, ಇದೇ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ನನ್ನು ಇಂದು ಬೆಳಗ್ಗೆ ಪ್ರಯಾಗರಾಜ್‌ನಲ್ಲಿರುವ ಸಿಜೆಎಂ ನ್ಯಾಯಾಲಯಕ್ಕೆ ಪೊಲೀಸರು ಕರೆತಂದಿದ್ದಾರೆ. ತನ್ನ ಮಗನ ಎನ್‌ಕೌಂಟರ್ ಬಗ್ಗೆ ತಿಳಿಸಿದಾಗ ಅತೀಕ್ ಅಹ್ಮದ್ ಕಣ್ಣೀರು ಹಾಕಿದರು ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.
ಏನಿದು ಉಮೇಶ್ ಪಾಲ್ ಕೇಸ್ ?: 2005ರ ಜನವರಿ 25ರಂದು ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆ ನಡೆದಿತ್ತು. ಈ ಕೊಲೆ ಪ್ರಕರಣದ ಪ್ರತ್ಯಕ್ಷದರ್ಶಿ ಮತ್ತು ಪ್ರಮುಖ ಸಾಕ್ಷಿ ವಕೀಲ ಉಮೇಶ್ ಪಾಲ್ ಆಗಿದ್ದರು. 2023ರ ಫೆಬ್ರುವರಿ 24ರಂದು ಉಮೇಶ್ ಪಾಲ್ ಅವರನ್ನೂ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು.
ಆದರೆ, ಇದಕ್ಕೂ ಮೊದಲು ಎಂದರೆ 2005-06 ಸಾಲಿನಲ್ಲೇ ಪ್ರಕರಣದಿಂದ ಹಿಂದೆ ಸರಿಯುವಂತೆ ಉಮೇಶ್ ಪಾಲ್ಗೆ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಬೆದರಿಕೆಯಾಗಿದ್ದ. ಈ ವೇಳೆ ಇದಕ್ಕೊಪ್ಪದ ಕಾರಣಕ್ಕೆ ಉಮೇಶ್ ಪಾಲ್ರನ್ನು 2006ರ ಫೆಬ್ರವರಿ 28ರಂದು ಅಪಹರಣ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಇದೇ ಮಾರ್ಚ್ 28ರಂದು ಅತೀಕ್ ಅಹ್ಮದ್ ಸೇರಿದಂತೆ ಮೂವರಿಗೆ ಪ್ರಯಾಗ್‌ರಾಜ್ ಕೋರ್ಟ್ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.
ಇನ್ನು, ಅತೀಕ್ ಅಹ್ಮದ್ ವಿರುದ್ಧ ಒಟ್ಟಾರೆ 101 ಪ್ರಕರಣಗಳು ದಾಖಲಾಗಿವೆ. ಆತನ ಸಹೋದರ ಅಶ್ರಫ್ ಕೂಡ ವಿರುದ್ಧ 50ಕ್ಕೂ ಹೆಚ್ಚು ಪ್ರಕರಣಗಳು ಇವೆ. ಅತೀಕ್ನ ಪತ್ನಿ ಶೈಸ್ತಾ ಪರ್ವೀನ್ ಮತ್ತು ಮಕ್ಕಳ ಮೇಲೂ ಪೊಲೀಸ್ ಪ್ರಕರಣಗಳು ದಾಖಲಾಗಿವೆ. ಆದರೆ, ಇಲ್ಲಿಯವರೆಗೆ ಅತೀಕ್ ಮತ್ತು ಈತನ ಸಹೋದರರಿಗೆ ಯಾವುದೇ ಪ್ರಕರಣದಲ್ಲಿ ಶಿಕ್ಷೆಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ಅತೀಕ್ ಅಹ್ಮದ್ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ: 101 ಕೇಸ್ ಎದುರಿಸುತ್ತಿರುವ ಮಾಫಿಯಾ ಡಾನ್ ಅತೀಕ್ ಅಹ್ಮದ್: ಕಿಡ್ನಾಪ್ ಕೇಸ್ನಲ್ಲಿ ಜೀವಾವಧಿ ಶಿಕ್ಷೆ