ಭೋಪಾಲ್ (ಮಧ್ಯಪ್ರದೇಶ): ಯುವಕನೊಬ್ಬ ಕಾರ್ ಸ್ಟಂಟ್ ಮಾಡುವ ವೇಳೆ ಹಿಂಭಾಗದ ಟೈರ್ ಕಳಚಿ ಪಲ್ಟಿ ಹೊಡೆದ ಘಟನೆ ನಡೆದಿದೆ. ಘಟನೆಯಲ್ಲಿ ಯುವಕನಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೋನಿಶ್, ಅಪಘಾತದಲ್ಲಿ ಗಾಯಗೊಂಡಿರುವ ಯುವಕ. ಈತ ಇಲ್ಲಿನ ಸೆಪಿಯಾ ಮೈದಾನದಲ್ಲಿ ಕಾರ್ ಸ್ಟಂಟ್ ಮಾಡಲು ಮುಂದಾಗಿದ್ದ. ಗಂಟೆಗೆ ಸುಮಾರು 70 ಕಿ.ಮೀ ವೇಗದಲ್ಲಿ ಪ್ರಯಾಣಿಸುವಾಗ ಕಾರ್ನ ಟೈರ್ ಕಳಚಿಕೊಂಡಿದೆ.
ಹೀಗಾಗಿ ನಿಯಂತ್ರಣ ತಪ್ಪಿದ ಕಾರ್ ಒಮ್ಮಲೆ ಪಲ್ಟಿಯಾಗಿದೆ. ಘಟನೆಯಲ್ಲಿ ಮೋನಿಶ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.