ಚೆನ್ನೈ (ತಮಿಳುನಾಡು): ನೀಟ್ ಪರೀಕ್ಷಾ ಫಲಿತಾಂಶದಲ್ಲಿ ಅಂಕಗಳನ್ನು ತಪ್ಪಾಗಿ ನೀಡಲಾಗಿದೆ ಎಂದು ಆರೋಪಿ ತಮಿಳುನಾಡಿನ ಮಧುರೈನ ವಿದ್ಯಾರ್ಥಿನಿಯೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯವು ವಿದ್ಯಾರ್ಥಿನಿಯ ಆರೋಪದ ಬಗ್ಗೆ ಪರೀಕ್ಷಾ ಸಂಸ್ಥೆ ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆದೇಶಿಸಿದೆ. ಅಲ್ಲದೇ, ಪ್ರಕರಣದ ವಿಚಾರಣೆಯನ್ನು 2 ವಾರಗಳ ಕಾಲ ಮುಂದೂಡಿದೆ.
ಮಧುರೈನ ಜಯಚಿತ್ರಾ ಎಂಬ ವಿದ್ಯಾರ್ಥಿನಿ ಹೈಕೋರ್ಟ್‌ನ ಮಧುರೈ ಪೀಠದಲ್ಲಿ ಈ ಅರ್ಜಿ ಸಲ್ಲಿಸಿದ್ದಾರೆ. ನಾನು ವೈದ್ಯಕೀಯ ಅಧ್ಯಯನಕ್ಕಾಗಿ ರಾಷ್ಟ್ರೀಯ ಪ್ರವೇಶ ಪರೀಕ್ಷೆಯಾದ ನೀಟ್ಗೆ ಹಾಜರಾಗಿದ್ದೇನೆ. 200 ಪ್ರಶ್ನೆಗಳಲ್ಲಿ ನಾನು 141 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ್ದೇನೆ. ಇದಾದ ನಂತರ ಪರೀಕ್ಷಾ ಸಂಸ್ಥೆ ಆನ್‌ಲೈನ್‌ನಲ್ಲಿ ಉತ್ತರಗಳನ್ನು ಅಪ್ಲೋಡ್ ಮಾಡಿತ್ತು. ಇದರಲ್ಲಿ 720 ಅಂಕಗಳಲ್ಲಿ ನನಗೆ ಸರಿಯಾಗಿ 564 ಅಂಕಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಆದರೆ, ಕಳೆದ 7ರಂದು ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಅದರಲ್ಲಿ ನನಗೆ ಕೇವಲ 114 ಅಂಕಗಳನ್ನು ನೀಡಲಾಗಿದೆ. ಆದರೆ, ಶೇ.48.8ರಷ್ಟು ಫಲಿತಾಂಶ ಬಂದಿದೆ ಎಂದು ತಿಳಿಸಲಾಗಿದೆ. ಹೀಗಾಗಿ ಇದರಲ್ಲಿ ತಪ್ಪಿದೆ. ನಾನು ಬರೆದಿರುವ ಒಎಂಆರ್ ಶೀಟ್ ಪರಿಶೀಲಿಸಿ, ನನಗೆ ಸೂಕ್ತವಾದ ಅಂಕಪಟ್ಟಿ ನೀಡಬೇಕು ಎಂದು ವಿದ್ಯಾರ್ಥಿನಿ ಮನವಿ ಮಾಡಿದ್ದಾರೆ.
ಈ ಅರ್ಜಿ ಇಂದು ನ್ಯಾಯಮೂರ್ತಿ ಭವಾನಿ ಸುಪ್ಪರಾಯನ್ ಅವರ ಮುಂದೆ ಇದರ ವಿಚಾರಣೆಗೆ ಬಂದಿತ್ತು. ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಮಾತ್ರ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿನಿ ಸೀಟ್ ಸಿಗುತ್ತದೆ ಎಂಬ ವಿದ್ಯಾರ್ಥಿನಿಯ ಅರ್ಜಿಯನ್ನು ಪುರಸ್ಕರಿಸಿದರು. ಅಲ್ಲದೇ, ಈ ಬಗ್ಗೆ ಸೂಕ್ತ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನ್ಯಾಯಮೂರ್ತಿಗಳು ಆದೇಶಿಸಿದರು.
ಇದನ್ನೂ ಓದಿ: ಅಸ್ಸೋಂನ ಐಐಟಿಯಲ್ಲಿ ಕೇರಳ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು.. ಕಾರಣ ನಿಗೂಢ