ಮಧುರೈ: ಬಾಲಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನರನ್ನು ಬಂಧಿಸಿದ್ದು, ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂದು ಪೊಲೀಸ್ ಉನ್ನತಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಏನಿದು ಘಟನೆ: ಫೆಬ್ರವರಿ 14 ರಂದು ಯುವಕನೊಬ್ಬ ತನ್ನ 17 ವರ್ಷದ ಗೆಳತಿಯೊಂದಿಗೆ ಮೇಲೂರಿನಿಂದ ಪರಾರಿಯಾಗಿದ್ದ. ವಿಷಯ ತಿಳಿದ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಬಾಲಕಿಯ ಹುಡುಕಾಟಕ್ಕೆ ಮೂರು ಪ್ರತ್ಯೇಕ ತಂಡಗಳನ್ನು ರಚಿಸಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದರು.
ಓದಿ: ಸಿಎಎ ಕಾಯ್ದೆ: ಇನ್ನೂ ಸಿದ್ಧವಾಗದ ನಿಯಮಗಳು!
ಮಾರ್ಚ್ 3 ರಂದು ತನ್ನ ಗೆಳತಿಯನ್ನು ಆಕೆಯ ಮನೆಗೆ ಡ್ರಾಪ್ ಮಾಡಿದ್ದ. ಆದರೆ, ಬಾಲಕಿ ಅಸ್ವಸ್ಥಗೊಂಡಿದ್ದರಿಂದ ಅವರ ತಾಯಿ ಮೇಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಬಾಲಕಿ ಕೊನೆಯುಸಿರೆಳೆದಿದ್ದಾಳೆ.
ಈ ಸಂಬಂಧ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮಧುರೈ ಜಿಲ್ಲಾ ಎಸ್‌ಪಿ ಬಾಸ್ಕರನ್, ತನಿಖೆಯ ವೇಳೆ ಬಾಲಕಿ ಆ ಯುವಕನೊಂದಿಗೆ ಈರೋಡ್‌ನಲ್ಲಿ ವಾಸವಾಗಿದ್ದಳು. ಈ ವೇಳೆ, ಇಬ್ಬರು ಕಡೆಯ ಸಂಬಂಧಿಕರು ಮತ್ತು ಪೊಲೀಸರು ಅವರಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಹೀಗಾಗಿ ಅವರಿಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಇಲಿ ವಿಷ ಸೇವಿಸಿದ್ದರು.
ಬಾಲಕಿಯ ಆರೋಗ್ಯ ಹದಗೆಟ್ಟಾಗ ಯುವಕ ಯುವತಿಯನ್ನು ಆಕೆಯ ಮನೆಗೆ ಡ್ರಾಪ್ ಮಾಡಿದ್ದರು. ಆದರೆ, ಬಾಲಕಿಯ ತಾಯಿ ಆಕೆಯ ಸ್ಥಿತಿ ಕಂಡು ಗಾಬರಿಗೊಂಡು ತಿರುಪ್ಪೂರ್‌ನ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಎಸ್ಪಿ ಮಾಹಿತಿ ನೀಡಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರ ಪೈಕಿ ಎಂಟು ಮಂದಿಯನ್ನು ಬಂಧಿಸಲಾಗಿದೆ. ಶವಪರೀಕ್ಷೆ ವರದಿಯ ಪ್ರಕಾರ, ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಮತ್ತು ಆಕೆಯ ದೇಹದಲ್ಲಿ ಯಾವುದೇ ಗಾಯಗಳಿಲ್ಲ ಎಂದು ಎಸ್ಪಿ ತಿಳಿಸಿದರು.
ಓದಿ: ಸರ್ಕಾರ ಮಹಿಳಾ ಸಬಲೀಕರಣಕ್ಕೆ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರಲು ಗಮನಹರಿಸಿದೆ: ಪ್ರಧಾನಿ ಮೋದಿ
ಪೊಲೀಸರ ಪ್ರಕಾರ, ಯುವಕ ಮತ್ತು ಯುವತಿ ತಮ್ಮ ಒಪ್ಪಿಗೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೂ ವದಂತಿಗಳನ್ನು ಹಬ್ಬಿಸಬಾರದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಾಲಕಿಯ ಫೋಟೋ ಹಾಕಬಾರದು. ಇದು ಅಪರಾಧ ಎಂದು ಎಸ್ಪಿ ಎಚ್ಚರಿಸಿದ್ದಾರೆ.
ಈ ಘಟನೆಯನ್ನು ವಿರೋಧಿಸಿ ಕೆಲವರು ಮಧುರೈ-ತಿರುಚಿ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲವರು ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.