ETV Bharat / bharat

ಉತ್ತರ ಪ್ರದೇಶದ ಮದರಸಾಗಳಲ್ಲಿ ಸಂವಿಧಾನ ವಿಷಯ ಬೋಧನೆ: ದಾರುಲ್ ಉಲೂಮ್ ನಿರ್ಧಾರ - ಇಸ್ಲಾಮಿಕ್ ಸೆಂಟರ್ ಆಫ್ ಇಂಡಿಯಾ

ಉತ್ತರ ಪ್ರದೇಶದ ಮದರಸಾಗಳಲ್ಲಿ ಇನ್ನು ಮುಂದೆ ಭಾರತ ಸಂವಿಧಾನವನ್ನು ಒಂದು ವಿಷಯವಾಗಿ ಕಲಿಸಲಾಗುವುದು ಈ ಬಗ್ಗೆ ಇಸ್ಲಾಮಿಕ್ ಸೆಂಟರ್ ಆಫ್ ಇಂಡಿಯಾದ ಇತ್ತೀಚಿನ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Madrassa to teach Constitution as a subject in Uttar Pradesh's Lucknow

author img

By

Published : Jan 27, 2023, 6:17 PM IST

ಲಖನೌ(ಉತ್ತರ ಪ್ರದೇಶ): ಲಖನೌದಲ್ಲಿರುವ ದಾರುಲ್ ಉಲೂಮ್ (ಇಸ್ಲಾಮಿಕ್ ಸೆಮಿನರಿ) ಭಾರತದ ಸಂವಿಧಾನವನ್ನು ಮದರಸಾಗಳಲ್ಲಿ ಒಂದು ಕಲಿಕಾ ವಿಷಯವಾಗಿ ಸೇರಿಸಲು ನಿರ್ಧರಿಸಿದೆ. ಮದರಸಾದ ಮಕ್ಕಳಿಗೂ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ತೀರ್ಮಾನ ಕೈಗೊಂಡಿದ್ದೇವೆ ಎಂದು ದಾರುಲ್ ಉಲೂಮ್ ಫರಂಗಿ ಮಹಲ್‌ನ ಧಾರ್ಮಿಕ ಮುಖ್ಯಸ್ಥ ಮೌಲಾನಾ ಖಾಲಿದ್ ರಶೀದ್ ಫರಂಗಿ ಮಹಾಲಿ ಹೇಳಿದರು. ಗುರುವಾರ ಗಣರಾಜ್ಯೋತ್ಸವ ಸಂದರ್ಭದಲ್ಲಿ ತ್ರಿವರ್ಣ ಧ್ವಜಾರೋಹಣದ ನಂತರ ಅವರು ಈ ನಿರ್ಧಾರ ಪ್ರಕಟಿಸಿದರು. ಇಸ್ಲಾಮಿಕ್ ಸೆಂಟರ್ ಆಫ್ ಇಂಡಿಯಾದ ಇತ್ತೀಚಿನ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವಿಡಿಯೋ ಸಂದೇಶದಲ್ಲಿ ಮೌಲಾನಾ ಖಾಲಿದ್ ಹೇಳಿದ್ದಾರೆ.

ಲಖನೌದ ದಾರುಲ್ ಉಲೂಮ್ ಫರಂಗಿ ಮಹಲ್‌ನಲ್ಲಿ ನಡೆದ ಸಭೆಯಲ್ಲಿ, ಭಾರತದ ಸಂವಿಧಾನವನ್ನು ಒಂದು ವಿಷಯವಾಗಿ ಬೋಧಿಸುವ ಕುರಿತು ಸರ್ವಾನುಮತದಿಂದ ನಿರ್ಧರಿಸಲಾಯಿತು. ಈದ್ ಉಲ್ ಫಿತ್ರ್ ನಂತರ ಪ್ರಾರಂಭವಾಗುವ, ಮುಂಬರುವ ಶೈಕ್ಷಣಿಕ ವರ್ಷದಿಂದ ಮದರಸಾಗಳಲ್ಲಿ ಸಂವಿಧಾನವನ್ನು ಬೋಧಿಸಲಾಗುವುದು ಎಂದು ಅವರು ಹೇಳಿದರು. ಸಂವಿಧಾನವನ್ನು ಓದುವುದರಿಂದ ವಿದ್ಯಾರ್ಥಿಗಳು ದೇಶವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಇದು ದೇಶದ ಮೇಲಿನ ಪ್ರೀತಿಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಮೌಲಾನಾ ಖಾಲಿದ್ ಹೇಳಿದರು.

ನಾವು ಸಾಂವಿಧಾನಿಕ ತಜ್ಞರನ್ನು ಮಂಡಳಿಗೆ ನೇಮಿಸಿಕೊಳ್ಳುತ್ತೇವೆ ಮತ್ತು ಮದರಸಾದಲ್ಲಿ ಸಂವಿಧಾನವನ್ನು ಕಲಿಸಲು ಅವರ ಸೇವೆ ಪಡೆದುಕೊಳ್ಳುತ್ತೇವೆ. ಹಿಂದಿ, ಇಂಗ್ಲಿಷ್, ಗಣಿತ, ವಿಜ್ಞಾನ ಮುಂತಾದ ವಿಷಯಗಳ ಜೊತೆಗೆ ಮದರಸಾದಲ್ಲಿ ಶಿಕ್ಷಣ ಪಡೆಯುವ ಮಕ್ಕಳು ತಮ್ಮ ಹಕ್ಕು ಬಾಧ್ಯತೆಗಳ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದು ಮೌಲಾನಾ ಖಾಲಿದ್ ತಿಳಿಸಿದರು.

ಬಿಹಾರದ 609 ಮದರಸಾಗಳ ಅನುದಾನ ನಿಲ್ಲಿಸುವಂತೆ ಪಾಟ್ನಾ ಹೈಕೋರ್ಟ್ ಆದೇಶ: ನಕಲಿ ದಾಖಲೆಗಳ ಆಧಾರದ ಮೇಲೆ ರಾಜ್ಯ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಮದರಸಾಗಳಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ವಿಚಾರಣೆಯ ವೇಳೆ ಪಾಟ್ನಾ ಹೈಕೋರ್ಟ್ ಮಂಗಳವಾರ, ರಾಜ್ಯದಲ್ಲಿನ 2,459 ಸರ್ಕಾರಿ ಅನುದಾನಿತ ಮದರಸಾಗಳ ತನಿಖೆ ನಡೆಸುವಂತೆ ಬಿಹಾರದ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಪಾರ್ಥ ಸಾರಥಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಇಡೀ ರಾಜ್ಯದಲ್ಲಿ ಒಟ್ಟು 2,459 ಮದರಸಾಗಳ ಮಾನ್ಯತೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ರಾಜ್ಯದ ಎಲ್ಲ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳೊಂದಿಗೆ ಸಭೆ ನಡೆಸುವಂತೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ. ತನಿಖೆ ಪೂರ್ಣಗೊಳ್ಳುವವರೆಗೆ ರಾಜ್ಯದ 609 ಮದರಸಾಗಳಿಗೆ ಅನುದಾನ ನೀಡದಂತೆ ಶಿಕ್ಷಣ ಇಲಾಖೆಗೆ ನ್ಯಾಯಾಲಯ ಆದೇಶಿಸಿದೆ.

ತನಿಖೆಯ ಸಂಪೂರ್ಣ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಉಪ ಪೊಲೀಸ್ ವರಿಷ್ಠಾಧಿಕಾರಿಯನ್ನು ನ್ಯಾಯಾಲಯ ಕೋರಿದೆ. ಬಿಹಾರದ ಸೀತಾಮರ್ಹಿ ಜಿಲ್ಲೆಯ ಅರ್ಜಿದಾರ ಮೊಹಮ್ಮದ್ ಅಲ್ಲಾವುದ್ದೀನ್ ಬಿಸ್ಮಿಲ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ರಾಜ್ಯದಲ್ಲಿ ನಕಲಿ ದಾಖಲೆಗಳ ಆಧಾರದ ಮೇಲೆ ಮದರಸಾಗಳಿಗೆ ನಕಲಿ ಮಾನ್ಯತೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಮದರಸಾಗಳನ್ನು ವಂಚನೆಯಿಂದ ನಡೆಸಲಾಗುತ್ತಿದೆ ಮತ್ತು ಸರ್ಕಾರದ ಅನುದಾನವನ್ನು ಸಂಗ್ರಹಿಸಲಾಗುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಎಫ್‌ಐಆರ್ ಕೂಡ ದಾಖಲಾಗಿದೆ.

ಇದನ್ನೂ ಓದಿ: ಜನರಿಂದಲೇ ಮದರಸಾ ಉಡೀಸ್​.. ಅಸ್ಸೋಂನಲ್ಲಿ ಮತ್ತೊಂದು ಅಕ್ರಮ ಮದರಸಾ ನೆಲಸಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.