ಚೆನ್ನೈ (ತಮಿಳುನಾಡು): ಹಣಕಾಸು ಸಚಿವ ತಂಗಂ ತೆನ್ನರಸು ಮತ್ತು ರಾಜ್ಯ ಕಂದಾಯ ಸಚಿವ ಕೆಕೆಎಸ್‌ಎಸ್‌ಆರ್ ರಾಮಚಂದ್ರನ್ ವಿರುದ್ಧದ ಆಸ್ತಿ ಸಂಗ್ರಹ ಪ್ರಕರಣವನ್ನು ರದ್ದುಪಡಿಸಿರುವುದರ ವಿರುದ್ಧ ಮದ್ರಾಸ್ ಹೈಕೋರ್ಟ್ ಸುಮೋಟೋ ಕ್ರಮಕ್ಕೆ ಮುಂದಾಗಿದೆ. ಆಸ್ತಿ ಸಂಗ್ರಹ ಪ್ರಕರಣದಲ್ಲಿ ಸಚಿವರಾದ ಕೆಕೆಎಸ್‌ಎಸ್‌ಆರ್ ರಾಮಚಂದ್ರನ್ ಮತ್ತು ಹಣಕಾಸು ಸಚಿವ ತಂಗಂ ತೆನ್ನರಸು ಅವರನ್ನು ಖುಲಾಸೆಗೊಳಿಸಿದ ಶ್ರೀವಿಲ್ಲಿಪುತ್ತೂರು ಪ್ರಾಥಮಿಕ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡಿದೆ.
ಪ್ರಕರಣದ ಹಿನ್ನೆಲೆ ಏನು?: 2001ರಿಂದ 2010ರವರೆಗೆ 44 ಲಕ್ಷ 59 ಸಾವಿರ ರೂಪಾಯಿ ಆದಾಯ ಮೀರಿ ಆಸ್ತಿ ಸೇರಿಸಿದ ಆರೋಪದ ಮೇಲೆ 2011ರಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಸಚಿವ ರಾಮಚಂದ್ರನ್, ಅವರ ಪತ್ನಿ ಆದಿಲಕ್ಷ್ಮಿ ಹಾಗೂ ಸ್ನೇಹಿತ ಷಣ್ಮುಕ ಮೂರ್ತಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ವಿಚಾರಣೆಯನ್ನು ಮಧುರೈ ನ್ಯಾಯಾಲಯವು ವಿರುದುನಗರದ ಪಂಚಾಯಿತಿಗೆ ವರ್ಗಾಯಿಸಿತು. ನಂತರ ಅದನ್ನು 2019ರಲ್ಲಿ ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ನೀಡಿದ ವರದಿಯಲ್ಲಿ, ಹಿಂದಿನ ತನಿಖೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಲಾಗಿದೆ ಮತ್ತು ಸಚಿವರು ಮತ್ತು ಅವರ ಕುಟುಂಬದವರು ಮಾಡಿಲ್ಲ ಎಂದು ಹೇಳಲಾಗಿದೆ. ಇದನ್ನು ಒಪ್ಪಿಕೊಂಡ ನ್ಯಾಯಾಲಯ, 2023ರ ಜುಲೈನಲ್ಲಿ ಸಚಿವ ರಾಮಚಂದ್ರನ್ ಸೇರಿದಂತೆ 3 ಮಂದಿಯನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿತ್ತು.
ಅದೇ ರೀತಿ ವಿತ್ತ ಸಚಿವ ತಂಗಂ ತೆನ್ನರಸು ಹಾಗೂ ಅವರ ಪತ್ನಿ ಮಣಿಮೇಕಲೈ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳವು 2006ರಿಂದ 2010ರ ಅವಧಿಯಲ್ಲಿ 74 ಲಕ್ಷದ 58 ಸಾವಿರ ಮೌಲ್ಯದ ಆಸ್ತಿ ಸಂಪಾದನೆ ಪ್ರಕರಣ ದಾಖಲಿಸಿತ್ತು. ಪ್ರಕರಣವನ್ನು 2019ರಲ್ಲಿ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿ ವಿಶೇಷ ನ್ಯಾಯಾಲಯ ಆದೇಶಿಸಿದೆ. ಆದಾಯ ತೆರಿಗೆ ದಾಖಲೆಗಳ ಆಧಾರದ ಮೇಲೆ ವಿಶೇಷ ನ್ಯಾಯಾಲಯವು ಡಿಸೆಂಬರ್ 2022 ರಲ್ಲಿ ಇಬ್ಬರನ್ನೂ ಬಿಡುಗಡೆ ಮಾಡಲು ಆದೇಶಿಸಿತ್ತು.
ಈ ಪ್ರಕರಣದಲ್ಲಿ ಸಂಸದರು ಹಾಗೂ ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ನ್ಯಾಯಮೂರ್ತಿ ಆನಂದ ವೆಂಕಟೇಶ್ ಅವರು, ಇಬ್ಬರು ಸಚಿವರ ಮೇಲಿನ ಆಸ್ತಿ ಕ್ರೋಢೀಕರಣ ಪ್ರಕರಣ ರದ್ದತಿ ಕುರಿತು ಸ್ವಯಂಪ್ರೇರಿತರಾಗಿ ತನಿಖೆ ನಡೆಸಲು ಮುಂದಾಗಿರುವುದು ಗಮನಿಸಬೇಕಾದ ಸಂಗತಿ.
ಇದನ್ನೂ ಓದಿ: ದ್ವೇಷ ಭಾಷಣ ಕೇಸ್: ಎಸ್ಪಿ ನಾಯಕ ಆಜಂ ಖಾನ್ ಧ್ವನಿ ಮಾದರಿ ನೀಡುವ ಆದೇಶಕ್ಕೆ ಸುಪ್ರೀಂ ಮಧ್ಯಂತರ ತಡೆ