ETV Bharat / bharat

ಮಧ್ಯಪ್ರದೇಶ: ‘ಧರ್ಮ ಸ್ವಾತಂತ್ರ್ಯ ಮಸೂದೆ 2021’ ಅಂಗೀಕಾರ - ಮಧ್ಯಪ್ರದೇಶ

ಮೀಸಲಾತಿ ದುರ್ಬಳಕೆ ಆರೋಪ ಕೇಳಿಬಂದ ಬೆನ್ನಲ್ಲೇ ಮಧ್ಯಪ್ರದೇಶ ಸರ್ಕಾರ ಧರ್ಮ ಸ್ವಾತಂತ್ರ್ಯ ಮಸೂದೆ 2021 ಎಂಬ ಕಠಿಣ ಕಾನೂನು ಜಾರಿ ಮಾಡಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗದವರನ್ನು ವಿವಾಹವಾಗಿ ಬಳಿಕ ಮತಾಂತರಗೊಳಿಸಿ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ ಪ್ರಕರಣ ಕೇಳಿಬಂದ ಹಿನ್ನೆಲೆಯಲ್ಲಿ ಈ ಕಾನೂನು ಜಾರಿ ಮಾಡಲಾಗಿದೆ.

Shivraj Singh Chauhan
ಶಿವರಾಜ್ ಸಿಂಗ್ ಚೌಹಾಣ್
author img

By

Published : Mar 8, 2021, 8:29 PM IST

ಭೋಪಾಲ್​ (ಮಧ್ಯಪ್ರದೇಶ): ಇಲ್ಲಿನ ವಿಧಾನಸಭೆಯಲ್ಲಿ ಧರ್ಮ ಸ್ವಾತಂತ್ರ್ಯ ಮಸೂದೆ 2021 ಅಂಗೀಕರಿಸಲ್ಪಟ್ಟಿದೆ. ಕಳೆದ ವರ್ಷ ಡಿಸೆಂಬರ್​​​ನಲ್ಲಿಯೇ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ಮಸೂದೆ ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದುಕೊಂಡಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಶಿವರಾಜ್ ಸಿಂಗ್ ಚೌಹಾಣ್, ನಾವು ಬಲವಂತದ ಮತಾಂತರವನ್ನು ಎಂದಿಗೂ ಒಪ್ಪುವುದಿಲ್ಲ. ಹೊಸ ಮಸೂದೆಯಡಿಯಲ್ಲಿ ಅಂತಹವರು 10 ವರ್ಷ ಜೈಲು ಶಿಕ್ಷೆ ಮತ್ತು ಕನಿಷ್ಠ 50,000 ರೂ. ದಂಡ ಎದುರಿಸಬೇಕಾಗುತ್ತದೆ. ಅಪ್ರಾಪ್ತ ಬಾಲಕಿಯರನ್ನು ಮತಾಂತರಗೊಳಿಸಿ, ವಿವಾಹವಾಗಿ ಆ ಮೂಲಕ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಘಟನೆಗಳು ಬೆಳಕಿಗೆ ಬಂದ ಹಿನ್ನೆಲೆ ಈ ಕ್ರಮ ಜರುಗಿಸಲಾಗಿದೆ ಎಂದಿದ್ದಾರೆ.

ಈ ಹೊಸ ಮಸೂದೆಯ ಪ್ರಕಾರ, ಅಪ್ರಾಪ್ತೆ, ಮಹಿಳೆ ಅಥವಾ ವ್ಯಕ್ತಿಯನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದಿಂದ ಬಲವಂತವಾಗಿ ಮತಾಂತರಗೊಳಿಸಿದರೆ ಅಂತಹವರಿಗೆ ಕನಿಷ್ಠ 2-10 ವರ್ಷ ಜೈಲು ಶಿಕ್ಷೆ, ಕನಿಷ್ಠ 50 ಸಾವಿರ ರೂ ದಂಡ ವಿಧಿಸಲಾಗುತ್ತದೆ ಎಂದಿದ್ದಾರೆ.

ಇದಕ್ಕೂ ಮೊದಲು ಉತ್ತರ ಪ್ರದೇಶ ವಿಧಾನಸಭೆಯಲ್ಲೂ ಕಾನೂನುಬಾಹಿರ ಧಾರ್ಮಿಕ ಮತಾಂತರ ಮಸೂದೆ 2021 ಧ್ವನಿ ಮತದ ಮೂಲಕ ಅಂಗೀಕರಿಸಲ್ಪಟ್ಟಿತ್ತು.

ಉತ್ತರ ಪ್ರದೇಶ ವಿಧಾನಸಭೆಯೂ ಇದೇ ರೀತಿಯ ಕಾನೂನನ್ನು ಕಾನೂನುಬಾಹಿರ ಧಾರ್ಮಿಕ ಪರಿವರ್ತನೆ ಮಸೂದೆ, 2021 ಎಂದು ಫೆಬ್ರವರಿ 24 ರಂದು ಧ್ವನಿ ಮತದಿಂದ ಅಂಗೀಕರಿಸಿತು. ಅಲ್ಲೇ 'ಲವ್ ಜಿಹಾದ್' ಸಂಬಂಧಿತ ಅಪರಾಧಗಳಿಗೆ ಗರಿಷ್ಠ 10 ವರ್ಷಗಳ ಶಿಕ್ಷೆಯನ್ನು ವಿಧಿಸುವ ಕಾನೂನು ಜಾರಿ ಮಾಡಿತ್ತು.

ಇದನ್ನೂ ಓದಿ: ನಕಲಿ ಆಧಾರ್​ ಕಾರ್ಡ್ ತೋರಿಸಿ ಅಪ್ರಾಪ್ತೆ ಮದುವೆ: ವರನ ಕುಟುಂಬ ಪರಾರಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.