ಭೋಪಾಲ್: ತೃತೀಯ ಲಿಂಗಿಗಳಿಗಾಗಿಯೇ ಪ್ರತ್ಯೇಕ ಗುರುತಿನ ಚೀಟಿ ನೀಡಿದ್ದು, ಈ ವಿಭಿನ್ನ ಪ್ರಯತ್ನದಲ್ಲಿ ಮಧ್ಯಪ್ರದೇಶವು ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭೋಪಾಲ್ ಮೂಲದ ಅಂಜನಾ ಸಿಂಗ್ ಮತ್ತು ಫರುಖ್ ಜಮಾಲ್ ಅವರು, ತೃತೀಯ ಲಿಂಗಿಗಳಿಗಾಗಿಯೇ ಮೀಸಲಾದ ಪೋರ್ಟಲ್ ಮೂಲಕ ಗುರುತಿನ ಚೀಟಿ ಪಡೆದಿದ್ದಾರೆ. ವರದಿಗಳ ಪ್ರಕಾರ, ತೃತೀಯ ಲಿಂಗಿಗಳ ಸಮುದಾಯಕ್ಕೆ ಆಧಾರ್ ಕಾರ್ಡ್, ವೋಟರ್ ಕಾರ್ಡ್ ಹೊರತುಪಡಿಸಿ ಗುರುತಿನ ಚೀಟಿ ನೀಡುವ ಯೋಜನೆ ದೇಶದ ಯಾವುದೇ ರಾಜ್ಯದಲ್ಲಿ ಇರಲಿಲ್ಲ.
ಈ ಸುದ್ದಿಯನ್ನೂ ಓದಿ: ದೇಶದಲ್ಲಿ ಹಕ್ಕಿ ಜ್ವರ ಹರಡಲು ಪ್ರತಿಭಟನಾನಿರತ ರೈತರೇ ಕಾರಣ : ಬಿಜೆಪಿ ಶಾಸಕ
ಅವರಿಗೆಂದೇ ಮೀಸಲಾಗಿರುವ ಪೋರ್ಟಲ್‌ನಲ್ಲಿ ಪ್ರಕಟವಾದ ಮಾಹಿತಿಯ ಪ್ರಕಾರ, ಅರ್ಜಿಯನ್ನು ಅನುಮೋದಿಸಿದ ನಂತರ, ಸಂಬಂಧಪಟ್ಟ ಅಧಿಕಾರಿ ಗುರುತಿನ ಚೀಟಿ ನೀಡುವ ಪ್ರಕ್ರಿಯೆಯನ್ನು ನಿರ್ದಿಷ್ಟ ಸಮಯದೊಳಗೆ ಅಂತಿಮಗೊಳಿಸಬೇಕಾಗುತ್ತದೆ, ಅದು ವಿಫಲವಾದರೆ ವೆಬ್‌ಸೈಟ್ ಮೂಲಕ ದೂರು ಸಲ್ಲಿಸಲು ಅರ್ಜಿದಾರನು ಅರ್ಹನಾಗಿರುತ್ತಾನೆ.