ಮಾಂಡ್ಲಾ(ಮಧ್ಯಪ್ರದೇಶ): ಬುಡಕಟ್ಟು ಸಮುದಾಯಗಳಿಗಾಗಿ ಆಚರಣೆ ಮಾಡುವ ಜಂಜಾಟಿಯಾ ಗೌರವ್ ದಿವಸ್ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಧ್ಯಪ್ರದೇಶ ಸಿಎಂ ಶಿವರಾಜ್ಸಿಂಗ್ ಚೌಹಾಣ್ ಬುಡಕಟ್ಟು ಜನರೊಂದಿಗೆ ಡೋಲು ಬಾರಿಸಿ, ನೃತ್ಯ ಮಾಡಿದರು.
ನವೆಂಬರ್ 15ರಂದು ಆರಂಭವಾಗಿರುವ ಜಂಜಾಟಿಯಾ ಗೌರವ್ ದಿವಸ್ ಒಂದು ವಾರದವರೆಗೆ ಮುಂದುವರೆದಿದ್ದು, ಮಧ್ಯಪ್ರದೇಶದ ಬುಡಕಟ್ಟು ನಾಯಕನಾಗಿದ್ದ, ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮಸ್ಮರಣೆಯನ್ನೂ ಈ ದಿನದಂದು ಮಧ್ಯಪ್ರದೇಶದ ಮಾಂಡ್ಲಾದಲ್ಲಿ ಆಚರಣೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಬುಡಕಟ್ಟು ಸಮುದಾಯದ ಜನರೊಂದಿಗೆ ಭಾಗವಹಿಸಿ, ಡೋಲು ಬಾರಿಸಿ, ನೃತ್ಯ ಮಾಡಿದ್ದಾರೆ. ಇದರ ಜೊತೆಗೆ ಬ್ರಿಟೀಷರು ಬುಡಕಟ್ಟು ಜನರನ್ನು ಹತ್ತಿಕ್ಕಲು ಪ್ರಯತ್ನಿಸಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ಜನರ ಪಾತ್ರ ಅತ್ಯಂತ ದೊಡ್ಡದು ಎಂದು ಬಣ್ಣಿಸಿದರು.
ಇದನ್ನೂ ಓದಿ: ನ.26 ರಂದು ಬಿಹಾರದ ಜನರು 'ಮದ್ಯ ಸೇವಿಸುವುದಿಲ್ಲ' ಎಂದು ಪ್ರತಿಜ್ಞೆ ಮಾಡ್ತಾರೆ: ಸಿಎಂ ನಿತೀಶ್ ಕುಮಾರ್