ETV Bharat / bharat

ಸಾಯಿ ಧರಂ ತೇಜ್‌ ರಸ್ತೆ ಅಪಘಾತ ಪ್ರಕರಣ : ಘಟನೆಗೆ ಕಾರಣ ತಿಳಿಸಿದ ಉಪ ಪೊಲೀಸ್ ಆಯುಕ್ತ - Madhapur DCP Venkateshwarlu

ಅಪಘಾತವು ಮುಖ್ಯವಾಗಿ ಅತಿಯಾದ ವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದಾಗಿ ಎಂಬುದು ಸ್ಪಷ್ಟವಾಗಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

Madhapur DCP Venkateshwarlu Said The Road Accident To Saidaram Tej was caused by Over Speed, Negligence.
ಸಾಯಿ ಧರಂ ತೇಜ್‌ ರಸ್ತೆ ಅಪಘಾತ ಪ್ರಕರಣ
author img

By

Published : Sep 12, 2021, 4:19 AM IST

ಹೈದರಾಬಾದ್​ : ನಟ ಧರಂ ತೇಜ್ ಅವರು ಅಪಘಾತಕ್ಕೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಖರ ಕಾರಣ ತಿಳಿದುಬಂದಿದ್ದು, ಈ ಸಂಬಂಧ ಉಪ ಪೊಲೀಸ್ ಆಯುಕ್ತ ವೆಂಕಟೇಶ್ವರಲು ಮಾಹಿತಿ ನೀಡಿದ್ದಾರೆ.

ಸೆಕೆಂಡ್ ಹ್ಯಾಂಡ್ ಟ್ರಯಂಫ್ ಬೈಕ್ ಅನ್ನು ಬುರಾ ಅನಿಲ್ ಕುಮಾರ್ ಎಂಬುವರಿಂದ ಖರೀದಿಸಿದ್ದ ನಟ, ಈವರೆಗೂ ತಮ್ಮ ಹೆಸರಿಗೆ ಬೈಕ್​ ನೋಂದಣಿ ಮಾಡಿಕೊಂಡಿಲ್ಲವಂತೆ. ವಾಹನದ ಸ್ಥಿತಿ, ರಸ್ತೆಗಳಲ್ಲಿ ಇಂತಹ ವಾಹನವನ್ನು ಓಡಿಸುವ ವ್ಯಕ್ತಿಯ ಅನುಭವ, ಟೈರ್ ಗಳ ಸ್ಥಿತಿಯನ್ನು ತನಿಖೆಯ ಭಾಗವಾಗಿ ಪರಿಶೀಲಿಸಲಾಗುತ್ತಿದ್ದು, ಈ ಹಿಂದೆ ಕೂಡ ಮಾಧಾಪುರದ ಪಾರ್ವತ್ ನಗರದಲ್ಲಿ ವೇಗವಾಗಿ ಬೈಕ್​ ಚಾಲನೆ ಮಾಡಿದ್ದು, 1135/- ದಂಡ ಪಾವತಿಸಲಾಗಿದೆ.

Madhapur DCP Venkateshwarlu Said The Road Accident To Saidaram Tej was caused by Over Speed, Negligence.
ಸಾಯಿ ಧರಂ ತೇಜ್‌ ರಸ್ತೆ ಅಪಘಾತ ಪ್ರಕರಣ

ಇನ್ನು ನಟ ಅಪಘಾತಕ್ಕೀಡಾದ ರಸ್ತೆಯಲ್ಲಿ ಗಂಟೆಗೆ 30 ಕಿಮೀ ನಿಂದ 40 ಕಿಮೀ ವೇಗ ನಿಗದಿಗೊಳಿದೆಯಾದರೂ ನಟ ಸುಮಾರು 75 ಕಿ ಮೀ ವೇಗದಲ್ಲಿ ಗಾಡಿ ಓಡಿಸಿದ್ದಾರೆ ಎಂದು ತಿಳಿದುಬಂದಿದೆ. ಇಲ್ಲಿಯವರೆಗೆ ಲಭ್ಯವಿರುವ ಸಾಕ್ಷ್ಯಗಳ ಆಧಾರದ ಮೇಲೆ, ಅಪಘಾತವು ಮುಖ್ಯವಾಗಿ ಅತಿಯಾದ ವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದಾಗಿ ಎಂಬುದು ಸ್ಪಷ್ಟವಾಗಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.