ಲೂಧಿಯಾನ(ಪಂಜಾಬ್): ಶಿವಸೇನೆ ನಾಯಕನ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆ ಮಾಡಿದ ಪ್ರಕರಣದ ಬಳಿಕ ಪಂಜಾಬ್ನ ಲೂಧಿಯಾನ ಪೊಲೀಸರು ಹಿಂದೂ ಮುಖಂಡರಿಗೆ ಜೀವರಕ್ಷಕವಾದ ಬುಲೆಟ್ ಪ್ರೂಫ್ ಜಾಕೆಟ್ಗಳನ್ನು ನೀಡುತ್ತಿದ್ದಾರೆ. ರಾಜ್ಯದಲ್ಲಿ ಹಿಂದೂಗಳ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ. ಭದ್ರತೆ ಇಲ್ಲವಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಲಾಗಿದೆ.
ಕೆಲ ದಿನಗಳ ಹಿಂದೆ ಶಿವಸೇನೆ ನಾಯಕ ಸುಧೀರ್ ಸೂರಿ ಎಂಬುವವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದು ರಾಜ್ಯದಲ್ಲಿ ಭದ್ರತೆಯ ಬಗ್ಗೆಯೇ ಅಪಸ್ವರ ಕೇಳಿ ಬಂದಿತ್ತು. ಇದರಿಂದ ಲೂಧಿಯಾನ ಪೊಲೀಸರು ಹಿಂದುತ್ವ ಪ್ರತಿಪಾದಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ನೀಡಿದ್ದಾರೆ.
ಶಿವಸೇನೆ ನಾಯಕ ಅಮಿತ್ ಅರೋರಾ ಬುಲೆಟ್ ಪ್ರೂಫ್ ಜಾಕೆಟ್ ಧರಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಣ ಪಡೆದು ಬುಲೆಟ್ ಪ್ರೂಫ್ ಜಾಕೆಟ್ ನೀಡಲಾಗಿದೆಯೇ ಅಥವಾ ಸರ್ಕಾರವೇ ಇದನ್ನು ವಿತರಿಸಿದೆಯೇ ಎಂಬುದು ತಿಳಿದುಬಂದಿಲ್ಲ.
ಓದಿ: ಕುನೋ ಕಾಡಲ್ಲಿ ಹಂಟಿಂಗ್ ಶುರು.. 24 ತಾಸಲ್ಲೇ ಮೊದಲ ಬೇಟೆಯಾಡಿದ ಚೀತಾಗಳು