ಲಖನೌ: ಗ್ರಾಹಕ ಆರೈಕೆ ಸೇವಾ ಪೂರೈಕೆದಾರರ ಹೆಸರಲ್ಲಿ ಜನರಿಂದ ಕೋಟಿಗಟ್ಟಲೇ ಹಣ ವಂಚನೆ ಮಾಡಿದ ಆರೋಪದಡಿ ಲಖನೌ ಪೊಲೀಸರು ಮತ್ತು ಸೈಬರ್ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಜಾರ್ಖಂಡ್ ಅಂಚೆ ವಿಭಾಗದ ಉದ್ಯೋಗಿ ಮತ್ತು ಆತನ ಸಹಾಯಕರನ್ನು ಬಂಧಿಸಿದ್ದಾರೆ.
ಜಾರ್ಖಂಡ್ ಅಂಚೆ ವಿಭಾಗದ ಉದ್ಯೋಗಿ ಪುರುಷೋತ್ತಮ್ ಕುಮಾರ್ ಮತ್ತು ಆತನ ಸಹಾಯಕ ಕುಂದನ್ ಕುಮಾರ್ ದಾಸ್ ಬಂಧಿತ ಆರೋಪಿಗಳು. ಇವರು ಅನಕ್ಷರಸ್ಥ ಅಂಚೆ ಗ್ರಾಹಕರನ್ನು ಟಾರ್ಗೆಟ್ ಮಾಡಿ ಮೋಸ ಮಾಡುತ್ತಿದ್ದರು. ಬಂಧಿತರಿಂದ ಎರಡು ಮೊಬೈಲ್ ಫೋನ್ ಮತ್ತು 20 ಸಾವಿರ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ.
ಗುಡಂಬದ ಕಲ್ಯಾಣ್ಪುರದ ಕೇಶವ್ ವಿಹಾರನ ನಿವಾಸಿ ಅತುಲ್ ಕುಮಾರ್ ಶ್ರೀವಾಸ್ತವ ಎಂಬುವರು ಸೈಬರ್ ಪೊಲೀಸ್ ಠಾಣೆಯಲ್ಲಿ 5 ಲಕ್ಷ ರೂ.ಗಳ ವಂಚನೆ ದೂರು ದಾಖಲಿಸಿದ್ದರು. ಈ ಕುರಿತಂತೆ ಲಖನೌ ಪೊಲೀಸರು ಮತ್ತು ಸೈಬರ್ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಓದಿ: ಸಿಂಘು ಗಡಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ಪತ್ರಕರ್ತ ಬಿಡುಗಡೆ
ಪ್ರಕರಣ ಸಂಬಂಧ ಸೈಬರ್ ಕ್ರೈಮ್ ಶಾಖೆಯ ಇನ್ಸ್‌ಪೆಕ್ಟರ್ ಮೊಹಮ್ಮದ್ ಮುಸ್ಲಿಂ ಖಾನ್ ಮಾಹಿತಿ ನೀಡಿದ್ದು, ಆರೋಪಿಗಳು ಅನಕ್ಷರಸ್ಥ ಗ್ರಾಹಕರ ಹಣವನ್ನು ತಮ್ಮ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದನು. ಬಳಿಕ ಆ ಹಣವನ್ನು ತನ್ನ ಕುಟುಂಬದ ಸದಸ್ಯರ ಖಾತೆಗಳಿಗೆ ವರ್ಗಾಯಿಸುತ್ತಿದ್ದನು. ಇದರಿಂದ ಬಂದಂತಹ ಹಣವನ್ನು ಇಬ್ಬರು ಹಂಚಿಕೊಳ್ಳುತ್ತಿದ್ದರು. ಇಲ್ಲಿಯವರಗೆ ಮುಖ್ಯ ಆರೋಪಿ ಪುರುಷೋತ್ತಮ್ ಖಾತೆಯಿಂದ ಬರೋಬ್ಬರಿ ಒಂದು ಕೋಟಿ ಅಧಿಕ ಮೊತ್ತದ ಹಣದ ವಹಿವಾಟು ನಡೆದಿದೆ ಎಂದು ತಿಳಿಸಿದ್ದಾರೆ.