ನವದೆಹಲಿ : ಭಾರತೀಯ ಸೇನೆಯ ಉನ್ನತ ಸ್ಥಾನಗಳನ್ನು ಕರುನಾಡಿನ ಹಲವರು ಅಲಂಕರಿಸಿದ್ದಾರೆ. ಈಗ ಮತ್ತೊಬ್ಬ ಕೊಡಗಿನ ವೀರರೊಬ್ಬರು ಸೇನಾ ಸಿಬ್ಬಂದಿ ಉಪ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.
ಲೆಫ್ಟಿನೆಂಟ್ ಜನರಲ್ ಸಿ.ಬನ್ಸಿ ಪೊನ್ನಪ್ಪ ಅವರು ಸೇನಾ ಸಿಬ್ಬಂದಿ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.
ಡೆಪ್ಯುಟಿ ಸಿಡಿಎಸ್ ಆಗಿರುವ ಇವರು ಭಾರತೀಯ ಸೇನೆ ವಜ್ರ ಕಾರ್ಪ್ಸ್ ತುಕಡಿಗೆ ಕಮಾಂಡಿಂಗ್ ಮಾಡುವ ಅಧಿಕಾರವನ್ನು ಹೊಂದಿದ್ದಾರೆ ಎಂದು ಸೇನೆ ಹೇಳಿಕೆ ನೀಡಿದೆ.
ಇನ್ನು ಬನ್ಸಿ ಪೊನ್ನಪ್ಪ ಅವರು ಕೊಡಗಿನ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಸಮೀಪದ ನಂಗಾಲ ಗ್ರಾಮದವರಾಗಿದ್ದು, ಚನ್ನೀರ ಪೊನ್ನಪ್ಪ ಮತ್ತು ಮೀರಾ ದಂಪತಿಯ ಪುತ್ರರಾಗಿದ್ದಾರೆ. ಅವರು ನಿತ್ಯಾ ಮೇದಪ್ಪ ಅವರನ್ನು ವಿವಾಹವಾಗಿರುವ ಅವರ ಪುತ್ರ ನಿಶಾಂತ್ ಭಾರತೀಯ ನೌಕಾಪಡೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ನಿವಾಸಕ್ಕೆ ನುಗ್ಗಲು ಅಪರಿಚಿತನ ಯತ್ನ