ಸೇಲಂ( ತಮಿಳುನಾಡು): ಸೇಲಂ ಜಿಲ್ಲೆಯ ವಾಜಪಾಡಿ ಪಕ್ಕದ ಬೇಲೂರು ನಿವಾಸಿ ಅರವಿಂದ್ (23) ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಮಾಡಿಕೊಳ್ಳಬೇಕಿತ್ತು. ಆದರೆ ರಹಸ್ಯ ಬಯಲಾಗಿ ಪೋಕ್ಸೋ ಕಾಯ್ದೆಯಡಿ ಆತನನ್ನು ಬಂಧಿಸಲಾಗಿದೆ. ಮದುವೆಯಾಗಬೇಕಿದ್ದ ಯುವತಿ ಅರವಿಂದ್ ಸೆಲ್ ಫೋನ್ನಲ್ಲಿದ ವಿಡಿಯೋ ಒಂದರ ಬಗ್ಗೆ ಮಾಹಿತಿ ಬಹಿರಂಗ ಪಡಿಸಿದರಿಂದ ಆತನ ವಿರುದ್ದ ಪೋಕ್ಸೋ ಕಾಯ್ದೆ ದಾಖಲಾಗಿದೆ.
ಲವ್ ಟುಡೇ ಎಂಬ ತಮಿಳು ಸಿನಿಮಾದಲ್ಲಿ ಬರುವ ಸನ್ನಿವೇಶದಂತೆ ಇಬ್ಬರು ತಮ್ಮ ಸೆಲ್ ಫೋನ್ ವಿನಿಮಯ: ಪೊಲೀಸರು ನೀಡಿದ ಮಾಹಿತಿ ಪ್ರಕಾರ ಖಾಸಗಿ ಆಂಬ್ಯುಲೆನ್ಸ್ ಚಾಲಕನಾಗಿರುವ ಅರವಿಂದ್ ಕೆಲ ದಿನಗಳ ಹಿಂದೆ ಅದೇ ಊರಿನ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಅದಾದ ಬಳಿಕ ಇಬ್ಬರೂ ಖಾಸಗಿಯಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದರು, ಇತ್ತೀಚಿಗೆ ಬಿಡುಗಡೆಯಾಗಿದ್ದ ಲವ್ ಟುಡೇ ಎಂಬ ತಮಿಳು ಸಿನಿಮಾದಲ್ಲಿ ಬರುವ ಸನ್ನಿವೇಶದಂತೆ ಇಬ್ಬರು ತಮ್ಮ ಸೆಲ್ ಫೋನ್ ವಿನಿಮಯ ಮಾಡಿಕೊಂಡಿದ್ದಾರೆ.
ಇಬ್ಬರ ನಡುವೆ ಯಾವುದೇ ರಹಸ್ಯ ಇರಬಾರದು ಎಂದು ಭಾವಿಸಿದ್ದ ಅರವಿಂದ್: ಇನ್ನು ಇಬ್ಬರ ನಡುವೆ ಯಾವುದೇ ರಹಸ್ಯ ಇರಬಾರದು ಎಂದು ಭಾವಿಸಿದ್ದ ಅರವಿಂದ್, ತನ್ನ ಸೆಲ್ ಫೋನ್‌ನಲ್ಲಿ ಇರಿಸಿದ ಕೆಲವು ರಹಸ್ಯ ವಿಡಿಯೋ ಗಳನ್ನು ಗಮನಿಸಲು ವಿಫಲನಾಗಿದ್ದ. ತನಗೆ ಸೆಲ್ ಫೋನ್ ನೀಡಿದ್ದ ಭಾವಿ ಪತಿಯ ಸೆಲ್ ಫೋನ್ನ್ನು ವಧು ಪರೀಕ್ಷಿಸಿದಾಗ ಬೆಚ್ಚಿಬಿದ್ದಿದ್ದಾಳೆ. ಆತನ ಮೊಬೈಲ್‌ನಲ್ಲಿ ಶಾಲಾ ಬಾಲಕಿಯೊಬ್ಬಳ ಅರೆನಗ್ನ ವಿಡಿಯೋ ಇರುವುದು ಕಂಡುಬಂದಿದೆ. ಇದರಿಂದ ಗಾಬರಿಗೊಂಡ ಯುವತಿ ತನ್ನ ಸಂಬಂಧಿಕರ ಮೂಲಕ ಶಾಲಾ ಬಾಲಕಿಯ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಈ ಕುರಿತು ವಿಷಯ ತಿಳಿದ ಬಾಲಕಿಯ ಪೋಷಕರು ವಾಜಪಾಡಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಅನ್ವಯ ಮಹಿಳಾ ಪೊಲೀಸರು ಆರೋಪಿ ಅರವಿಂದ್ನ ಮೇಲೆ ಪೋಕ್ಸೋ ಕಾಯ್ದೆ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಆತನ ಸೆಲ್‌ಫೋನ್‌ನಲ್ಲಿ ಬೇರೆ ಮಹಿಳೆಯರ ವಿಡಿಯೋಗಳಿವೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
ಈ ಕುರಿತು ಮಾತನಾಡಿದ ವಾಜಪಾಡಿ ಪೊಲೀಸ್ ಉಪಾಧೀಕ್ಷಕ ಹರಿಶಂಕರಿ, ವಿದ್ಯಾರ್ಥಿಗಳು ತಮ್ಮ ಸೆಲ್ ಫೋನ್ ನಂಬರ್ ಗಳನ್ನು ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದನ್ನು ತಪ್ಪಿಸಬೇಕು. ಆಗ ಮಾತ್ರ ಇಂತಹ ಅಪಾಯಗಳಿಂದ ಪಾರಾಗಲು ಸಾಧ್ಯ ಎಂದರು. ಮದುವೆಗೂ ಮುನ್ನವೇ ವರನ ಬಗ್ಗೆ ತಿಳಿದ ಯುವತಿ ಮದುವೆಯನ್ನೂ ರದ್ದುಗೊಳಿಸಿಕೊಂಡಿದ್ದಾಳೆ.
ಇದನ್ನೂ ಓದಿ:ಬಾಲಕಿಯರ ಮೇಲೆ ಅತ್ಯಾಚಾರ: ಓರ್ವನ ಬಂಧನ.. ಗುಜರಾತ್ನಲ್ಲಿ ಹೃದಯಾಘಾತಕ್ಕೆ ಬಾಲಕಿ ಬಲಿ
12ನೇ ತರಗತಿ ವಿದ್ಯಾರ್ಥಿನಿ ಮೇಲೆ 5 ತಿಂಗಳು ಅತ್ಯಾಚಾರ(ಗ್ರೇಟರ್ ನೋಯ್ಡಾ): ಇದು ಮದುವೆ ತಪ್ಪಿದ ಕಥೆಯಾದರೆ ಇನ್ನೊಂದೆಡೆ ಗ್ರೇಟರ್ ನೋಯ್ಡಾದ ಥಾನಾ ಬೀಟಾ 2 ಎಂಬ ಪ್ರದೇಶದಲ್ಲಿ ವಾಸಿಸುತ್ತಿದ್ದ 12ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಮೇಲೆ ಮೂವರು ಕಿರಾತಕರು ಅತ್ಯಾಚಾರ ಎಸಗಿರುವುದು ಇತ್ತೀಚಿಗೆ ಬೆಳಕಿಗೆ ಬಂದಿದೆ.
ಪ್ರಮುಖ ಆರೋಪಿಯು ಸಂತ್ರಸ್ತೆಯ ಮೇಲೆ ಸತತ 5 ತಿಂಗಳ ಕಾಲ ಅತ್ಯಾಚಾರವೆಸಗಿದ್ದ ಎನ್ನುವುದು ತನಿಖೆಯ ಮೂಲಕ ತಿಳಿದುಬಂದಿದೆ. ಆರೋಪಿಗಳ ಲೈಂಗಿಕ ದೌರ್ಜನ್ಯದಿಂದ ನೊಂದ ಸಂತ್ರಸ್ತೆ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ವೇಳೆ ಕುಟುಂಬಸ್ಥರು ಆಕೆಯ ಪ್ರಾಣ ರಕ್ಷಣೆ ಮಾಡಿದ್ದರು. ನಂತರ ವಿದ್ಯಾರ್ಥಿನಿ ತನ್ನ ಮೇಲೆ ನಡೆದ ದುಷ್ಕೃತ್ಯವನ್ನು ಕುಟುಂಬಸ್ಥರಿಗೆ ವಿವರಿಸಿದಾಗ ಈ ಸಂಗತಿ ಬಯಲಾಗಿತ್ತು.
ಗ್ರೇಟರ್ ನೋಯ್ಡಾದ ಇಂಟರ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯನ್ನು ಪ್ರೀತಿಸುವ ನೆಪದಲ್ಲಿ ಯುವಕನೊಬ್ಬ ದೈಹಿಕ ಸಂಬಂಧ ಬೆಳೆಸಿ ನಂತರ ಆರೋಪಿ ಕೃತ್ಯದ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ್ದ. ಆಕೆಯ ಸಹೋದರ ಮತ್ತು ಸಹೋದರಿಯನ್ನು ಹತ್ಯೆ ಮಾಡುವ ಬೆದರಿಕೆ ಹಾಕಿದ್ದ, ಸತತ 5 ತಿಂಗಳ ಕಾಲ ಅತ್ಯಾಚಾರ ನಡೆಸಿದ್ದ ಪ್ರಕರಣದ ಪ್ರಮುಖ ಆರೋಪಿ ತನ್ನ ಸ್ನೇಹಿತರಿಬ್ಬರಿಗೆ ಅಶ್ಲೀಲ ವಿಡಿಯೋ ಶೇರ್ ಮಾಡಿದ್ದ. ಬಳಿಕ ಇಬ್ಬರೂ ಸೇರಿ ವಿದ್ಯಾರ್ಥಿನಿಯನ್ನು ಬ್ಲ್ಯಾಕ್‌ಮೇಲ್ ಮಾಡಿ, ಸಾಮೂಹಿಕ ಅತ್ಯಾಚಾರ ನಡೆಸಿದ್ದರು ಎಂಬ ಮಾಹಿತಿ ಪೊಲೀಸರ ತನಿಖೆ ವೇಳೆ ಬಹಿರಂಗವಾಗಿದೆ.