ಕೊಲ್ಹಾಪುರ (ಮಹಾರಾಷ್ಟ್ರ): ಪ್ರಿಯತಮೆಯ ತಂದೆ ಬೆದರಿಕೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಜಿಲ್ಲೆಯ ಕಾಗಲ್ ತಾಲೂಕಿನ ಫರಕ್ಟೇವಾಡಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮೃತನನ್ನು ಅಭಿಜಿತ್ ಫರಕ್ಟೆ (25) ಎಂದು ಗುರುತಿಸಲಾಗಿದೆ. ಈ ಕುರಿತು ಯುವತಿ ತಂದೆಯ ವಿರುದ್ಧ ಮುರ್ಗುಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಭಿಜಿತ್ ತಮ್ಮದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದು, ಮೊಬೈಲ್ನಲ್ಲಿ ಕರೆ ಹಾಗೂ ಚಾಟಿಂಗ್ ಮಾಡುತ್ತಿದ್ದರು. ಒಮ್ಮೆ ಆಕೆಯ ಜತೆ ಯುವಕ ಮಾತನಾಡುವುದನ್ನು ಕಂಡ ಯುವತಿ ತಂದೆ ಸಂಗ್ರಾಮ್ ಸರ್ಜೆರಾವ್ ಕತ್ತಿ ಹಿಡಿದು ಯುವಕನಿಗೆ ಜೀವ ಬೆದರಿಕೆ ಹಾಕಿದ್ದಾನೆ. ಇದರಿಂದ ಭಯಭೀತಗೊಂಡ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ ಅಧಿಕಾರಿ ಪ್ರಶಾಂತ್ ಗೊಜಾರೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಬಂಗಾಳದ ಒಳಿತಿಗಾಗಿ ಪ್ರಧಾನಿ ಮೋದಿ ಕಾಲು ಹಿಡಿಯಲೂ ನಾನು ಸಿದ್ಧ: ಮಮತಾ ಬ್ಯಾನರ್ಜಿ