ETV Bharat / bharat

ಫಿರೋಜಾಬಾದ್‌ನಲ್ಲಿ ಅಸ್ಸೋಂ ಯುವತಿ ಮೇಲೆ ಅತ್ಯಾಚಾರ: ದೂರು

ಉತ್ತರಪ್ರದೇಶದ ಫಿರೋಜಾಬಾದ್‌ನ ಯುವಕನೊಬ್ಬ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಎಂದು ಅಸ್ಸೋಂ ಯುವತಿ ನಂಬಿಸಿ ಅತ್ಯಾಚಾರ ಎಸಗಿ ವಂಚಿಸಿದ್ದಾನೆ. ಈ ಬಗ್ಗೆ ಸಂತ್ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

love-sex-aur-dhokha-with-assam-girl-accused-raped-and-cheated
ಫಿರೋಜಾಬಾದ್‌ನಲ್ಲಿ ಅಸ್ಸಾಮ್ ಯುವತಿ ಮೇಲೆ ಅತ್ಯಾಚಾರ : ಸಂತ್ರಸ್ತೆಯಿಂದ ದೂರು
author img

By

Published : Aug 11, 2022, 2:16 PM IST

ಫಿರೋಜಾಬಾದ್ (ಉತ್ತರಪ್ರದೇಶ): ಅಸ್ಸೋಂ ಮೂಲದ ಯುವತಿಯನ್ನು ಪ್ರೀತಿಸುವ ನಾಟಕವಾಡಿ, ಅತ್ಯಾಚಾರ ಮಾಡಿ ವಂಚಿಸಿರುವ ಘಟನೆ ಫಿರೋಜಾಬಾದ್‌ನ ಜಸ್ರಾನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂತ್ರಸ್ತೆಯ ದೂರಿನ ಮೇರೆಗೆ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ವ್ಯಕ್ತಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಇಲ್ಲಿನ ಮೊಹಲ್ಲಾ ಜತ್ವಾನ್ ಟಿಕೈತ್‌ಪುರ ನಿವಾಸಿ ರಾಮ್ ಸಿಂಗ್ ಎಂಬವರ ಪುತ್ರ ರೋಹಿತ್ ಚೌಹಾನ್ ಸಾಮಾಜಿಕ ಜಾಲತಾಣಗಳ ಮೂಲಕ ಯುವತಿಯನ್ನು ಪರಿಚಯಿಸಿಕೊಂಡಿದ್ದ. ಅಲ್ಲದೇ ತಾನು ನೋಯ್ಡಾದಲ್ಲಿ ಪೊಲೀಸ್ ಅಧಿಕಾರಿ ಎಂದು ಸುಳ್ಳು ಹೇಳಿದ್ದ. ಈತನನ್ನು ನಂಬಿದ ಯುವತಿ ಜೂನ್ 9ರಂದು ವಿಮಾನದ ಮೂಲಕ ದೆಹಲಿಗೆ ಬಂದಿದ್ದಾರೆ.

ಬಳಿಕ ಯುವಕ ದೆಹಲಿಯ ಪಹರ್‌ಗಂಜ್ ನ ಹೋಟೆಲ್‌ನಲ್ಲಿ ಹಲವು ದಿನಗಳ ಕಾಲ ಯುವತಿಯನ್ನು ಇರಿಸಿ, ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗಿದೆ. ಬಳಿಕ ಆರೋಪಿ ಮತ್ತೆ ಫಿರೋಜಾಬಾದ್‌ ಹೋಟೆಲ್‌ಗೆ ಕರೆತಂದು ಅಲ್ಲಿಯೂ ಯುವತಿ ಮೇಲೆ ಅತ್ಯಾಚಾರವೆಸಗಿರುವುದಾಗಿ ತಿಳಿದುಬಂದಿದೆ. ಬಳಿಕ ಆರೋಪಿ ಸಂತ್ರಸ್ತೆಯನ್ನ ಜಸ್ರಾನದ ಒಂದು ಮನೆಯಲ್ಲಿ ಬಂಧಿಯಾಗಿ ಇರಿಸಿದ್ದ ಎನ್ನಲಾಗಿದೆ.

ಆಗಸ್ಟ್ 7 ರಂದು ಆರೋಪಿಗಳಿಂದ ತಪ್ಪಿಸಿಕೊಂಡು ಬಂದ ಯುವತಿ ಜಸ್ರಾನ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಜಸ್ರಾನಾ ಇನ್ಸ್‌ಪೆಕ್ಟರ್ ಆಜಾದ್ ಪಾಲ್ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೈದ ಪ್ರಮುಖ ಮೂವರು ಆರೋಪಿಗಳು ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.