ETV Bharat / bharat

₹100 ಲಾಟರಿ ಟಿಕೆಟ್​ಗೆ ₹10 ಲಕ್ಷ ಬಂಪರ್​.. ಪಂಜಾಬ್​ ಬಾಲಕಿಗೆ ಒಲಿದ ಅದೃಷ್ಟ

100 ಟಿಕೆಟ್​ ಖರೀದಿ ಮಾಡಿದ್ದ ಅಮೃತಸರದ ಹಜರ್​ಸಿಮ್ರಾನ್​ ಕೌರ್​ಗೆ ಬಂಪರ್​ ಲಾಟರಿ.. 100 ಕ್ಕೆ ಬಂತು 10 ಲಕ್ಷ ರೂ. ಇದು ಪಂಜಾಬ್​ ಬಾಲಕಿಯ ಅದೃಷ್ಟ

ಪಂಜಾಬ್​ ಬಾಲಕಿಗೆ ಒಲಿದ ಅದೃಷ್ಟ
ಪಂಜಾಬ್​ ಬಾಲಕಿಗೆ ಒಲಿದ ಅದೃಷ್ಟ
author img

By

Published : Jul 13, 2022, 3:10 PM IST

ಅಮೃತಸರ: ಅದೃಷ್ಟ ಯಾವಾಗ, ಎಲ್ಲಿ, ಹೇಗೆ ಖುಲಾಯಿಸುತ್ತದೆ ಎಂಬುದು ಯಾರಿಗೂ ತಿಳಿಯದು. ಪಂಜಾಬ್​ನ ಅಮೃತಸರದ ಬಾಲಕಿ ಖರೀದಿಸಿದ 100 ರೂಪಾಯಿ ಲಾಟರಿ ಟಿಕೆಟ್​ಗೆ 10 ಲಕ್ಷ ರೂಪಾಯಿ ಬಹುಮಾನ ಬಂದಿದೆ. ಇದು ಆಕೆ ನಿಂತ ಕಾಲಲ್ಲೇ ಹಣ ಎಣಿಸುವಂತೆ ಮಾಡಿದೆ. ಅಮೃತಸರದ ಬಾಬಾ ಬಕಲಾ ಸಾಹಿಬ್‌ನ ನಿವಾಸಿ ಹರ್‌ಸಿಮ್ರಾನ್ ಕೌರ್ ಎಂಬ ಬಾಲಕಿಯೇ ಆ ಅದೃಷ್ಟವಂತೆ.

ಹರ್​ಸಿಮ್ರಾನ್​ ಕೌರ್​ ಅವರ ತಂದೆ ಜಮಾಲ್ ಸಿಂಗ್, ಬಾಬಾಬಕಲಾ ಸಾಹಿಬ್​ನ ರಸ್ತೆ ಬದಿ ಚಿಕ್ಕ ಅಂಗಡಿಯನ್ನು ನಡೆಸುತ್ತಿದ್ದಾರೆ. ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ತಂದೆಗೆ ನೆರವಾಗಲೆಂದು ಹರ್​ಸಿಮ್ರಾನ್​ ಅಂಗಡಿ ಬಂದಿದ್ದರು. ಈ ವೇಳೆ ಲಾಟರಿ ಮಾರಾಟ ಮಾಡುವ ವ್ಯಕ್ತಿ ಬಂದು ಲಾಟರಿ ಟಿಕೆಟ್​ ಖರೀದಿಸಲು ಕೇಳಿದ್ದಾರೆ.

ಈ ವೇಳೆ ಹರ್​ಸಿಮ್ರಾನ್​ ಕೌರ್​ ಅವರ ತಂದೆ ನಿರಾಕರಿಸಿದ್ದಾರೆ. ಬಳಿಕ ಸಿಮ್ರಾನ್​ ಒತ್ತಾಯ ಮಾಡಿ 100 ರೂಪಾಯಿ ಲಾಟರಿ ಟಿಕೆಟ್​ ಖರೀದಿಸುವಂತೆ ಮಾಡಿದ್ದಾರೆ. ಬಳಿಕ ಟಿಕೆಟ್​ ಹರಿದು ನೋಡಿದಾಗ ಅದರಲ್ಲಿ 10 ಲಕ್ಷ ರೂಪಾಯಿ ಬಹುಮಾನ ಬಂದಿರುವುದು ಗೊತ್ತಾಗಿದೆ.

ಕುಟುಂಬದಲ್ಲಿ ಸಂತಸ: ಇನ್ನು ಲಾಟರಿಯಲ್ಲಿ 10 ಲಕ್ಷ ರೂಪಾಯಿ ಬಂದಿದ್ದಕ್ಕೆ ಹರ್​​ಸಿಮ್ರಾನ್​ ಕೌರ್​ ಅವರ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದೆ. ಈ ಹಣವನ್ನು ತನ್ನ ತಂದೆಯ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ತನ್ನ ಓದಿಗೆ ಬಳಕೆ ಮಾಡಿಕೊಳ್ಳುವುದಾಗಿ ಸಿಮ್ರಾನ್​ ತಿಳಿಸಿದ್ದಾರೆ.

ಓದಷಿ: 4,389 ಕೋಟಿ ರೂಪಾಯಿಗಳ ಕಸ್ಟಮ್ಸ್ ಸುಂಕ ವಂಚನೆ ಮಾಡಿದ ಒಪ್ಪೋ ಇಂಡಿಯಾ : DRIನಿಂದ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.