ನವದೆಹಲಿ: ಪಿಎಂ ಕೇರ್ಸ್ನ ವೆಂಟಿಲೇಟರ್‌ಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಆ ವೆಂಟಿಲೇಟರ್ಗೂ ಪ್ರಧಾನಿ ಮೋದಿಗೂ ಸಾಕಷ್ಟು ಸಾಮಾನತೆ ಇದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ಪಿಎಂ ಕೇರ್ಸ್ ಒದಗಿಸುವ ವೆಂಟಿಲೇಟರ್‌ಗಳು ಹಾಗೂ ಪಿಎಂ ಅವರ ನಡುವೆ ಸಾಕಷ್ಟು ಸಾಮಾನತೆ ಇದೆ, ಅಗತ್ಯವಿರುವಲ್ಲಿ, ಅಗತ್ಯವಿದ್ದಾಗ ಎಲ್ಲಿಯೂ ಕಾಣಸಿಗುವುದಿಲ್ಲ, ಕೆಲಸಕ್ಕೂ ಬರುವುದಿಲ್ಲ", ಎಂದು ಅವರು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಕೋವಿಡ್ ರೋಗಿಗಳು ಉಸಿರಾಟ ಸಮಸ್ಯೆಗೆ ತುತ್ತಾಗುತ್ತಿದ್ದರೂ ಕೆಲವು ರಾಜ್ಯಗಳಲ್ಲಿ ಪಿಎಂ ಕೇರ್ಸ್ ನಿಧಿಯಡಿ ಸರಬರಾಜಾಗುವ ಕಳಪೆ ವೆಂಟಿಲೇಟರ್‌ಗಳ ಬಳಕೆ ಕುರಿತ ವರದಿಗಳ ಹಿನ್ನೆಲೆಯಲ್ಲಿ ರಾಹುಲ್ ಇಂದು ಹರಿಹಾಯ್ದಿದ್ದಾರೆ.
ಪಿಎಂ ಕೇರ್ಸ್ ಫಂಡ್ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರ್ಕಾರ ನಡೆಸುವ ಕೋವಿಡ್ ಆಸ್ಪತ್ರೆಗಳಿಗೆ 2,000 ಕೋಟಿ ರೂ.ಗಳ 50,000 ವೆಂಟಿಲೇಟರ್‌ಗಳನ್ನು ಪೂರೈಸಿದೆ ಎಂದು ಕೇಂದ್ರ ತಿಳಿಸಿದೆ.