ಸದಾಶಿವಪೇಟೆ, ಸಂಗಾರೆಡ್ಡಿ : ಸಂಗಾರೆಡ್ಡಿ ಜಿಲ್ಲೆಯ ಸದಾಶಿವಪೇಟೆ ಪಟ್ಟಣದಲ್ಲಿ ಬುಧವಾರ ಬೆಳಗ್ಗೆ ಕಳ್ಳರು ಕೈಚಳಕ ತೋರಿಸಿದ್ದಾರೆ. ಒಂದೇ ಬ್ಯಾಂಕ್ಗೆ ಸೇರಿದ ಮೂರು ಎಟಿಎಂಗಳನ್ನು ಗ್ಯಾಸ್ ಕಟರ್ ಸಹಾಯದಿಂದ ಕತ್ತರಿಸಿ ಸುಮಾರು 28 ಲಕ್ಷ ರೂ. ದೋಚಿದ್ದಾರೆ. ಸಾಕ್ಷ್ಯ ನಾಶಕ್ಕಾಗಿ ಎಟಿಂಎನಲ್ಲಿದ್ದ ಸಿಸಿ ಕ್ಯಾಮೆರಾಗಳಿಗೆ ಸುಣ್ಣ ಎರಚಿದ್ದಾರೆ. ಸದಾಶಿವಪೇಟೆಯ ಬಸವೇಶ್ವರ ಮಂದಿರ, ಗಾಂಧಿ ಚೌಕ್ ಮತ್ತು ಗರ್ಲ್ಸ್ ಹೈಸ್ಕೂಲ್ ಬಳಿ ಮೂರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ಕ್ಕೆ ಸೇರಿದ ಎಟಿಎಂಗಳಿವೆ.
ಬುಧವಾರ ಬೆಳಗ್ಗೆ ಸ್ಥಳೀಯರು ಕಳ್ಳತನವಾಗಿರುವ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಇದಕ್ಕಾಗಿ ಕ್ಲೂಸ್ ಟೀಮ್ ತಂಡಗಳನ್ನು ನಿಯೋಜಿಸಲಾಗಿತ್ತು. ಗ್ಯಾಸ್ ಕಟ್ಟರ್‌ಗಳ ಸಹಾಯದಿಂದ ಕಳ್ಳರು ಎಟಿಎಂ ತೆರೆದಿದ್ದಾರೆ. ಸಮೀಪದ ಕಾಲೋನಿಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಶೋಧಿಸಿದ ಪೊಲೀಸರಿಗೆ ಬುಧವಾರ ಬೆಳಗಿನ ಜಾವ 3ರಿಂದ 3.40ರ ನಡುವೆ ಟಿಎಸ್ 09 ಎಫ್ಇ 5840 ಕಾರಿನಲ್ಲಿ ಕಳ್ಳರು ಬಂದಿರುವುದಾಗಿ ತಿಳಿದುಬಂದಿದೆ.
ಪ್ರಾಥಮಿಕ ಅಂದಾಜಿನ ಪ್ರಕಾರ, ಮೂರು ಎಟಿಎಂಗಳಿಂದ ಒಟ್ಟು ಸುಮಾರು 28 ಲಕ್ಷ ರೂ. ದೋಚಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎಟಿಎಂಗಳಲ್ಲಿ ಎಷ್ಟು ಹಣ ಜಮೆಯಾಗಿದೆ? ಎಷ್ಟು ಡ್ರಾ ಆಗಿದೆ ಎಂಬುದು ನಿಖರವಾಗಿ ತಿಳಿದರೆ, ಕದ್ದಿರುವ ಹಣದ ಬಗ್ಗೆ ಸ್ಪಷ್ಟವಾಗುತ್ತದೆ. ಈ ಹಿಂದೆ ಈ ರೀತಿಯ ದರೋಡೆಗಳಲ್ಲಿ ಭಾಗಿಯಾಗಿರುವ ಉತ್ತರ ಪ್ರದೇಶದ ಹಳೆಯ ಕ್ರಿಮಿನಲ್‌ಗಳ ತಂಡವೇ ಇದನ್ನು ಮಾಡಿದೆಯೇ? ಅಥವಾ ಯಾರಾದ್ರೂ ಪೊಕ್ಲೇನ್ ರಿಪೇರಿ ಮಾಡಿದ್ದಾರಾ? ಎಂಬ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ. ಘಟನೆಯ ಬಗ್ಗೆ ಪಟ್ಟಣದ ಸಿಐ ನವೀನ್ ಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಶೇಷ ತಂಡಗಳ ನಿಯೋಜನೆ : ಘಟನೆಯನ್ನು ಸಂಗಾರೆಡ್ಡಿ ಜಿಲ್ಲಾ ಎಸ್ಪಿ ರೂಪೇಶ್ ಗಂಭೀರವಾಗಿ ಪರಿಗಣಿಸಿದ್ದಾರೆ. ಅಲ್ಲದೇ, ಸ್ಥಳೀಯ ಪೊಲೀಸರಿಗೆ ಜಿಲ್ಲಾ ಕೇಂದ್ರದಲ್ಲಿ ಬುಧವಾರ ನಡೆದ ಕಾನೂನು ಸುವ್ಯವಸ್ಥೆ ಸಭೆಗೆ ಬಾರದೇ ಅಲ್ಲೇ ಇದ್ದು ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ತನಿಖೆಗಾಗಿ ನಾಲ್ಕು ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ. ಪಟ್ಟಣದ ಜತೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 65, ಟೋಲ್ ಗೇಟ್ ಮತ್ತಿತರ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದರು. ಕಳ್ಳರು ಬಳಸಿದ ಕಾರು ಎಲ್ಲಿಂದ ಬಂತು?. ಎಲ್ಲಿಗೆ ಹೋಯಿತು ಎಂಬ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ : ಬೈಕ್‌ನಲ್ಲಿಟ್ಟಿದ್ದ ಎರಡೂವರೆ ಲಕ್ಷ ಹಣ ಕಳ್ಳತನ: ಸಿಸಿಟಿವಿಯಲ್ಲಿ ಕಳ್ಳನ ಕೈಚಳಕ ಸೆರೆ