ETV Bharat / bharat

ಉಮೇಶ್​ ಪಾಲ್​ ಹತ್ಯೆ ಪ್ರಕರಣ: ಶೈಸ್ತಾ ಪರ್ವೀನ್ ಅಂಡ್​​​ ಟೀಂ ವಿರುದ್ಧ ಲುಕ್‌ಔಟ್ ನೋಟಿಸ್ - ಶೈಸ್ತಾ ಪರ್ವೀನ್ ಆ್ಯಂಡ್​ ಟೀಂ

ಮಾಜಿ ಡಾನ್ ಅತೀಕ್ ಅಹ್ಮದ್ ಪತ್ನಿ ಶೈಸ್ತಾ ಪರ್ವೀನ್, ಬಾಂಬರ್ ಗುಡ್ಡು ಮುಸ್ಲಿಂ ಮತ್ತು ಶೂಟರ್ ಸಬೀರ್ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಅತೀಕ್ ಅಹ್ಮದ್ ಕೊಲೆ ಬಳಿಕ ಈ ತಂಡ ತಲೆಮರೆಸಿಕೊಂಡಿದೆ.

Lookout notice issued against Shaista Parveen

author img

By

Published : May 16, 2023, 1:42 PM IST

ಪ್ರಯಾಗರಾಜ್: (ಉತ್ತರ ಪ್ರದೇಶ): ಹತ್ಯೆಯಾದ ದರೋಡೆಕೋರ ಅತೀಕ್ ಅಹ್ಮದ್ ಪತ್ನಿ ಶೈಸ್ತಾ ಪರ್ವೀನ್ ಮತ್ತು ಅವರ ಆಪ್ತ ಸಹಾಯಕರಾದ ಬಾಂಬರ್ ಗುಡ್ಡು ಮುಸ್ಲಿಂ ಮತ್ತು ಸಬೀರ್ ಎಂಬುವರ ವಿರುದ್ಧ ಪ್ರಯಾಗರಾಜ್ ಪೊಲೀಸರು ಲುಕ್ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಮೇಶ್​ ಪಾಲ್​ ಬಳಿಕ ಶೈಸ್ತಾ ಮತ್ತು ಈ ತಂಡ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧನೆ ನಡೆಸಿದ್ದಾರೆ. ಅಲ್ಲದೇ ಅವರ ಬಗ್ಗೆ ಮಾಹಿತಿ ನೀಡಿದವರಿಗೆ 50,000 ರೂಪಾಯಿ ಬಹುಮಾನ ನೀಡುವುದಾಗಿ ಉತ್ತರ ಪ್ರದೇಶ ಪೊಲೀಸರು ಈಗಾಗಲೇ ಘೋಷಿಸಿದ್ದು, ಇದರ ಬೆನ್ನಲ್ಲೇ ಈ ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಉಮೇಶ್ ಪಾಲ್ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿರುವ ಸಬೀರ್ ತಲೆಗೂ ಕೂಡ ಪೊಲೀಸರು 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.

Lookout notice issued against Shaista Parveen
ಶೈಸ್ತಾ ಪರ್ವೀನ್ ಆ್ಯಂಡ್​ ಟೀಂ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ

ಸದ್ಯ ಶೈಸ್ತಾ ಪರ್ವೀನ್ ಮತ್ತು ಅವರ ತಂಡ ನಿತ್ಯವೂ ತಾವು ಉಳಿದುಕೊಳ್ಳುವ ಸ್ಥಳವನ್ನು ಬದಲಾಯಿಸುತ್ತಾ ಬರುತ್ತಿದ್ದಾರೆ. ಇದೇ ಕಾರಣಕ್ಕೆ ಅವರ ಅಡಗುತಾಣಗಳ ಬಗ್ಗೆ ಸಕಾಲಕ್ಕೆ ಮಾಹಿತಿ ಸಿಗುತ್ತಿಲ್ಲ. ಅವರ ಇರುವಿಕೆ ಬಗ್ಗೆ ಪೊಲೀಸರು ಸಹ ಶೋಧನೆ ನಡೆಸಿದ್ದಾರೆ. ಮಾಹಿತಿ ಪ್ರಕಾರ ಅವರು ದೇಶ ತೊರೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಪೊಲೀಸರು ಈ ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದಾರೆ.

ಕಳೆದ ಹಲವು ದಿನಗಳಿಂದ ತಲೆಮರೆಸಿಕೊಂಡಿರುವ ಈ ತಂಡ ಮೂವರ ಪಾಸ್ ಪೋರ್ಟ್​ಗಳು ಯಾವಾಗ ಮತ್ತು ಯಾವ ಹೆಸರಿನಲ್ಲಿ ತಯಾರಿಸಲಾಗಿದೆ ಎಂಬುದು ಗೊತ್ತಾಗಿದ್ದು, ದೇಶ ತೊರೆಯದಂತೆ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಈ ಲುಕ್ ಔಟ್ ನೋಟಿಸ್​ ಅವಧಿ 1 ವರ್ಷವಿದ್ದು ಎಲ್ಲ ಚೆಕ್‌ಪೋಸ್ಟ್‌ಗಳಿಗೆ ಕಳುಹಿಸಲಾಗಿದೆ.

ಫ್ರೆಬವರಿ 24 ರಂದು ಉಮೇಶ್​ ಪಾಲ್​ ಹತ್ಯೆಯಾಗಿತ್ತು. ಈ ಹತ್ಯೆಯ ಬಳಿಕ ಅಹ್ಮದ್​ ಪತ್ನಿ ಶೈಸ್ತಾ ಪರ್ವೀನ್​ ನಾಪತ್ತೆಯಾಗಿದ್ದು, ರಾಜ್ಯದ ವಿವಿಧೆಡೆ ಪೊಲೀಸರು ಹಲವು ತಂಡಗಳನ್ನು ರಚನೆ ಮಾಡಿಕೊಂಡು ತೀವ್ರ ಶೋಧ ಕೈಗೊಂಡಿದ್ದಾರೆ. ಕಳೆದ ಹಲವು ದಿನಗಳಿಂದ ಸತತ ಪ್ರಯತ್ನಪಟ್ಟರೂ ಅವರ ಸುಳಿವು ಪೊಲೀಸರಿಗೆ ಸಿಕ್ಕಿಲ್ಲ.

ಉಮೇಶ್​ ಪಾಲ್​ ಹತ್ಯೆ ಪ್ರಕರಣದ ಆರೋಪಿಗಳಾಗಿದ್ದ ಅತೀಕ್​ ಅಹ್ಮದ್​ ಮತ್ತು ಆತನ ಸಹೋದರ ಅಶ್ರಫ್ ಇಬ್ಬರನ್ನು ಏಪ್ರಿಲ್​ 15ರ ರಂದು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ, ಪೊಲೀಸರ ಎದುರೇ ಕೆಲವರು ಭೀಕರ ಗುಂಡಿನ ದಾಳಿ ನಡೆಸಿ ಅತೀಕ್​ ಅಹ್ಮದ್​ ಮತ್ತು ಅಶ್ರಫ್​ನನ್ನು ಹತ್ಯೆ ಮಾಡಿದ್ದರು.

ಪತಿ ಹತ್ಯೆ ವಿಚಾರ ಗೊತ್ತಾಗಿ ಹಾಗೂ ಅತೀಕ್​​, ಅಶ್ರಫ್​ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಳ್ಳುವುದಕ್ಕಾದರೂ ಶೈಸ್ತಾ ಬಂದೇ ಬರುತ್ತಾರೆ ಎಂಬ ಸಣ್ಣ ನಂಬಿಕೆ ಪೊಲೀಸರದ್ದಾಗಿತ್ತು. ಆಗಲೂ ಪರ್ವಿನ್​​​ ಅಡಗು ತಾಣದಿಂದ ಹೊರ ಬರಲೇ ಇಲ್ಲ. ಆ ಬಳಿಕ ಅವರು ಉಳಿದುಕೊಂಡಿದ್ದಾರೆ ಎನ್ನಲಾದ ಗ್ರಾಮಕ್ಕೆ ತೆರಳಿ ತೀವ್ರ ಶೋಧವನ್ನೂ ಕೈಗೊಂಡಿದ್ದರು. ಆದರೂ ಯಾವುದೇ ಪ್ರಯೋಜನವಾಗಿರಲಿಲ್ಲ

ಇದನ್ನೂ ಓದಿ: ಅಕ್ಕಪಕ್ಕದ ಮನೆಯವರ ಕಿರುಕುಳ: ಮನೆಯಲ್ಲೇ ಆತ್ಮಹತ್ಯೆ.. ಸಾಯುವ ಮುನ್ನ ವಿಡಿಯೋ ಮಾಡಿದ್ದ ಮಹಿಳೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.