ETV Bharat / bharat

ದೇಶವನ್ನೇ ಬೆಚ್ಚಿಬೀಳಿಸಿದ ಅಪರಾಧ ಪ್ರಕರಣಗಳಿವು..: 2022ರಲ್ಲಿ ನಡೆದ ಕ್ರೈಂ ಹಿಸ್ಟರಿ - ಈಟಿವಿ ಭಾರತ ಕನ್ನಡ

2022 ರ ಮುಕ್ತಾಯದ ಹಂತದಲ್ಲಿದ್ದೇವೆ. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರುಷದ ಆಗಮನವಾಗಲಿದೆ. ಈ ಸಂದರ್ಭದಲ್ಲಿ ದೇಶದಲ್ಲಿ ನಡೆದ ಮತ್ತು ಬೆಚ್ಚಿ ಬೀಳಿಸಿದ ಕೆಲವು ಪ್ರಮುಖ ಘಟನೆಗಳನ್ನೊಮ್ಮೆ ಮೆಲುಕು ಹಾಕೋಣ.

look-back-2022-crimes-that-shook-the-nation-a-few-more
ದೇಶವನ್ನು ಬೆಚ್ಚಿಬೀಳಿಸಿದ ಅಪರಾಧ ಪ್ರಕರಣಗಳು..2022ರಲ್ಲಿ ನಡೆದ ಕ್ರೈಂ ಹಿಸ್ಟರಿ
author img

By

Published : Dec 25, 2022, 6:51 AM IST

2022 ರಲ್ಲಿ ನಡೆದ ಹಲವು ಘಟನೆಗಳು ದೇಶವನ್ನು ಬೆಚ್ಚಿಬೀಳಿಸಿವೆ. ಇದಕ್ಕೆ ಹಲವು ನಿದರ್ಶನಗಳಿವೆ. ಉದಯಪುರದಲ್ಲಿ ಟೈಲರ್ ಕನ್ಹಯ್ಯಾ ಲಾಲ್ ಎಂಬವರನ್ನು ಇಬ್ಬರು ದುಷ್ಕರ್ಮಿಗಳು ಶಿರಚ್ಛೇದನ ಮಾಡಿ ಅಟ್ಟಹಾಸ ಮೆರೆದಿದ್ದರು. ತನ್ನ ಗೆಳೆಯನಿಂದ ತುಂಡು ತುಂಡಾಗಿ ಕತ್ತರಿಸಲ್ಪಟ್ಟ ಶ್ರದ್ಧಾ ವಾಕರ್ ಹತ್ಯೆ ಇಡೀ ದೇಶವನ್ನು ಬೆಚ್ಚಿ ಬೀಳುವಂತೆ ಮಾಡಿತ್ತು. ಕೇರಳದಲ್ಲಿ ದೇಹದ ಭಾಗಗಳನ್ನು ಕತ್ತರಿಸಿ ಸೇವಿಸಿದ ಘಟನೆ, ಪ್ರವಾದಿ ವಿರುದ್ಧ ಬಿಜೆಪಿ ನಾಯಕಿಯ ವಿವಾದಾತ್ಮಕ ಹೇಳಿಕೆಯಿಂದ ಉಂಟಾದ ಗಲಭೆ, ಕೊಯಮತ್ತೂರು ಮತ್ತು ಮಂಗಳೂರಿನಲ್ಲಿ ನಡೆದ ಬಾಂಬ್​ ಸ್ಫೋಟದ ಪ್ರಕರಣಗಳು, ಪಂಜಾಬಿ ಗಾಯಕನ ಕೊಲೆ ಪ್ರಕರಣ ಹಾಗು 2022ರಲ್ಲಿ ನಡೆದ ಪ್ರಮುಖ ಅಪರಾಧ ಘಟನಾವಳಿಗಳಾಗಿವೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ನ್ಯಾಷನಲ್​ ಕ್ರೈಂ ರೆಕಾರ್ಡ್ಸ್ ಬ್ಯೂರೋ)ದ ಪ್ರಕಾರ, 2021 ರಲ್ಲಿ ಭಾರತವು ಪ್ರತಿದಿನ ಸರಾಸರಿ 86 ಅತ್ಯಾಚಾರ ಪ್ರಕರಣ ಮತ್ತು ಪ್ರತಿ ಗಂಟೆಗೆ ಮಹಿಳೆಯರ ವಿರುದ್ಧ 49 ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ ಎಂದು ಹೇಳಿದೆ.

ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣ: ಅಫ್ತಾಬ್ ಪೂನಾವಾಲಾನನ್ನು ತನ್ನ ಜೊತೆಗೆ ಸಹಜೀವನ ನಡೆಸುತ್ತಿದ್ದ ಶ್ರದ್ಧಾ ವಾಕರ್‌ನ​ನ್ನು ಕ್ರೂರವಾಗಿ ಕೊಂದಿದ್ದಕ್ಕಾಗಿ ಬಂಧಿಸಲಾಯಿತು. ಅಫ್ತಾಬ್​ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ದೇಹದ ಭಾಗಗಳನ್ನು 35 ತುಂಡುಗಳನ್ನಾಗಿ ಮಾಡಿ ಫ್ರೀಜರ್​ನಲ್ಲಿಟ್ಟಿದ್ದನು. ಬಳಿಕ ದೇಹದ ಭಾಗಗಳನ್ನು ದೆಹಲಿಯ ವಿವಿಧ ಭಾಗಗಳಲ್ಲಿ ವಿಲೇವಾರಿ ಮಾಡಿದ್ದನು. ಶ್ರದ್ಧಾ ನಾಪತ್ತೆಯಾಗಿರುವ ಬಗ್ಗೆ ಆಕೆಯ ತಂದೆ ಮುಂಬೈ ಪೊಲೀಸರಿಗೆ ದೂರು ದಾಖಲಿಸಿದ್ದರಿಂದ ಹತ್ಯೆ ಬೆಳಕಿಗೆ ಬಂದಿತ್ತು.

ಆರ್ಥಿಕ ಅಭಿವೃದ್ಧಿಗೆ ಕೇರಳದಲ್ಲಿ ನರಬಲಿ: ಆರ್ಥಿಕ ಏಳಿಗೆಗಾಗಿ ಕೇರಳದಲ್ಲಿ ಇಬ್ಬರು ಮಹಿಳೆಯರನ್ನು ನರಬಲಿ ನೀಡಿರುವ ಘಟನೆ ವರದಿಯಾಗಿತ್ತು. ಇಲ್ಲಿನ ದಂಪತಿ ತ್ವರಿತವಾಗಿ ಶ್ರೀಮಂತರಾಗಲು ಇಬ್ಬರು ಮಹಿಳೆಯರನ್ನು ನರಬಲಿ ನೀಡಿದ್ದರು. ಮೃತ ಮಹಿಳೆಯರನ್ನು ರೋಸೆಲಿನ್ ಮತ್ತು ಪದ್ಮಾ ಎಂದು ಗುರುತಿಸಲಾಗಿತ್ತು.

ಇವರನ್ನು ಕತ್ತು ಹಿಸುಕಿ ಸಾಯಿಸುವ ಮೊದಲು ಕಟ್ಟಿಹಾಕಿ ಚಿತ್ರಹಿಂಸೆ ನೀಡಲಾಗಿತ್ತು. ಅವರ ಸ್ತನಗಳನ್ನು ಕತ್ತರಿಸಲಾಗಿತ್ತು. ಇವರಲ್ಲಿ ಒಬ್ಬರ ದೇಹವನ್ನು 56 ತುಂಡುಗಳಾಗಿ ಕತ್ತರಿಸಿ, ಮೂರು ಗುಂಡಿಗಳಲ್ಲಿ ಹೂತು ಹಾಕಲಾಗಿತ್ತು. ಅಷ್ಟೇ ಅಲ್ಲದೆ, ಮೃತ ಹಸಿ ಮಾಂಸವನ್ನು ತಿಂದಿರುವುದಾಗಿ ವರದಿಯಾಗಿತ್ತು. ಘಟನೆಯ ಪ್ರಮುಖ ಆರೋಪಿಗಳಾದ ಮಹಮ್ಮದ್ ಶಾಫಿ, ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೈಲಾ ಎಂಬವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಉದಯಪುರದಲ್ಲಿ ಟೈಲರ್​ ಶಿರಚ್ಛೇದನ: ಪ್ರವಾದಿಯನ್ನು ಅವಹೇಳನ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಉದಯಪುರ ಎಂಬಲ್ಲಿ ಇಬ್ಬರು ದುಷ್ಕರ್ಮಿಗಳು ಕನ್ಹಯ್ಯಾ ಲಾಲ್​ ಎಂಬವರನ್ನು ಶಿರಚ್ಛೇದನ ಮಾಡಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮೊಹಮ್ಮದ್ ರಿಯಾಜ್ ಅಟ್ಟಾರಿ ಮತ್ತು ಘೌಸ್ ಮೊಹಮ್ಮದ್ ಎಂಬವರನ್ನು ಬಂಧಿಸಿದ್ದರು. ಆರೋಪಿಗಳು ಹತ್ಯೆ ಮಾಡುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇಸ್ಲಾಂ ಧರ್ಮಕ್ಕೆ ಮಾಡಿದ ಅವಮಾನಕ್ಕೆ ಪ್ರತೀಕಾರವಾಗಿ ಈ ಹತ್ಯೆ ಮಾಡಲಾಗಿದೆ ಆರೋಪಿಗಳು ಹೇಳಿಕೆ ನೀಡಿದ್ದರು.

ಅಲ್ಲದೇ ವಿವಾದಾತ್ಮಕ ಹೇಳಿಕೆಗಾಗಿ ಪಕ್ಷದಿಂದ ಅಮಾನತುಗೊಂಡಿರುವ ಭಾರತೀಯ ಜನತಾ ಪಕ್ಷದ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಹಲವು ವಲಯಗಳಲ್ಲಿ ಬೆಂಬಲ ವ್ಯಕ್ತವಾಗಿತ್ತು. ಅಂತೆಯೇ ಕನ್ಹಯ್ಯಾ ಲಾಲ್ ಅವರೂ ನೂಪುರ್​ ಶರ್ಮ ಹೇಳಿಕೆ ಬೆಂಬಲವಾಗಿ ಫೇಸ್‌ಬುಕ್ ಪೋಸ್ಟ್ ಮಾಡಿದ್ದರು. ಇದು ಕೊಲೆಯಲ್ಲಿ ಅಂತ್ಯ ಗೊಂಡಿತ್ತು.

ಪಂಜಾಬಿ ಗಾಯಕ ಸಿಧು ಮೂಸೇವಾಲಾ ಗುಂಡಿಕ್ಕಿ ಹತ್ಯೆ: ಮೇ 29 ರಂದು ಪಂಜಾಬಿನ ಮಾನ್ಸಾ ಜಿಲ್ಲೆಯಲ್ಲಿ ಖ್ಯಾತ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.

ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದ ಇವರು ತಮ್ಮ ಇಬ್ಬರು ಸ್ನೇಹಿತರೊಂದಿಗೆ ಜೀಪ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ದಾಳಿ ನಡೆಸಲಾಗಿತ್ತು. ಈ ಘಟನೆ ನಡೆಯುವ ಹಿಂದಿನ ದಿನ ಇವರ ಭದ್ರತೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿತ್ತು. ಇದರ ಲಾಭವನ್ನು ಪಡೆದ ಶೂಟರ್‌ಗಳು ಮೂಸೇವಾಲ ವಾಹನದ ಮೇಲೆ ಗುಂಡಿನ ಮಳೆಗರೆದಿದ್ದರಿಂದ ಮೂಸೇವಾಲ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಕೊಲೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಕೆನಡಾ ಮೂಲದ ಗ್ಯಾಂಗ್​​ಸ್ಟರ್​​ ಗೋಲ್ಡಿ ಬ್ರಾರ್ ಹೊತ್ತುಕೊಂಡಿದ್ದರು. ಯುವ ಅಕಾಲಿ ನಾಯಕ ಮಿದ್ದುಖೇರಾ 2021 ರಲ್ಲಿ ಕೊಲ್ಲಲ್ಪಟ್ಟಿದನು. ಈತನ ಹತ್ಯೆಯಲ್ಲಿ ಮೂಸೇವಾಲಾ ಅವರ ಮ್ಯಾನೇಜರ್ ಆದ ಶಗನ್‌ಪ್ರೀತ್ ಸಿಂಗ್ ಹೆಸರು ಕೇಳಿಬಂದಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳಲು ಬ್ರಾರ್​ ಮೂಸೇವಾಲನ ಹತ್ಯೆಗೆ ಯೋಜನೆ ರೂಪಿಸಿದ್ದ ಎಂದು ತಿಳಿದುಬಂದಿದೆ.

ಟಿಕ್‌ಟಾಕ್ ಖ್ಯಾತಿಯ ಸೋನಾಲಿ ಫೋಗಟ್ ನಿಗೂಢ ಸಾವು: ಆಗಸ್ಟ್ 23 ರಂದು ಬಿಜೆಪಿ ನಾಯಕಿ ಸೋನಾಲಿ ಫೋಗಟ್ (43) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ರಿಯಾಲಿಟಿ ಟಿವಿ ಶೋ ಬಿಗ್ ಬಾಸ್‌ನಲ್ಲಿ ಭಾಗವಹಿಸಿದ್ದ ಇವರು, ಘಟನೆಯ ಹಿಂದಿನ ದಿನ ತನ್ನ ಇಬ್ಬರು ಪುರುಷ ಸಹಾಯಕ ಸುಧೀರ್ ಸಾಂಗ್ವಾನ್ ಮತ್ತು ಸುಖವಿಂದರ್ ಸಿಂಗ್ ಅವರೊಂದಿಗೆ ಗೋವಾಕ್ಕೆ ಬಂದಿದ್ದರು. ಈ ಸಹಾಯಕರು ನೀರನಲ್ಲಿ ಒಂದು ರಾಸಾಯನಿಕವನ್ನು ಬೆರೆಸಿ ಫೋಗಟ್ ಅವರಿಗೆ ಬಲವಂತವಾಗಿ ಕುಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ವೈದ್ಯರು ಹೇಳಿದ್ದು, ಕುಟುಂಬವು ಆಕೆಯ ಸಹಾಯಕರನ್ನು ಕೊಲೆ ಮಾಡಿದೆ ಎಂದು ಆರೋಪಿಸಿತ್ತು. ಆಕೆಯ ಸಹಾಯಕರನ್ನು ಕೊಲೆ ಆರೋಪದ ಮೇಲೆ ಸಿಬಿಐ ಚಾರ್ಜ್ ಶೀಟ್ ಮಾಡಿತ್ತು.

ತಮಿಳುನಾಡು, ಕರ್ನಾಟಕದಲ್ಲಿ ಸ್ಫೋಟ: ಅವಳಿ ಘಟನೆಗಳು ತಮಿಳುನಾಡು ಮತ್ತು ಕರ್ನಾಟಕದಲ್ಲಿ ವಿಭಿನ್ನ ಸಮಯದಲ್ಲಿ ವರದಿಯಾಗಿದೆ. ಅಕ್ಟೋಬರ್ 23 ರಂದು, 29 ವರ್ಷದ ಜಮೀಶಾ ಮುಬೀನ್ ಎಂಬವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಸಾವನ್ನಪ್ಪಿದರು. ಇಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುವಲ್ಲಿ ಮುಬೀನ್ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಶಂಕಿಸಲಾಗಿದೆ. ಅಲ್ಲದೇ ಮುಬೀನ್ ನಿವಾಸದಲ್ಲಿ ಪೊಟಾಶಿಯಂ ನೈಟ್ರೇಟ್ ಸೇರಿದಂತೆ 75 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಿಂಗಳ ಬಳಿಕ ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಪ್ರೆಶರ್ ಕುಕ್ಕರ್ ಸ್ಫೋಟಗೊಂಡ ಘಟನೆ ವರದಿಯಾಗಿದೆ. ಕುಕ್ಕರ್ ಹೊತ್ತಿದ್ದ ಮಹಮ್ಮದ್ ಶಾರಿಕ್ ಹಾಗೂ ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಎಂಬವರು ಗಂಭೀರ ಗಾಯಗೊಂಡಿದ್ದರು. ನ.19 ರಂದು ಸರ್ಕ್ಯೂಟ್ ವೈರ್‌ಗಳೊಂದಿಗಿನ ಪ್ರೆಶರ್ ಕುಕ್ಕರ್ ಹಿಡಿದಿರುವ ಶಾರಿಕ್​ನ ಫೋಟೋಗಳು ಲಭ್ಯವಾಗಿತ್ತು. ಇದನ್ನು ಸಾಗಿಸುವಾಗ ಅದು ಸ್ಫೋಟಗೊಂಡಿತ್ತು, ಬಾಂಬ್​ ದಾಳಿ ನಡೆಸಲು ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ.

ಅಂಕಿತಾ ಭಂಡಾರಿ ಕೊಲೆ ಪ್ರಕರಣ: ಸೆ.24 ರಂದು ಉತ್ತರಾಖಂಡದ ಋಷಿಕೇಶದ ಚಿಲ್ಲಾ ಕಾಲುವೆಯಲ್ಲಿ ಅಂಕಿತಾ ಭಂಡಾರಿ (19) ಮೃತದೇಹ ಪತ್ತೆಯಾಗಿತ್ತು. ಇಲ್ಲಿನ ಗಂಗಾ ಭೋಗ್‌ಪುರ ಪ್ರದೇಶದ ವನಂತರಾ ರೆಸಾರ್ಟ್‌ನಲ್ಲಿ ರಿಸೆಪ್ಸನಿಸ್ಟ್​ ಆಗಿ ಕೆಲಸ ಮಾಡುತ್ತಿದ್ದ ಭಂಡಾರಿ ಅವರನ್ನು ರೆಸಾರ್ಟ್‌ನ ನಿರ್ವಾಹಕ ಪುಲ್ಕಿತ್ ಆರ್ಯ ಮತ್ತು ಅವರ ಇಬ್ಬರು ಉದ್ಯೋಗಿಗಳಾದ ಸೌರಭ್ ಭಾಸ್ಕರ್ ಮತ್ತು ಅಂಕಿತ್ ಗುಪ್ತಾ ಹತ್ಯೆ ಮಾಡಿದ್ದರು.

ಹೆಚ್ಚುವರಿ ಸೇವೆ ನೀಡಲು ನಿರಾಕರಿಸಿದ್ದಕ್ಕಾಗಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದರು. ಪುಲ್ಕಿತ್ ಆರ್ಯ ಮಾಜಿ ರಾಜ್ಯ ಬಿಜೆಪಿ ನಾಯಕನ ಮಗನಾಗಿದ್ದು, ಈ ಪ್ರಕರಣವನ್ನು ರಾಜ್ಯ ಸರ್ಕಾರವು ಉಪ ಪೊಲೀಸ್ ಮಹಾನಿರೀಕ್ಷಕ ಪಿ ರೇಣುಕಾ ದೇವಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿತು.

ಇತರ ಅಪರಾಧ ಪ್ರಕರಣಗಳು: ಡಿ. 8ರಂದು ಬಿಹಾರದ ಭಾಗಲ್ಪುರ ಎಂಬಲ್ಲಿ ಶಕೀಲ್​ ಮಿಯಾನ್​ (62) ಎಂಬಾತನನ್ನು ನೀಲಮ್ ದೇವಿ (45) ಎಂಬವರ ಕೊಲೆಗೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ಬಂಧಿಸಿದ್ದರು. ಆರೋಪಿಯು ಕೊಲೆಯ ನಂತರ ಮಹಿಳೆಯ ಕೈಕಾಲು, ಕಿವಿ ಮತ್ತು ಸ್ತನಗಳನ್ನು ಕತ್ತರಿಸಿದ್ದ ಎಂದು ತಿಳಿದುಬಂದಿದೆ.

ನ.28 ರಂದು ದೆಹಲಿಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದಕ್ಕಾಗಿ ತಾಯಿ ಮತ್ತು ಮಗ ಬಂಧಿಸಲಾಯಿತು. ಕೊಲೆಯಾದ ಅಂಜನ್ ದಾಸ್‌ಗೆ ನಿದ್ರೆ ಮಾತ್ರೆಗಳನ್ನು ನೀಡಿ ಗಂಟಲನ್ನು ಸೀಳಿ ಕೊಲೆಗೈಯಲಾಗಿತ್ತು. ಬಳಿಕ ಮೃತದೇಹದ ಭಾಗಗಳನ್ನು ಕತ್ತರಿಸಿ ರೆಫ್ರಿಜರೇಟರ್‌ನಲ್ಲಿ ಇರಿಸಲಾಗಿತ್ತು.

ಆಗಸ್ಟ್ 7 ರಂದು ಪ್ರೀತಿ ಶರ್ಮಾ ಎಂಬಾಕೆ ತನ್ನ ಗೆಳೆಯನ ಶವವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸುತ್ತಿದ್ದಾಗ ದೆಹಲಿ ಪೊಲೀಸರು ಬಂಧಿಸಿದ್ದರು. ಮೃತ ವ್ಯಕ್ತಿಯನ್ನು ಫಿರೋಜ್ ಎಂದು ಗುರುತಿಸಲಾಗಿದೆ. ಪ್ರೀತಿ ಶರ್ಮಾ ರೇಜರ್ ನಿಂದ ಆತನ ಗಂಟಲನ್ನು ಸೀಳಿ ಕೊಲೆ ಮಾಡಿದ್ದಳು.

ಆಗಸ್ಟ್ 5 ರಂದು ಇಬ್ಬರು ಮಹಿಳೆಯರನ್ನು ಕೊಲೆ ಮಾಡಿದ ಎರಡು ತಿಂಗಳ ನಂತರ ಕರ್ನಾಟಕ ಪೊಲೀಸರು ಸಿದ್ದಲಿಂಗಪ್ಪ (35) ಮತ್ತು ಚಂದ್ರಕಲಾ ಎಂಬವರನ್ನು ಬಂಧಿಸಿದ್ದರು. ಇಬ್ಬರೂ ಶವಗಳನ್ನು ಕತ್ತರಿಸಿದ ನಂತರ ಅವುಗಳನ್ನು ವಿಲೇವಾರಿ ಮಾಡಿದ್ದು, ವಿವಿಧ ಸ್ಥಳಗಳಲ್ಲಿನ ನೀರಿನ ಕಾಲುವೆಗಳಲ್ಲಿ ಎಸೆದಿದ್ದರು.

ಇದನ್ನೂ ಓದಿ: ದೇಶದ್ರೋಹದ ಕೆಲಸ.. ಪಾಕ್​ನ ಐಎಸ್​ಐಗೆ ಸೇನಾ ಮಾಹಿತಿ ರವಾನಿಸುತ್ತಿದ್ದ ಆರೋಪಿ ಅಂದರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.