ETV Bharat / bharat

ಕೋವಿಡ್​ ಕೇಸ್​ ತಗ್ಗಿದ್ರೂ ದೆಹಲಿಯಲ್ಲಿ ಮತ್ತೊಂದು ವಾರಕ್ಕೆ ಲಾಕ್‌ಡೌನ್ ವಿಸ್ತರಣೆ - ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ದೆಹಲಿಯಲ್ಲಿ ಕೊರೊನಾ ಸಾವು-ಸಾವು ಕಡಿಮೆಯಾಗಿದ್ದರೂ ಕೂಡ ಮತ್ತೆ ಒಂದು ವಾರದ ಅವಧಿಗೆ ಸಿಎಂ ಅರವಿಂದ್ ಕೇಜ್ರಿವಾಲ್ ಲಾಕ್​ಡೌನ್ ಅವಧಿ ವಿಸ್ತರಿಸಿದ್ದಾರೆ.

Delhi Lockdown Extended By Another Week To Check Covid Spread
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
author img

By

Published : May 16, 2021, 1:04 PM IST

ನವದೆಹಲಿ: ಉಲ್ಬಣಗೊಂಡಿದ್ದ ಕೊರೊನಾ ನಿಯಂತ್ರಿಸಲು ರಾಷ್ಟ್ರ ರಾಜಧಾನಿಯಲ್ಲಿ ಹೇರಲಾಗಿದ್ದ ಲಾಕ್​ಡೌನ್​ ಅನ್ನು ಮತ್ತೆ ಒಂದು ವಾರದ ಅವಧಿಗೆ ವಿಸ್ತರಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ.

"ಲಾಕ್​ಡೌನ್​ ನಂತರ ನಾವು ಉತ್ತಮ ಚೇತರಿಕೆಗೆ ಸಾಕ್ಷಿಯಾಗಿದ್ದೇವೆ. ಹಾಗಂತ ಕಳೆದ ಕೆಲವು ದಿನಗಳಲ್ಲಿ ಗಳಿಸಿದ ಲಾಭವನ್ನು ನಾವು ಕಳೆದುಕೊಳ್ಳಲು ಇಷ್ಟಪಡಲ್ಲ. ಪಾಸಿಟಿವ್​ ರೇಟ್ ಶೇ.11ಕ್ಕೆ ಇಳಿಕೆ ಕಂಡಿದೆಯಾದರೂ ಇದು​ ಶೇ.5ಕ್ಕೆ ಇಳಿಯಬೇಕಾಗಿದೆ. ಹೀಗಾಗಿ ಮುಂದಿನ ಸೋಮವಾರದ ವರೆಗೆ ವಿಸ್ತರಿಸಲಾಗಿದೆ" ಎಂದು ಸಿಎಂ ಕೇಜ್ರಿವಾಲ್​ ಹೇಳಿದ್ದಾರೆ.

ಇದನ್ನೂ ಓದಿ: ಶೇ.11ಕ್ಕೆ ಇಳಿದ ಕೋವಿಡ್​ ಪಾಸಿಟಿವ್ ರೇಟ್​.. ದೆಹಲಿಯಲ್ಲಿ ಆಕ್ಸಿಜನ್​ ಕಾನ್ಸಂಟ್ರೇಟರ್ ಬ್ಯಾಂಕ್​

ಏಪ್ರಿಲ್ 19ರಂದು ದೆಹಲಿಯಲ್ಲಿ ಲಾಕ್​ಡೌನ್ ಘೋಷಿಸಲಾಗಿತ್ತು. ಆ ಬಳಿಕ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗುತ್ತಲೇ ಬಂದಿದೆ. ಒಂದು ತಿಂಗಳ ಹಿಂದೆ 40 ಸಾವಿರ ಸನಿಹ ಕೇಸ್​ಗಳು ದಾಖಲಾಗುತ್ತಿದ್ದ ದೆಹಲಿಯಲ್ಲಿ ನಿನ್ನೆ 8,506 ಸೋಂಕಿತರು ಪತ್ತೆಯಾಗಿದ್ದಾರೆ. ಇದಕ್ಕೆ ಲಾಕ್​​ಡೌನ್​ ಮುಖ್ಯ ಕಾರಣ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.