ಮೆಹಬೂಬಾಬಾದ್: ಅಂಗನವಾಡಿ ಕೇಂದ್ರದಲ್ಲಿ ಸೋಮವಾರ 30ಕ್ಕೂ ಹೆಚ್ಚು ಹಾವಿನ ಮರಿಗಳು ಮತ್ತು ಎರಡು ತಲೆ ಹಾವುಗಳ ಕಾಣಿಸಿಕೊಂಡಿರುವ ಘಟನೆ ನೆಲ್ಲಿಕುದುರು ತಾಲೂಕಿನ ಬ್ರಾಹ್ಮಣಕೊತ್ತಪಲ್ಲಿ ಗ್ರಾಮದಲ್ಲಿ ನಡೆದಿದೆ.
ಅಂಗನವಾಡಿ ಕಾರ್ಯಕರ್ತೆ ಶ್ರೀಜ್ಯೋತಿ, ಆಯಾ ಲಚ್ಚಮ್ಮ ಮಕ್ಕಳು ಮತ್ತು ಗರ್ಭಿಣಿಯರಿಗಾಗಿ ಸರಕು ಹಂಚುವ ಸಲುವಾಗಿ ಕೇಂದ್ರದ ಬಾಗಿಲು ತೆಗೆದಿದ್ದಾರೆ. ಈ ವೇಳೆ, ಎರಡ್ಮೂರು ಹಾವಿನ ಮರಿಗಳು ಕಾಣಿಸಿಕೊಂಡಿದ್ದಾವೆ. ಕೂಡಲೇ ಅವರು ಸಹಾಯಕಕ್ಕಾಗಿ ಸ್ಥಳೀಯರನ್ನು ಕೂಗಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಚೀಲಗಳನ್ನು ತೆಗೆದು ಹಾಕಿದ್ದಾಗ ದೊಡ್ಡ ಸಂಖ್ಯೆಯಲ್ಲಿ ಹಾವಿನ ಮರಿಗಳು ಕಾಣಿಸಿವೆ. ಆದ್ರೆ ಅವುಗಳನ್ನು ರಕ್ಷಿಸುವುದನ್ನು ಬಿಟ್ಟು ಸ್ಥಳೀಯರು ನಿರ್ದಾಕ್ಷಿಣಿಯವಾಗಿ ಕೊಂದು ಹಾಕಿದ್ದಾರೆ.