ಭೋಪಾಲ್ : ಬೈಕ್ ಮೇಲೆ ಲವರ್ ಜೊತೆ ತೆರಳುತ್ತಿದ್ದ ಯುವತಿಯನ್ನು ಕಂಡ ಆಕೆಯ ಸಹೋದರ ಏಕಾಏಕಿ ಆ ಬೈಕ್ಗೆ ಡಿಕ್ಕಿ ಹೊಡೆದು ಅಪಘಾತ ನಡೆಸಿರುವ ಘಟನೆ ಅಯೋಧ್ಯಾ ನಗರದಲ್ಲಿ ನಡೆದಿದೆ. ಈ ಘಟನೆಯಿಂದಾಗಿ ಇಡೀ ನಗರವೇ ಬೆಚ್ಚಿ ಬಿದ್ದಿದೆ.
ಏನಿದು ಘಟನೆ? : ತನ್ನ ಪ್ರಿಯಕರನೊಂದಿಗೆ ಯುವತಿಯೊಬ್ಬಳು ಬೈಕ್ನಲ್ಲಿ ತೆರಳುತ್ತಿದ್ದಾಳೆ. ಟಾಟಾ ಏಸ್ನಲ್ಲಿ ಹೋಗುತ್ತಿದ್ದ ಯುವತಿಯ ಸಹೋದರ ಇವರಿಬ್ಬರು ಬೈಕ್ನಲ್ಲಿ ತೆರಳುತ್ತಿರುವುದನ್ನು ಗಮನಿಸಿದ್ದಾನೆ. ಇವರಿಬ್ಬರನ್ನು ನೋಡಿದ ಯುವತಿಯ ಸಹೋದರ ಕೋಪ ನೆತ್ತಿಗೇರಿದೆ.
ಓದಿ: ಮಗಳು Love Marriage ಆಗಿದ್ದಕ್ಕೆ ಮನೆಗೆ ಬೆಂಕಿ ಇಟ್ಟ ಅಪ್ಪ: ಹಸುಗೂಸು ಸೇರಿ 7 ಜನ ಸಜೀವ ದಹನ
ಅವರಿಬ್ಬರನ್ನು ನಿಲ್ಲಿಸಲು ಯುವತಿಯ ಸಹೋದರ ಎಷ್ಟೇ ಪ್ರಯತ್ನಿಸಿದ್ರೂ ವಿಫಲವಾಗಿದೆ. ಯುವತಿಯ ಸಹೋದರನನ್ನು ಕಂಡ ಆಕೆಯ ಪ್ರೇಮಿ ಬೈಕ್ ನಿಲ್ಲಿಸದೇ ಜೋರಾಗಿ ಚಲಾಯಿಸಲು ಮುಂದಾಗಿದ್ದಾನೆ. ಈ ವೇಳೆ ಯುವತಿಯ ಸಹೋದರ ಅವರಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ಅವರು ನೆಲಕ್ಕುರುಳಿದ್ದು, ಸುಮಾರು 10 ಮೀಟರ್ವರೆಗೆ ಟಾಟಾ ಏಸ್ ವಾಹನ ಬೈಕ್ ಅನ್ನು ಎಳೆದುಕೊಂಡು ಹೋಗಿದೆ.
ಯುವತಿಯನ್ನು ಬಿಟ್ಟು ಪ್ರೇಮಿ ಒಬ್ಬನೇ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಯುವತಿಯ ಸಹೋದರ ಆತನನ್ನು ಹಿಡಿದು ಥಳಿಸಿದ್ದಾನೆ. ಘಟನಾ ಸ್ಥಳದಲ್ಲಿ ಯುವತಿಯ ಸಹೋದರ ಮತ್ತು ಪ್ರಿಯಕರನ ನಡುವೆ ದೊಡ್ಡ ಮಟ್ಟದ ಜಗಳವೇ ನಡೆಯಿತು. ಸಂತ್ರಸ್ತ ಯುವಕನ ದೂರಿನ ಮೇರೆಗೆ ಪೊಲೀಸರು ಯುವತಿಯ ಸಹೋದರ ಮತ್ತು ಆತನ ಪಾಲುದಾರನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಅಲ್ಲದೆ ಲೋಡಿಂಗ್ ಆಟೋ ಚಾಲಕನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರೇಮಿಗಳಿಬ್ಬರು ಪ್ರಾಣಾಪಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.