ಕಾನ್ಪುರ: ಕುಡಿದ ಅಮಲಿನಲ್ಲಿ ಮದ್ಯ ಸಗಟು ಮಾರಾಟಗಾರನೊಬ್ಬ ಛಾವಣಿ ಮೇಲಿಂದ ಕೆಳಗೆ ಬಿದ್ದು ಸುಮಾರು 20 ನಿಮಿಷಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಡಿ ಪ್ರಾಣಬಿಟ್ಟ ಘಟನೆ ಜಿಲ್ಲೆಯ ಘಟಂಪುರದಲ್ಲಿ ನಡೆದಿದೆ. ಈ ಹೃದಯ ವಿದ್ರಾವಕ ಘಟನೆ ಮದ್ಯದಂಗಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಏನಿದು ಘಟನೆ: ಪತ್ತಾರ ಪಟ್ಟಣದ ನಿವಾಸಿ ಬಿಹಾರಿ ಲಾಲ್ ಎಂಬವರ ಪುತ್ರ 35 ವರ್ಷದ ಗೋವಿಂದ್ ಜೈಸ್ವಾಲ್ಗೆ ಇನ್ನು ಮದುವೆಯಾಗಿರಲಿಲ್ಲ. ಈತ ಜಹಾಂಗೀರಾಬಾದ್ ಗ್ರಾಮದಲ್ಲಿ ವಿದೇಶಿ ಮದ್ಯ ಸಗಟು ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದ. ಸೋಮವಾರ ರಾತ್ರಿ, ಗೋವಿಂದ್ ತನ್ನ ಸಹೋದ್ಯೋಗಿಗಳೊಂದಿಗೆ ಶಾಪ್ ಹೊರಗಿರುವ ಕ್ಯಾಂಟೀನ್‌ನಲ್ಲಿ ಮದ್ಯದ ಪಾರ್ಟಿ ಮಾಡಿದ್ದರು. ಈ ವೇಳೆ ಕ್ಯಾಂಟೀನ್ ನಿರ್ವಾಹಕರೂ ಜತೆಗಿದ್ದರು.
ಪಾರ್ಟಿ ಮುಗಿದ ತಕ್ಷಣ ಸುಮಾರು ಅರ್ಧಗಂಟೆ ಮದ್ಯದ ಅಮಲಿನಲ್ಲಿ ಗೋವಿಂದ್ ಕ್ಯಾಂಟಿನ್ ಹೊರಗೆ ಕುಳಿತರು. ಬಳಿಕ ಗೋವಿಂದ್ ಅಂಗಿ ಕಳಚಿ ನೆಲಕ್ಕೆ ಎಸೆದನು. ತಡರಾತ್ರಿ ಕ್ಯಾಂಟೀನ್ ನಿರ್ವಾಹಕ ಪ್ರಮೋದ್ ಅಂಗಡಿ ಬಂದ್ ಮಾಡಿದರು.
ಓದಿ: ಸಿಗ್ನಲ್ ಜಂಪ್ ಮಾಡಿ ಕಾರಿಗೆ ಡಿಕ್ಕಿ ಹೊಡೆದ ಚಿಗರಿ : ಸುಗಮ ಸಂಚಾರಕ್ಕಿಂತ ಅವಘಡವೇ ಹೆಚ್ಚು
ಪ್ರಮೋದ್ ಮತ್ತು ಗೋವಿಂದ್ ಮದ್ಯದ ಅಮಲಿನಲ್ಲಿ ಕ್ಯಾಂಟೀನ್ ಟೆರೇಸ್ ಹತ್ತಿದ್ದಾರೆ. ಈ ವೇಳೆ, ಗೋವಿಂದ್ಗೆ ನಶೆ ಹೆಚ್ಚಾಗಿದೆ. ಛಾವಣಿಯ ನಾಲ್ಕೂ ಮೂಲೆಯನ್ನ ಸುತ್ತುತ್ತಿದ್ದ ಗೋವಿಂದ್ ಕೆಳಗಿಳಿಯಲು ಯತ್ನಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಆಯಾ ತಪ್ಪಿ ಛಾವಣಿ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ, ಸುಮಾರು 20 ನಿಮಿಷಗಳ ಕಾಲ ಸಾವು - ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ಗೋವಿಂದ್ ಕೊನೆಗೂ ಪ್ರಾಣ ಬಿಟ್ಟಿದ್ದಾರೆ. ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಸದ್ಯ ಇದರ ತನಿಖೆ ನಡೆಯುತ್ತಿದೆ ಎಂದು ಘಟಂಪುರ ಎಸ್‌ಎಚ್‌ಒ ಸುನೀಲ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಕೆಲವರು ಮನೆಗೆ ಬಂದಿದ್ದರು. ನಿಮ್ಮ ಮಗ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಿದರು. ಸುದ್ದಿ ತಿಳಿದ ಕೂಡಲೇ ನಾನು ಸ್ಥಳಕ್ಕೆ ತಲುಪಿದಾಗ ಪೊಲೀಸರು ಮೃತದೇಹವನ್ನು ಠಾಣೆಗೆ ತೆಗೆದುಕೊಂಡು ಹೋದರು ಅಂತಾ ಕೆಲವರು ಮಾಹಿತಿ ನೀಡಿದರು. ಬಳಿಕ ನಾನು ಹೊರ ಠಾಣೆಗೆ ತೆರಳಿದ್ದಾಗ ನನ್ನ ಮಗನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾನ್ಪುರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಕೊನೆಗೂ ನಾನು ನನ್ನ ಮಗನ ಮೃತ ದೇಹವನ್ನು ನೋಡಲಾಗಲಿಲ್ಲ ಎಂದು ಮದ್ಯ ಮಾರಾಟಗಾರ ಗೋವಿಂದ್ ಜೈಸ್ವಾಲ್ ಅವರ ತಾಯಿ ರಾಮಕುಮಾರಿ ರೋದಿಸುತ್ತಾ ಹೇಳಿದರು.