ಮೆಡ್ಚಲ್ (ತೆಲಂಗಾಣ): ವೇಗವಾಗಿ ಬಂದ ಟ್ರ್ಯಾಕ್ಟರ್ವೊಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಸವಾರನ ಮೇಲೆ ಹರಿದ ಘಟನೆ ಮೆಡ್ಚಲ್ ಜಿಲ್ಲೆಯ ಪೇಟ್ ಬಶೀರಾಬಾದ್‌ನಲ್ಲಿ ನಡೆದಿದೆ.
ರಾಂಗ್ ರೂಟ್ನಲ್ಲಿ ಬಂದ ಟ್ರ್ಯಾಕ್ಟರ್ ಚಾಲಕ, ಬೈಕ್ಗೆ ಡಿಕ್ಕಿ ಹೊಡೆಸಿದ್ದಾನೆ. ಜತೆಗೆ ಬೈಕ್ ಸವಾರನ ಮೇಲೆ ಟ್ರ್ಯಾಕ್ಟರ್ ಹರಿಸಿದ್ದಾನೆ. ಘಟನೆಯಲ್ಲಿ ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿದ್ದಾನೆ.
ಬಳಿಕ ಚಾಲಕ ಪರಾರಿಯಾಗಲು ಯತ್ನಿಸಿದ್ದ ವೇಳೆ, ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಮತ್ತೋರ್ವ ಬೈಕ್ ಸವಾರ ಟ್ರ್ಯಾಕ್ಟರ್‌ನ ಓವರ್ ಟೇಕ್ ಮಾಡಿ ಚಾಲಕನನ್ನು ತಡೆದಿದ್ದಾನೆ.
ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಟ್ರ್ಯಾಕ್ಟರ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತ ಮದ್ಯ ಸೇವಿಸಿರುವುದು ಗೊತ್ತಾಗಿದೆ.
ಅಲ್ಲದೇ ಆರೋಪಿ ಹಾಗೂ ಸಂತ್ರಸ್ತರಿಬ್ಬರಿಗೂ ಡ್ರೈವಿಂಗ್ ಲೈಸೆನ್ಸ್ ಇಲ್ಲದಿರುವುದು ತಿಳಿದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.