ಜಮ್ಶೆಡ್‌ಪುರ : ಮನುಷ್ಯರಷ್ಟೇ ಬೀದಿಗೆ ಬಂದು ಜಗಳವಾಡ್ತಾರೆ ಅಂತ ಅನ್ಕೊಂಡ್ರೆ, ಜಮ್ಶೆಡ್‌ಪುರದಲ್ಲಿ ನಾಲ್ಕು ಮೈನಾ ಹಕ್ಕಿಗಳು ಬೀದಿ ಜಗಳವಾಡಿದ ಅಪರೂಪದ ದೃಶ್ಯ ಕಂಡು ಬಂತು.
ನಗರದ ಜಿಲ್ಲಾಧಿಕಾರಿ ಕಚೇರಿಯ ಪ್ರವೇಶದ್ವಾರದ ಬಳಿ ಈ ಒಂದು ವಿಚಿತ್ರ ಘಟನೆ ನಡೆದಿದೆ. ನಾಲ್ಕು ಮೈನಾ ಪಕ್ಷಿಗಳು ಪರಸ್ಪರ ಜಗಳವಾಡಿ ನೆಲದ ಮೇಲೆ ಬಿದ್ದಿವೆ. ಸುತ್ತಮುತ್ತ ವಾಹನ ಸಂಚಾರವಿದ್ದರೂ ಹೆದರದ ಪಕ್ಷಿಗಳು ಬಲಾಬಲ ಪ್ರದರ್ಶನದಲ್ಲಿ ತೊಡಗಿದ್ದವು.
ಮೈನಾ ಹೋರಾಟವನ್ನು ನೋಡಲು ಜನರು ಮುಗಿಬಿದ್ದಿದ್ದರು. ಜನರ ಶಬ್ದ ಕೇಳಿದ ಹಕ್ಕಿಗಳು ಹಾರಿ ಹೋಗಿವೆ. ಸುಮಾರು 10 ನಿಮಿಷಗಳ ಕಾಲ ಹೋರಾಟದ ವಿಡಿಯೋವನ್ನು ಜನರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದ್ದಾರೆ.