ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಬೆಳ್ಳಿ ಪದಕ ಗೆದ್ದಿರುವ ಮೀರಾಬಾಯಿ ಚನು ಹೊಸ ಇತಿಹಾಸ ರಚನೆ ಮಾಡಿದ್ದಾರೆ. ಈಗಾಗಲೇ ಕೋಟ್ಯಂತರ ಜನರು ಅವರ ಸಾಧನೆಯಿಂದ ಸ್ಪೂರ್ತಿ ಪಡೆದುಕೊಂಡಿದ್ದಾರೆ. ಇದರ ಮಧ್ಯೆ ಪುಟ್ಟ ಬಾಲಕಿಯೋರ್ವಳು ಚನು ರೀತಿಯಲ್ಲೇ ವೇಟ್ ಲಿಫ್ಟಿಂಗ್ ಅನುಕರಣೆ ಮಾಡಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
-
Junior @mirabai_chanu this s called the inspiration pic.twitter.com/GKZjQLHhtQ
— sathish sivalingam weightlifter (@imsathisholy) July 26, 2021 " class="align-text-top noRightClick twitterSection" data="
">Junior @mirabai_chanu this s called the inspiration pic.twitter.com/GKZjQLHhtQ
— sathish sivalingam weightlifter (@imsathisholy) July 26, 2021Junior @mirabai_chanu this s called the inspiration pic.twitter.com/GKZjQLHhtQ
— sathish sivalingam weightlifter (@imsathisholy) July 26, 2021
ಕಾಮನ್ವೆಲ್ತ್ ಗೇಮ್ಸ್ನ ಬಂಗಾರದ ಪದಕ ವಿಜೇತ ಸತೀಶ್ ಶಿವಲಿಂಗಂ ತಮ್ಮ ಟ್ವಿಟರ್ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮೀರಾಬಾಯಿ ಚನು ರೀತಿಯಲ್ಲೇ ಪುಟ್ಟ ಬಾಲಕಿ ವೇಟ್ ಲಿಫ್ಟಿಂಗ್ ಮಾಡಿದ್ದಾರೆ. 30 ಸೆಕೆಂಡ್ಗಳ ವಿಡಿಯೋ ಕ್ಲಿಪ್ ಇದಾಗಿದೆ. ವೇಟ್ ಲಿಫ್ಟಿಂಗ್ ಮಾಡಿದ ಬಳಿಕ ಸಂಭ್ರಮಾಚರಣೆ ಸಹ ಮಾಡಿದೆ. ಮಗುವಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಪುಟಾಣಿ ಮೀರಾಬಾಯಿ ಎಂದು ಕರೆಯುತ್ತಿದ್ದಾರೆ.
ಮೀರಾಬಾಯಿ ಚನು ಫೈನಲ್ ವೇಳೆ ಯಾವ ರೀತಿಯಾಗಿ ವೇಟ್ ಲಿಫ್ಟಿಂಗ್ ಮಾಡಿದ್ದರೂ, ಅದೇ ರೀತಿಯಲ್ಲಿ ಪುಟ್ಟ ಬಾಲಕಿ ಕೂಡ ಅನುಕರಣೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿರುವ ಕೆಲ ನಿಮಿಷಗಳಲ್ಲೇ 4 ಲಕ್ಷಕ್ಕೂ ಅಧಿಕ ವೀಕ್ಷಣೆಗೊಳಗಾಗಿದ್ದು, 39 ಸಾವಿರ ಲೈಕ್ಸ್ ಬಂದಿವೆ.
2000ರಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಒಲಿಂಪಿಕ್ಸ್ನಲ್ಲಿ ಭಾರತದ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದಿದ್ದರು. ಇದಾದ ಬಳಿಕ ಮೀರಾಬಾಯಿ ಚನು ಭಾರತಕ್ಕೆ ವೇಟ್ ಲಿಫ್ಟಿಂಗ್ನಲ್ಲಿ ಬೆಳ್ಳಿ ತಂದು ಕೊಟ್ಟಿದ್ದಾರೆ.